ರಾಮ ಮಂದಿರ ವರ್ಷಾಚರಣೆ ಬೆನ್ನಲ್ಲೇ ಹೊರಬಿತ್ತು ಘೋಷಣೆ, ಈ ರಾಜ್ಯದಲ್ಲಿ ರಾಮ ದೇಗುಲ ನಿರ್ಮಾಣ!

By Chethan Kumar  |  First Published Dec 14, 2024, 3:27 PM IST

ರಾಮ ಮಂದಿರ ಉದ್ಘಾಟನೆಯಾಗಿ ಒಂದು ವರ್ಷವಾಗಲು ಕೆಲ ದಿನಗಳು ಮಾತ್ರ. ಇದೀಗ ಹೊಸ ಘೋಷಣೆಯೊಂದು ಹೊರಬಿದ್ದಿದೆ. ಈ ರಾಜ್ಯದಲ್ಲಿ ಹೊಸ ರಾಮ ಮಂದಿರ ನಿರ್ಮಾಣ ಆರಂಭಗೊಳ್ಳುತ್ತಿದೆ. ಯಾವ ರಾಜ್ಯದಲ್ಲಿ ಮತ್ತೊಂದು ರಾಮ ಮಂದಿರ ನಿರ್ಮಾಣವಾಗಲಿದೆ?
 


ಕೋಲ್ಕತಾ(ಡಿ.14)  ಆಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣಗೊಂಡು ಒಂದು ವರ್ಷವಾಗುತ್ತಿದೆ. ಮೊದಲ ವರ್ಷಾಚರಣೆಗೆ ಆಯೋಧ್ಯೆ ರಾಮ ದೇಗುಲದಲ್ಲಿ ವಿಶೇಷ ಪೂಜೆ ನಡೆಯಲಿದೆ. ಕಳೆದ ಒಂದು ವರ್ಷದಿಂದ ಲಕ್ಷಾಂತರ ಭಕ್ತರು ರಾಮ ಮಂದಿರಕ್ಕೆ ಭೇಟಿ ನೀಡಿ ರಾಮಲಲ್ಲಾ ದರ್ಶನ ಪಡೆದಿದ್ದಾರೆ. ಇದೀಗ ಶ್ರೀರಾಮ ಭಕ್ತರಿಗೆ ಗುಡ್ ನ್ಯೂಸ್ ಹೊರಬಿದ್ದಿದೆ. ಪಶ್ಚಿಮ ಬಂಗಾಳದಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆ. ಆಯೋಧ್ಯೆ ರಾಮ ಮಂದಿರದ ಮೊದಲ ವರ್ಷಾಚರಣೆ ದಿನವೇ ಪಶ್ಟಿಮ ಬಂಗಾಳದ ರಾಮ ಮಂದಿರ ನಿರ್ಮಾಣ ಕಾರ್ಯಗಳು ಆರಂಭಗೊಳ್ಳಲಿದೆ. ಈ ಕುರಿತು ಬಿಜೆಪಿ ನಾಯಕ ಶಖರವ್ ಸರ್ಕಾರ್ ಮಾಹಿತಿ ನೀಡಿದ್ದಾರೆ.

ಬೆರಂಪೋರ್ ಬಿಜೆಪಿ ಜಿಲ್ಲಾಧ್ಯಕ್ಷರಾಗಿರುವ ಶಖರವ್ ಸರ್ಕಾರ್ ರಾಮ ಮಂದಿ ನಿರ್ಮಾಣದ ಘೋಷಣೆ ಮಾಡಿದ್ದಾರೆ. ಬೆರಂಪೋರ್‌ನಲ್ಲಿ ಈಗಾಗಲೇ ರಾಮ ಮಂದಿರ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಜನವರಿ 22, 2025ರಂದು ಹೊಸ ರಾಮ ಮಂದಿರ ನಿರ್ಮಾಣ ಕಾರ್ಯಗಳು ಆರಂಭಗೊಳ್ಳಲಿದೆ. ಈ ದಿನ ಆಯೋಧ್ಯೆಯಲ್ಲಿ ನಿರ್ಮಿಸಿದ ರಾಮ ಮಂದಿರಕ್ಕೆ ಒಂದು ವರ್ಷವಾಗಲಿದೆ. ಹೀಗಾಗಿ ಇದೇ ದಿನದಿಂದ ನಿರ್ಮಾಣ ಕಾರ್ಯಗಳು ಆರಂಭಗೊಳ್ಳಲಿದೆ ಎಂದು ಶಖರವ್ ಸರ್ಕಾರ್ ಹೇಳಿದ್ದಾರೆ.

Tap to resize

Latest Videos

ಜ.22ಕ್ಕೆ ಆಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠೆ ವರ್ಷಾಚರಣೆ ಇಲ್ಲ, ಕಾರಣವೇನು?

10 ಕೋಟಿ ರೂಪಾಯಿ ವೆಚ್ಚದಲ್ಲಿ ರಾಮ ದೇಗುಲ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ. ಶಖರವ್ ಸರ್ಕಾರ್ ನಿರ್ಧಾರವನ್ನು ಹಲವು ಬಿಜೆಪಿ ನಾಯಕರು ಬೆಂಬಲಿಸಿದ್ದಾರೆ. ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಶಖರವ್ ಸರ್ಕಾರ್ ಈಗಾಗಲೇ ರಾಮ ಮಂದಿರ ನಿರ್ಮಾಣದ ತಯಾರಿಯಲ್ಲಿದ್ದಾರೆ. ಇದರ ನಡುವೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಶಾಸಕ ಹುಮಾಯುನ್ ಕಬೀರ್ ನೀಡಿದ ಹೇಳಿಕೆಯಿಂದ ರಾಮ ದೇಗುಲ ನಿರ್ಮಾಣ ಘೋಷಣೆ ಹೊರಬಿದಿದ್ದೆ.

undefined

ಹುಮಾಯುನ್ ಕಬೀರ್ ಇತ್ತೀಚೆಗೆ ಬಾಬ್ರಿ ಮಸೀದಿ ಮತ್ತೆ ನಿರ್ಮಾಣ ಮಾಡುವುದಾಗಿ ಹೇಳಿಕೆ ನೀಡಿದ್ದರು. ಇದೇ ವೇಳೆ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು. ಹಿಂದೂಗಳ ವಿರುದ್ಧ ಹೇಳಿಕೆ ನೀಡಿದ ಹುಮಾಯುನ್ ಕಬೀರ್ ಬಿಜೆಪಿ ನಾಯಕ ಆಕ್ರೋಶಕ್ಕೆ ತುತ್ತಾಗಿದ್ದರು. ಕಬೀರ್ ಬಾಬ್ರಿ ಮಸೀದಿ ಹೇಳಿಕೆ ನೀಡಿದ ಬೆನ್ನಲ್ಲೇ ಶಖರವ್ ಸರ್ಕಾರ್ ರಾಮ ಮಂದಿರದ ಘೋಷಣೆ ಮಾಡಿದ್ದಾರೆ. ಆದರೆ ಶಖರವ್ ಸರ್ಕಾರ್ ಆಡಿರುವುದು ಕೇವಲ ತಿರುಗೇಟಲ್ಲ. ರಾಮ ಮಂದಿರ ನಿರ್ಮಾಣಕ್ಕೆ ಸ್ಥಳ ಗುರುತಿಸಿ ಎಲ್ಲಾ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.

ಪಶ್ಚಿಮಬಂಗಾಳದ ಮುಶಿರಾಬಾದ್‌ನಲ್ಲಿ ಬಾಬ್ರಿ ಮಸೀದಿ ನಿರ್ಮಾಣ ಮಾಡುತ್ತೇವೆ ಎಂದು ಹುಮಾಯುನ್ ಹೇಳಿಕೆ ನೀಡಿದ್ದರು. ಆದರೆ ಬಾಬ್ರಿ ಮಸೀದಿಗೆ ಗುರುತಿಸಿರುವ ಸ್ಥಳ ಸರ್ಕಾರ ನೀಡಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಹುಮಾಯನ್ ವಿವಾದಾತ್ಮಕ ಹೇಳಿಕೆಯಿಂದ ಟಿಎಂಸಿ ದೂರ ಸರಿದಿದೆ. ಹುಮಾಯುನ್ ಹೇಳಿಕೆ ಪಕ್ಷದ ಹೇಳಿಕೆಯಲ್ಲ, ಅವರ ವೈಯುಕ್ತಿ ಹೇಳಿಕೆ ಎಂದು ವಿವಾದಿಂದ ನುಣುಚಿಕೊಂಡಿದೆ.

ಕಬೀರ್ ಹೇಳಿಕೆ ವಿವಾದ ಜೋರಾಗುತ್ತಿದ್ದಂತೆ ಇದೀಗ ಪಶ್ಚಿಮ ಬಂಗಾಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬಿಜೆಪಿ ನಾಯಕ ತಯಾರಿ ಆರಂಭಿಸಿದ್ದಾರೆ. ಸದ್ಯ ಗುರುತಿಸಿರುವ ಸ್ಥಳದಲ್ಲಿ ಪಾಳುಬಿದ್ದ ಹಳೇ ದೇವಸ್ಥಾನದ ಕುರುಹುಗಳಿವೆ ಎಂದು ಹೇಳಲಾಗುತ್ತಿದೆ. ಶತಮಾನಗಳ ಹಳಯೆ ರಾಮ ಮಂದಿರದ ಎಂದು ಹೇಳಲಾಗುತ್ತಿದೆ. ಒಂದೆಡೆ ರಾಮ ಮಂದಿರದ ತಯಾರಿಗಳು ಆರಂಭಗೊಂಡಿದ್ದರೆ ಮತ್ತೊಂದೆಡೆ ರಾಜಕೀಯ ಕೆಸರೆರೆಚಾಟ ಜೋರಾಗಿದೆ. ಮಮತಾ ಬ್ಯಾನರ್ಜಿ ಮತ ಬ್ಯಾಂಕ್‌ಗಾಗಿ ಈ ರೀತಿ ಕಸರತ್ತು ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಪಶ್ಚಿಮ ಬಂಗಾಳವನ್ನು ಬಾಂಗ್ಲಾದೇಶ ಮಾಡಲು ಹೊರಟಿದ್ದಾರೆ. ಬಿಜೆಪಿ ಇದಕ್ಕೆ ಅವಕಾಶ ನೀಡುವುದಿಲ್ಲ. ಪಶ್ಚಿಮ ಬಂಗಾಳ ಅತ್ಯಂತ ಶ್ರೀಮಂತ ಸಾಂಸ್ಕೃತಿಕ ಹಿನ್ನಲೆ ಹೊಂದಿದೆ. ಇದನ್ನು ಮುಂದುವರಿಸಿಕೊಂಡು ಮುಂದಿನ ಪೀಳಿಗೆಗೆ ನೀಡಬೇಕಾದ ಜವಾಬ್ದಾರಿ ನಮ್ಮದು ಎಂದು ಬಿಜೆಪಿ ನಾಯಕರ ಹೇಳಿದ್ದಾರೆ. 
 

click me!