ಎಲ್ಲಾ ಪಕ್ಷದ ಸಂಸದರ ಒಗ್ಗೂಡಿಸಿದ ಡಿಕೆಶಿ : ಮಾಸ್ಟರ್ ಪ್ಲಾನ್ ಹಿಂದಿನ ಉದ್ದೇಶ..?

By Web DeskFirst Published Dec 21, 2018, 10:03 AM IST
Highlights

ಕರ್ನಾಟಕ ರಾಜಕೀಯದಲ್ಲಿ  ಟ್ರಬಲ್ ಶೂಟರ್ ಎಂದೇ ಖ್ಯಾತರಾಗಿರುವ ಡಿ.ಕೆ.ಶಿವಕುಮಾರ್ ಇದೀಗ ರಾಜ್ಯಕ್ಕಾಗಿ ಇದೀಗ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿ, ಮೇಕೆದಾಟು ವಿಚಾರವಾಗಿ ಎಲ್ಲಾ ಪಕ್ಷದ ಸಂಸದರನ್ನೂ ಒಗ್ಗೂಡಿಸಿದ್ದಾರೆ. 

ನವದೆಹಲಿ: ಕಾಂಗ್ರೆಸ್‌ನಲ್ಲಿ ‘ಟ್ರಬಲ್‌ಶೂಟರ್‌’ ಎಂದೇ ಗುರುತಿಸಿಕೊಂಡಿರುವ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರು ಸಂಸತ್‌ನಲ್ಲಿ ಹೋರಾಡಲು ರಾಜ್ಯ ಸಂಸದರನ್ನು ಸಜ್ಜುಗೊಳಿಸುವ ವಿಷಯದಲ್ಲೂ ಮುಂಚೂಣಿಯಲ್ಲಿ ಕಾಣಿಸಿಕೊಂಡರು.

ಸಂಸದರಿಗೆ ಮಾಹಿತಿ ನೀಡುವ ಸಲುವಾಗಿ ಬುಧವಾರವೇ ದೆಹಲಿಗೆ ಶಿವಕುಮಾರ್‌ ಅವರು ಆಗಮಿಸಿದ್ದರು. ಗುರುವಾರ ಸಂಸದ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ನಿವಾಸದಲ್ಲಿ ಸುಮಾರು ಒಂದು ಗಂಟೆ ನಡೆದ ಸಭೆಯಲ್ಲಿ ಮೇಕೆದಾಟು ಯೋಜನೆ ಮತ್ತು ಮಹದಾಯಿಗೆ ಸಂಬಂಧಪಟ್ಟಬೆಳವಣಿಗೆಗಳು ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಯಾವ ಹಂತದಲ್ಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಶಿವಕುಮಾರ್‌ ನೀಡಿದರು. 

ಬಳಿಕ ಮೇಕೆದಾಟು ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಸಂಸದರು ಸಂಸತ್ತಿನಲ್ಲಿ ಆಕ್ರಮಣಕಾರಿ ಧೋರಣೆ ತಾಳುತ್ತಿದ್ದಾರೆ. ಇದಕ್ಕೆ ಯಾವ ರೀತಿಯಲ್ಲಿ ತಿರುಗೇಟು ನೀಡಬೇಕು ಎಂಬದರ ಬಗ್ಗೆ ಸಮಾಲೋಚನೆ ನಡೆಯಿತು.

click me!