
ನವದೆಹಲಿ[ಡಿ.21]: ಭಾರತೀಯ ರೈಲ್ವೆ ಸೇವೆಯನ್ನು ಉನ್ನತ ದರ್ಜೆಗೆ ಏರಿಸಲು ಶ್ರಮಿಸುತ್ತಿರುವ ಕೇಂದ್ರ ಸರ್ಕಾರ, ಭಾರತದ ರೈಲ್ವೆ ಹೊಸ ಟಚ್ ಕೊಡಲು ಮುಂದಾಗಿದೆ. ಇದರ ಪ್ರಕಾರ, ಮುಂದಿನ ವರ್ಷದ ಜನವರಿಯಿಂದ ಭಾರತದ ಕೆಲವು ರೈಲುಗಳಲ್ಲಿ ಪ್ರಯಾಣಿಕರು, ತಮ್ಮ ಪ್ರಯಾಣದ ಅವಧಿಯಲ್ಲೇ, ತಮಗೆ ಬೇಕಿರುವ ಸೌಂದರ್ಯ ವರ್ಧಕ ಉತ್ಪನ್ನಗಳು, ಫಿಟ್‌ನೆಸ್ ಹಾಗೂ ಅಡುಗೆ ಮನೆಗೆ ಅಗತ್ಯವಿರುವ ಪರಿಕರಗಳನ್ನು ಖರೀದಿಸಬಹುದಾಗಿದೆ. ಈ ಮೂಲಕ ಭಾರತದ ಕೆಲವು ರೈಲುಗಳು ಶಾಪಿಂಗ್ ಮಾಲ್‌ಗಳ ರೂಪ ಪಡೆಯಲಿವೆ.
16 ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ 5 ವರ್ಷಗಳ ಕಾಲ ಸೌಂದರ್ಯವರ್ಧಕ, ಫಿಟ್‌ನೆಸ್ ಮತ್ತು ಕಿಚನ್ ಅಪ್ಲೈಯನ್ಸಸ್ ಸೇರಿ ಇತರ ವಸ್ತುಗಳ ಮಾರಾಟಕ್ಕೆ ಖಾಸಗಿ ಕಂಪನಿಯೊಂದಕ್ಕೆ ಮುಂಬೈ ವಿಭಾಗದ ಪಶ್ಚಿಮ ರೈಲ್ವೆ ಗುತ್ತಿಗೆ ನೀಡಿದೆ. ಆದರೆ, ಈ ಗುತ್ತಿಗೆ ಪಡೆದ ಕಂಪನಿಯು, ರೈಲುಗಳಲ್ಲಿ ಆಹಾರ ಪದಾರ್ಥಗಳು, ಸಿಗರೇಟು, ಗುಟ್ಕಾ ಅಥವಾ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ