ಹಿಂದೂ ವಿರೋಧಿ ಸ್ಪೀಕರ್ ಮುಂದೆ ಪ್ರಮಾಣವಚನ ಸ್ವೀಕರಿಸಲ್ಲ ಎಂದ ರಾಜಾ ಸಿಂಗ್!

Published : Jan 18, 2019, 03:49 PM IST
ಹಿಂದೂ ವಿರೋಧಿ ಸ್ಪೀಕರ್ ಮುಂದೆ ಪ್ರಮಾಣವಚನ ಸ್ವೀಕರಿಸಲ್ಲ ಎಂದ ರಾಜಾ ಸಿಂಗ್!

ಸಾರಾಂಶ

ಮತ್ತೆ ಘರ್ಜಿಸಿದ ತೆಲಂಗಾಣದ ಏಕೈಕ ಬಿಜೆಪಿ ಶಾಸಕ| ಪ್ರಮಾಣವಚನ ಸ್ವೀಕರಿಸಲು ನಿರಾಕರಿಸಿದ ರಾಜಾ ಸಿಂಗ್| ಎಐಎಂಐಎಂ ಶಾಸಕ ಮಮ್ತಾಜ್ ಅಹ್ಮದ್ ಖಾನ್ ಹಂಗಾಮಿ ಸ್ಪೀಕರ್| ಹಿಂದೂ ವಿರೋಧಿ ಸ್ಪೀಕರ್ ಮುಂದೆ ಪ್ರಮಾಣವಚನ ಸ್ವೀಕರಿಸಲ್ಲ ಎಂದ ರಾಜಾ ಸಿಂಗ್| ವಂದೇ ಮಾತರಂ ಹಾಡಿದರಷ್ಟೇ ಪ್ರಮಾಣವಚನ ಸ್ವೀಕಾರ ಎಂದ ರಾಜಾ ಸಿಂಗ್

ಹೈದರಾಬಾದ್(ಜ.18): ಉಗ್ರ ಹಿಂದೂವಾದಿ, ಗೋರಕ್ಷಕ ಎಂದು ಕರೆಸಿಕೊಳ್ಳುವ ತೆಲಂಗಾಣದ ಏಕೆಐಕ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್‌ ಮತ್ತೆ ಸುದ್ದಿಯಲ್ಲಿದ್ದಾರೆ.

ನಿನ್ನೆಯಷ್ಟೇ ಎಐಎಂಐಎಂ ಶಾಸಕ ಮಮ್ತಾಜ್ ಅಹ್ಮದ್ ಖಾನ್ ತೆಲಂಗಾಣದ ಹಂಗಾಮಿ ಸಭಾಪತಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅಹ್ಮದ್ ಖಾನ್ ಹಿಂದೂ ವಿರೋಧಿ ಒವೈಸಿ ಸಹೋದರರ ಪಕ್ಷದವರಾಗಿದ್ದು, ಅವರೆದುರು ತಾವು ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂದು ರಾಜಾ ಸಿಂಗ್ ಹೇಳಿದ್ದಾರೆ.

ದೇಶ ವಿರೋಧಿ ಮತ್ತು ಹಿಂದೂ ವಿರೋಧಿ ಎಐಎಂಐಎಂ ಪಕ್ಷದ ಹಂಗಾಮಿ ಸ್ಪೀಕರ್ ಉಪಸ್ಥಿತಿಯಲ್ಲಿ ತಾವು ಯಾವುದೇ ಕಾರಣಕ್ಕೂ ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂದು ರಾಜಾ ಸಿಂಗ್ ಶಪಥ ಮಾಡಿದ್ದರು.

ಅಹ್ಮದ್ ಖಾನ್ ಅವರ ಪಕ್ಷ ಹಿಂದೂಗಳ ಭಾವನೆ, ಸಂಸ್ಕೃತಿಗೆ ಗೌರವ ಕೊಡುವುದಿಲ್ಲ ಮತ್ತು ಆ ಪಕ್ಷದ ನಾಯಕರು ಸದಾ ಹಿಂದೂಗಳನ್ನು ಸರ್ವನಾಶ ಮಾಡುತ್ತೇವೆ ಎಂದು ಹೇಳುತ್ತಿರುತ್ತಾರೆ ಎಂದು ರಾಜಾ ಸಿಂಗ್ ಆರೋಪಿಸಿದ್ದಾರೆ.

ಒವೈಸಿ ಸಹೋದರರು ಮತ್ತು ಎಐಎಂಐಎಂ ಪಕ್ಷದವರು ಭಾರತ್ ಮಾತಾ ಕಿ ಜೈ ಮತ್ತು ವಂದೇ ಮಾತರಂ ಹಾಡಲೊಪ್ಪಿದರೆ ತಾವು ಈಗಲೇ ಹಂಗಾಮಿ ಸ್ಪೀಕರ್ ಮುಂದೆ ಪ್ರಮಾಣವಚನ ಸ್ವೀಕರಿಸುವುದಾಗಿ ರಾಜಾ ಸಿಂಗ್ ಸ್ಪಷ್ಟಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ ಎಂದ ಪಾಕಿಸ್ತಾನ ಸೇನೆ, ಕೋಲಾಹಲ ಶುರು