ಎಸ್‌ಎಂ ಕೃಷ್ಣರಿಗೆ ʼಡ್ಯಾಡಿʼ ಅಂತಿದ್ರಂತೆ ಡಿಕೆಶಿ ಮಗಳು ಐಶ್ವರ್ಯಾ, ಹೌ ಕ್ಯೂಟ್‌ ಅಂತಿದಾರೆ ಜನ

By Bhavani Bhat  |  First Published Dec 14, 2024, 4:51 PM IST

ಇತ್ತೀಚೆಗೆ ತೀರಿಕೊಂಡ ಎಸ್‌ಎಂ ಕೃಷ್ಣ ಅವರ ಫ್ಯಾಮಿಲಿಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರ ಕುಟುಂಬಕ್ಕೂ ಇರುವ ಬಾಂಧವ್ಯದ ಬಗ್ಗೆ ನಾಡಿನ ಜನತೆಗೆ ಗೊತ್ತೇ ಇದೆ. ಈ ಬಾಂಧವ್ಯದ ಮಾಧುರ್ಯವನ್ನು ಮತ್ತಷ್ಟು ತಿಳಿಸೋ ಒಂದು ವಿಡಿಯೋ ಇಲ್ಲಿದೆ. 


ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ, ಇತ್ತೀಚೆಗೆ ಇನ್ನಿಲ್ಲವಾದ ಎಸ್‌ಎಂ ಕೃಷ್ಣ ಅವರ ಫ್ಯಾಮಿಲಿಗೂ ಡಿಸಿಎಂ ಡಿಕೆ ಶಿವಕುಮಾರ್‌ ಅವರ ಫ್ಯಾಮಿಲಿಗೂ ಮಧುರವಾದ ನಂಟು ಇದೆ. ಡಿಕೆ ಶಿವಕುಮಾರ್‌ ಅವರ ಪುತ್ರಿ ಐಶ್ವರ್ಯ, ಕೃಷ್ಣ ಅವರ ಅಳಿಯ ಸಿದ್ಧಾರ್ಥ ಅವರ ಪುತ್ರ ಅಮರ್ತ್ಯ ಅವರ ಪತ್ನಿ. ಕೆಲವೇ ವರ್ಷಗಳ ಹಿಂದೆ ಇವರ ಮದುವೆ ಗ್ರ್ಯಾಂಡ್‌ ಆಗಿ ನೆರವೇರಿತ್ತು. ಅದಕ್ಕೂ ಒಂದು ವರ್ಷ ಮುನ್ನ ಕಾಫೀ ಡೇ ಸಿದ್ಧಾರ್ಥ ಅವರ ಸಾವು ಸಂಭವಿಸಿತ್ತು. ಇದರಿಂದ ನೊಂದಿದ್ದ ಕೃಷ್ಣ ಅವರನ್ನು ಡಿಕೆಶಿ ಫ್ಯಾಮಿಲಿ ಸಂತೈಸಿತ್ತು. ನಂತರ ಎರಡೂ ಕುಟುಂಬಗಳಿಗೂ ಬೀಗತನ ಉಂಟಾಗಿತ್ತು. 

ಎಸ್‌ಎಂ ಕೃಷ್ಣ ಅವರ ಬಗ್ಗೆ ಡಿಕೆಶಿ ಪುತ್ರಿ ಐಶ್ವರ್ಯ ಒಂಥರಾ ಅಕ್ಕರೆ, ಪ್ರೀತಿ, ಗೌರವ. ಕೃಷ್ಣ ಅವರು ಸಂಬಂಧದಲ್ಲಿ ಐಶ್ವರ್ಯಗೆ ತಾತ ಆಗಬೇಕಿದ್ದರೂ, ಅವರನ್ನು ಐಶ್ವರ್ಯ ʼಡ್ಯಾಡಿʼ ಅಂತಲೇ ಕರೆಯೋದಂತೆ. ಅಷ್ಟೊಂದು ನಿಕಟತೆ. ಈ ಬಗ್ಗೆ ಒಂದು ವಿಡಿಯೋದಲ್ಲಿ ಐಶ್ವರ್ಯ ಮಾತನಾಡಿದ್ದು ಅದೀಗ ವೈರಲ್‌ ಆಗಿದೆ. ಅದರಲ್ಲಿ ತಮಗೂ ಕೃಷ್ಣ ಅವರಿಗೂ ಇದ್ದ ಆತ್ಮೀಯ ಬಾಧವ್ಯದ ರೀತಿಯನ್ನು ಅವರು ಬಿಚ್ಚಿಟ್ಟಿದ್ದಾರೆ.  

Tap to resize

Latest Videos

"ನಾನವರನ್ನು ಡ್ಯಾಡಿ ಅಂತ ಕರೀತಿದ್ದೆ. ನಾವು ಎಷ್ಟು ಸಲ ಜೊತೆಗೆ ಊಟ ಮಾಡಿದ್ದೇವೆಂದರೆ, ನಮ್ಮಪ್ಪನ ಜೊತೆಗೂ ಅಷ್ಟೊಂದು ಬಾರಿ ಕುಳಿತು ಊಟ ಮಾಡಿಲ್ಲ. ಅವರಿಂದ ಎಷ್ಟೊಂದು ಕಲಿತಿದೀನಿ. ಅವರ ತಾಳ್ಮೆ, ಅವರು ನಡೆದುಕೊಳ್ಳುವ ರೀತಿ, ನನಗೆ ಅದು ಬೇರೆ ಕಡೆ ಎಲ್ಲಿ ಸಿಗುತ್ತಿತ್ತೋ ಗೊತ್ತಿಲ್ಲ. ಒಂದು ಕುಟುಂಬಕ್ಕೆ ಮದುವೆಯಾಗಿ ಹೋದರೆ, ಒಬ್ಬ ವ್ಯಕ್ತಿಯನ್ನಷ್ಟೇ ಮದುವೆ ಆಗುತ್ತಿರುವುದಲ್ಲ, ಆ ಫ್ಯಾಮಿಲಿಯನ್ನೇ ಸೇರಿಕೊಂಡಿರುತ್ತೀವಿ. ಆ ಸಂಪೂರ್ಣತೆ ನಾನು ಅವರೊಂದಿಗೆ ಅನುಭವಿಸಿದೀನಿ" ಎಂದಿದ್ದಾರೆ ಐಶ್ವರ್ಯ. 

"ಎಸ್ ಎಂ ಕೃಷ್ಣ ಅವ್ರಿಂದ ನಾನು ಬಹಳಷ್ಟು ಕಲ್ತಿದ್ದೀನಿ. ಅವರ ಸ್ಥಾನವನ್ನು ಬೇರೆ ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಅವರೊಂದಿಗೆ ಕಳೆದ ನೆನಪುಗಳು, ಕ್ಷಣಗಳು ಈಗಲೂ ನನ್ನ ಕಣ್ಣ ಮುಂದೆ ಹಾದು ಹೋಗುತ್ತಿದೆ‌. ನಿಮ್ಮ ಹೆಜ್ಜೆ ಗುರುತುಗಳಲ್ಲಿ ನಾವು ಹೆಮ್ಮೆಯಿಂದ ನಡೆಯುತ್ತೇವೆ. ನಮಗೆ ಜಗತ್ತು ಹಾಗೂ ಜೀವನದ ಹಲವಾರು ಪಾಠಗಳನ್ನು ಕಲಿಸಿಕೊಟ್ಟಿದ್ದಕ್ಕೆ ಮನದಾಳದ ಧನ್ಯವಾದಗಳು. ಮಿಸ್ ಯೂ ಡ್ಯಾಡಿ.‌.." ಎಂದು ಬರೆದುಕೊಂಡಿದ್ದಾರೆ ಐಶ್ವರ್ಯ ತಮ್ಮ ಇನ್‌ಸ್ಟಗ್ರಾಂ ಪುಟದಲ್ಲಿ. 

undefined

ಎಸ್ಎಂ ಕೃಷ್ಣ ಸಾವು ನನಗೆ ದುಃಖ ತಂದಿಲ್ಲ, ಸಂತೋಷ ತಂದಿದೆ: ಸಂತಾಪ ಸಭೆಯಲ್ಲಿ ಡಿಕೆಶಿ ಭಾವುಕ ಮಾತು!

ಜೊತೆಗೆ, "ನೀವು ಕೇವಲ ಕನಸುಗಾರರಲ್ಲ ಆದರೆ, ಕನಸನ್ನು ನನಸು ಮಾಡುವವರು, ಆಕಾಂಕ್ಷೆಗಳನ್ನು ವಾಸ್ತವಕ್ಕೆ ತಿರುಗಿಸಿದ ಮತ್ತು ದಾರಿಯುದ್ದಕ್ಕೂ ಅಸಂಖ್ಯಾತ ಜನರ ಜೀವನವನ್ನು ಬದಲಾಯಿಸಿದ ವ್ಯಕ್ತಿ. ನಿಮ್ಮ ದೂರ ದೃಷ್ಟಿ ಉತ್ತಮ ಭವಿಷ್ಯವನ್ನು ರೂಪಿಸಿದೆ. ನಿಮ್ಮ ದಯೆಯು ನಿಮ್ಮ ಸುತ್ತಲಿನ ಪ್ರತಿ ಹೃದಯವನ್ನು ಮುಟ್ಟಿದೆ. ಚಿಂತನಶೀಲ ನಾಯಕತ್ವದ ಕಲೆ, ಅರ್ಥಪೂರ್ಣ ಸಂಭಾಷಣೆಯ ಪ್ರಾಮುಖ್ಯತೆ ಮತ್ತು ಕನಸುಗಳನ್ನು ಉದ್ದೇಶಪೂರ್ವಕವಾಗಿ ಬೆನ್ನಟ್ಟುವ ಶಕ್ತಿಯನ್ನು ನಮಗೆ ಕಲಿಸಿದ್ದಕ್ಕಾಗಿ ಧನ್ಯವಾದಗಳು. ಪ್ರೀತಿ, ಮೆಚ್ಚುಗೆ ಮತ್ತು ಶಾಶ್ವತ ಕೃತಜ್ಞತೆಯೊಂದಿಗೆ, ಮಿಸ್ ಯು ಡ್ಯಾಡಿ" ಎಂದು ಈ ಹಿಂದಿನ ಪೋಸ್ಟ್‌ನಲ್ಲಿ ಶೇರ್ ಮಾಡಿಕೊಂಡಿದ್ದರು. 

ಎಸ್.ಎಂ.ಕೃಷ್ಣ ತಾತನ ವಿಶೇಷ ಅಭಿರುಚಿಗಳನ್ನು ಪರಿಚಯಿಸಿದ ಡಿಕೆಶಿ ಪುತ್ರಿ ಐಶ್ವರ್ಯಾ!

ಅದರಲ್ಲಿ ಅವರು ಕೃಷ್ಣ ಅವರ ಜೊತೆಗಿನ ಸಾಕಷ್ಟು ಫೋಟೋ ಹಾಗೂ ವಿಡಿಯೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಈ ಅಪೂರ್ವ ಕ್ಷಣಗಳಿಗೆ ಹಾಗೂ ಮಾತಿಗೆ ನೆಟಿಜನ್ಸ್‌ ಫಿದಾ ಆಗಿದ್ದು, ಐಶ್ವರ್ಯ ವರ್ತನೆಗೆ ʼಹೌ ಕ್ಯೂಟ್‌ʼ ಅಂತಿದಾರೆ. 

 

click me!