DKSಗೆ ಸಂಕಟ, ಟಾಪ್‌ಲೆಸ್ ನಟಿಗೆ ಕಾಮೆಂಟ್ ವಿಪರೀತ; ಇಲ್ಲಿವೆ ಸೆ.13ರ ಟಾಪ್ 10 ಸುದ್ದಿ!

By Web DeskFirst Published Sep 13, 2019, 5:05 PM IST
Highlights

ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಡಿಕೆಶಿ ಜೊತೆಗೆ  ಕಾಂಗ್ರೆಸ್ ಕೂಡ ಆತಂಕ ಎದುರಿಸುತ್ತಿದೆ. ಇತ್ತ ರಾಜ್ಯದಲ್ಲಿ ಸಿಎಂ ಯುಡಿಯೂರಪ್ಪ ವಿರುದ್ಧ ಜೆಡಿಎಸ್‌ನ ರೇವಣ್ಣ ವಾಕ್ಸಮರ ಮುಂದುವರಿದಿದೆ. ರಾಜಕೀಯ ಬೆಳವಣಿಗೆಗಳ ಜೊತೆಗೆ ಬಾಲಿವುಡ್ ನಟಿ ಮಲೈಕಾ ಅರೋರ ಟಾಪ್‌ಲೆಸ್ ಫೋಟೋ ವೈರಲ್ ಆಗಿದೆ. ಸೆ.13ರಂದು ಹಲವು ಸುದ್ದಿಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದೆ. ಇಂದಿನ ಟಾಪ್ 10  ಸುದ್ದಿಗಳ ವಿವರ ಇಲ್ಲಿವೆ.

1) ಡಿಕೆಶಿ ಕೇಸ್: ಕಾಂಗ್ರೆಸ್‌ಗೂ ಅಕ್ರಮ ಹಣದ ನಂಟು? ನೋಟಿಸ್ ಸಾಧ್ಯತೆ

ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರು ಇಡಿ ವಶದಲ್ಲಿದ್ದಾರೆ. ಮತ್ತೊಂದೆಡೆ ಇಡಿ ಅಧಿಕಾರಿಗಳು ಡಿಕೆಶಿ ಪುತ್ರಿ ಐಶ್ವರ್ಯಗೂ ಸಮನ್ಸ್ ನೀಡಿದ್ದು, ನಿನ್ನೆ (ಗುರುವಾರ) ಸುದೀರ್ಘ ವಿಚಾರಣೆ ನಡೆಸಿದ್ದಾರೆ. ಆದ್ರೆ, ಇದೀಗ ಡಿಕೆಶಿ ತಾಯಿ ಗೌರಮ್ಮ ಅವರ ವಿಚಾರಣೆ ಅವಶ್ಯಕತೆ ಇರುವುದರಿಂದ ಅವರಿಗೆ ಇಡಿ ಅಧಿಕಾರಿಗಳು ಸಮನ್ಸ್ ನೀಡುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲದೇ ಇದು ಡಿಕೆಶಿ ಹೈಕಮಾಂಡ್‌ಗೂ ನೋಟಿಸ್ ಜಾರಿ ಮಾಡುವ ಸಾಧ್ಯತೆಗಳಿವೆ.

2) ಸ್ವಾಮೀಜಿಗಳ ಫೋನ್‌ ಕದ್ದಾಲಿಕೆ ಮಾಡಿತ್ತೇ ಎಚ್‌ಡಿಕೆ ಸರ್ಕಾರ?

ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಉದ್ಯಮಿಗಳ ಫೋನ್‌ ಮಾತ್ರವಲ್ಲ, ನಾಡಿನ ಪ್ರಮುಖ ಮಠಾಧೀಶರ ಮೊಬೈಲ್‌ಗಳನ್ನೂ ಕದ್ದಾಲಿಕೆ ಮಾಡಲಾಗಿತ್ತು ಎನ್ನುವ ವಿಚಾರ ಬೆಳಕಿಗೆ ಬಂದಿದೆ. 

3) ಸೋದರಳಿಯನಿಗೆ ‘ಟಕ್ಕರ್’ ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್!

ದರ್ಶನ್‌ ಸಂಬಂಧಿ ಮನೋಜ್‌ ಕುಮಾರ್‌ ನಾಯಕರಾಗಿ ಅಭಿನಯಿಸಿರುವ ‘ಟಕ್ಕರ್‌’ ಚಿತ್ರ ರಿಲೀಸ್‌ಗೆ ರೆಡಿ ಆಗಿದೆ. ರಿಲೀಸ್‌ ಪೂರ್ವಭಾವಿಯಾಗಿ ಚಿತ್ರತಂಡ ಈಗ ಆಡಿಯೋ ಲಾಂಚ್‌ ಮೂಲಕ ಸದ್ದು ಮಾಡಿದೆ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಆಡಿಯೋ ಮತ್ತು ಟ್ರೇಲರ್‌ ಲಾಂಚ್‌ ಮಾಡಿದ್ದಾರೆ.

4) 45 ವರ್ಷದ ಖ್ಯಾತ ನಟಿ ಟಾಪ್‌ಲೆಸ್ ಪೋಟೋ ವೈರಲ್!


ಬಾಲಿವುಡ್ ಬಳಕುವ ಬಳ್ಳಿ ಮಲೈಕಾ ಅರೋರಾ  ಬ್ಲ್ಯಾಕ್ ಅ್ಯಂಡ್ ವೈಟ್ ಬೀಚ್ ಲುಕ್‌ನ ಬಿಕನಿ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಕಾಳ್ಗಿಚ್ಚಿನಂತೆ ಸ್ಪ್ರೆಡ್ ಆಗುತ್ತಿದೆ. ಅದರಲ್ಲೂ ಫೋಟೋಗೆ ಬಂದ ಕಾಮೆಂಟ್ ನೋಡಿದರೆ ಬೆಚ್ಚಿ ಬೆರಗಾಗೋದು ಗ್ಯಾರಂಟಿ...

5) ಹಾಂಕಾಂಗ್ ಮಾಜಿ ನಾಯಕ ಭಾರತಕ್ಕೆ; ಹೊಸ ಕರಿಯರ್ ಆರಂಭಕ್ಕೆ ಸಿದ್ಧತೆ!

ಭಾರತದ ಮೂಲದ ಅಂಶುಮಾನ್ ರಾಥ್, ಹಾಂಕಾಂಗ್ ಕ್ರಿಕೆಟ್ ತಂಡದ ನಾಯಕನಾಗಿ ವಿಶ್ವದ ಗಮನಸೆಳೆದಿದ್ದರು. 2018ರ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ವಿರುದ್ಧ   96 ಎಸೆತದಲ್ಲಿ 73 ರನ್ ಸಿಡಿಸಿ ಅಬ್ಬರಿಸಿದ್ದರು. ಈ ಪ್ರದರ್ಶನ ಅಂಶುಮಾನ್ ರಾಥ್ ಕರಿಯರ್‌ಗೆ ಹೊಸ ತಿರುವು ನೀಡಿತು. ಬಳಿಕ ನಾಯಕತ್ವದಿಂದ ಕೆಳಗಿಳಿದ ಅಂಶುಮಾನ್ ಇದೀಗ ಭಾರತದಲ್ಲಿ ಕ್ರಿಕೆಟ್ ಕರಿಯರ್ ಆರಂಭಿಸಲು ಸಿದ್ದತೆ ನಡೆಸಿದ್ದಾರೆ.

6) ಪ್ಯಾರಿ​ಸ್‌​ನ​ಲ್ಲಿ ಪ್ರಜ್ಞೆಗೆ ಮರ​ಳಿದ ಶುಮಾ​ಕ​ರ್‌!

ಏಳು ಬಾರಿ ಫಾರ್ಮುಲಾ 1 ವಿಶ್ವ ಚಾಂಪಿ​ಯನ್‌ ಮೈಕಲ್‌ ಶುಮಾ​ಕರ್‌ ಕೋಶ ಚಿಕಿತ್ಸೆ ಬಳಿಕ ಪ್ರಜ್ಞೆಗೆ ಮರ​ಳಿ​ದ್ದಾ​ರೆ. ಇಲ್ಲಿನ ಆಸ್ಪ​ತ್ರೆ​ಯೊಂದಕ್ಕೆ ಸೋಮ​ವಾರ ಶುಮಾ​ಕ​ರ್‌​ರ​ನ್ನು ದಾಖ​ಲಿ​ಸಿದ್ದು, ಕೋಶ ಚಿಕಿ​ತ್ಸೆ (ಸ್ಟೆಮ್‌ ಸೆಲ್‌ ಥೆರ​ಪಿ)ಯನ್ನು ನೀಡ​ಲಾ​ಗಿ​ತ್ತು. 

7) ನಕಲಿ BPL ಕಾರ್ಡ್ ವಾಪಸ್ ಮಾಡದಿದ್ದಲ್ಲಿ ಕೇಸ್ : ಎಚ್ಚರ!

ಸ್ಥಿತಿವಂತ ಕುಟುಂಬದವರು ಸರ್ಕಾರಕ್ಕೆ ತಪ್ಪು ಮಾಹಿತಿಯನ್ನು ಒದಗಿಸುವ ಮೂಲಕ ಅನಧಿಕೃತ ಬಿಪಿಎಲ್‌ ಪಡಿತರ ಚೀಟಿಯನ್ನು ಹೊಂದಿರುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಸರ್ಕಾರಕ್ಕೆ ಬಿಪಿಎಲ್‌ ಪಡಿತರ ಚೀಟಿಯನ್ನು ಹಿಂದಿರುಗಿಸುವುದು ಅವಶ್ಯಕವಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.

8) ಯಡಿಯೂರಪ್ಪ ಅವರಂಥವರನ್ನು ಬಹಳಷ್ಟು ಕಂಡಿದ್ದೇನೆ, ಇದು ಬಹಳ ಕಾಲ ನಡೆಯಲ್ಲ'

ಯಡಿಯೂರಪ್ಪ ಅವರು ಜೆಡಿಎಸ್‌ ವಿರುದ್ಧ ದ್ವೇಷ ರಾಜಕಾರಣ ಆರಂಭಿಸಿದ್ದು, ಇದು ಬಹಳಷ್ಟುದಿನ ನಡೆಯುವುದಿಲ್ಲ. ಯಡಿಯೂರಪ್ಪ ಅಂತಹವರನ್ನು ಬಹಳಷ್ಟುಮಂದಿಯನ್ನು ಕಂಡಿದ್ದೇನೆ ಎಂದು ಜೆಡಿಎಸ್‌ ಮುಖಂಡರಾದ ಮಾಜಿ ಸಚಿವ ಎಚ್‌.ಡಿ. ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

9) ವಿಕ್ರಂ ಲ್ಯಾಂಡರ್‌ ಸಂಪರ್ಕಿಸಲು ಇಸ್ರೋ ಹೇಗೆ ಯತ್ನಿಸ್ತಿದೆ? 14 ದಿನ ಡೆಡ್‌ಲೈನ್ ಯಾಕೆ?

ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ಯೋಜನೆಗೆ ಕೇವಲ 400 ಮೀ. ಅಂತರದಲ್ಲಿ ಹಿನ್ನಡೆಯಾಗಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್‌ಲ್ಯಾಂಡ್‌ ಆಗಬೇಕಿದ್ದ ವಿಕ್ರಮ್‌ ಲ್ಯಾಂಡರ್‌ ಬೇರೆ ಪಥದಲ್ಲಿ ಸಾಗಿ 400 ಮೀ. ದೂರದಲ್ಲಿ ಹಾರ್ಡ್‌ಲ್ಯಾಂಡ್‌ ಆಗಿದೆ ಎಂದು ಇಸ್ರೋ ಹೇಳಿದೆ. ಹಾಗಾಗಿ ವಿಕ್ರಮ್‌ ಸಂಪರ್ಕಕ್ಕೆ ಇಸ್ರೋ ಶತಪ್ರಯತ್ನ ನಡೆಸುತ್ತಿದೆ.

10) Fact Check| ಸ್ವಿಸ್‌ ಬ್ಯಾಂಕ್‌ ಕಾಳಧನಿಕರ ಪಟ್ಟಿಬಿಡುಗಡೆ ಮಾಡಿದ ವಿಕಿಲೀಕ್ಸ್‌!

ಪ್ರಸಿದ್ಧ ತನಿಖಾ ಸಂಸ್ಥೆಯಾದ ವಿಕಿಲೀಕ್ಸ್‌ ಸ್ವಿಸ್‌ ಬ್ಯಾಂಕ್‌ನಲ್ಲಿ ಹಣ ಕೂಡಿಟ್ಟ ಕಾಳಧನಿಕ ಭಾರತೀಯರ ಹೆಸರನ್ನು ಪಟ್ಟಿಮಾಡಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಆದರೆ ನಿಜಕ್ಕೂ ವಿಕಿಲೀಕ್ಸ್‌ ಕಾಳಧನಿಕರ ಪಟ್ಟಿಮಾಡಿದೆಯೇ ಎಂದು ಪರಿಶೀಲನೆ ಮಾಡಿದಾಗ ಅಚ್ಚರಿ ಅಂಶ ಬಯಲಾಗಿದೆ.

click me!