
ಬೆಂಗಳೂರು(ನ.24): ತೀವ್ರ ಕೂತೂಹಲ ಕೆರಳಿಸಿದ್ದ ಐಎಎಸ್ ಅಧಿಕಾರಿ ಡಿಕೆ ರವಿ ಸಾವಿನ ಪ್ರಕರಣಕ್ಕೆ ತೆರೆ ಬಿದ್ದಿದೆ. 20 ತಿಂಗಳು ಸುದೀರ್ಘ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಿದ್ದಾರೆ. ಆ ವರದಿಯಲ್ಲಿನ ಕೆಲ ಅಂಶಗಳು ಸುವರ್ಣನ್ಯೂಸ್ಗೆ ಲಭ್ಯವಾಗಿದೆ.
ರಾಜ್ಯದ್ಯಾಂತ ತೀವ್ರ ಕೂತೂಹಲ ಕೆರಳಿಸಿದ್ದ ಐಎಎಸ್ ಅಧಿಕಾರಿ ಡಿಕೆ ರವಿ ಅವರ ನಿಗೂಢ ಸಾವಿನ ತನಿಖೆ ಪೂರ್ಣಗೊಂಡಿದೆ. ಮಾರ್ಚ್ 16, 2015 ರಂದು ಮಡಿವಾಳದ ಅಪಾರ್ಟ್ಮೆಂಟ್ನಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಡಿಕೆ ರವಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಸಾಕಷ್ಟು ಹೋರಾಟದ ಬಳಿಕ ಸರ್ಕಾರ ಸಿಬಿಐ ಹೆಗಲಿಗೆ ತನಿಖೆಯ ಹೊಣೆ ಹೊರಿಸಿತ್ತು. ಸುಮಾರು 20 ತಿಂಗಳ ತನಿಖೆ ಬಳಿಕ ನಾಳೆ ಸಿಬಿಐ ಸರ್ಕಾರಕ್ಕೆ ವರದಿ ಕೊಡಲಿದೆ.
- 90 ಪುಟಗಳ ಸಿಬಿಐ ವರದಿ ರೆಡಿ
- 100 ಮಂದಿಯ ತೀವ್ರ ವಿಚಾರಣೆ
- ಆತ್ಮಹತ್ಯೆಯಿಂದಲೇ ಡಿಕೆ ರವಿ ಸಾವು
- ವೈಯುಕ್ತಿಕ ಕಾರಣವೇ ಸಾವಿಗೆ ಕಾರಣ
- ರವಿ ಸಾವಿನಲ್ಲಿ ಬೇರೆಯವರ ಕೈವಾಡವಿಲ್ಲ
ಸಿಬಿಐ ಸುಮಾರು 100 ಕ್ಕೂ ಹೆಚ್ಚು ಮಂದೀನ ವಿಚಾರಣೆಗೊಳಿಸಿತ್ತು. ಅಂತಿಮವಾಗಿ ತನ್ನ ವರದಿಯನ್ನ ಸಿದ್ದಪಡಿಸಿದ. 90 ಪುಟಗಳ ವರದಿಯನ್ನ ದಕ್ಷಿಣ ವಿಭಾಗದ ಎಸಿ, ಡಿಬಿ ನಟೇಶ್ ಅವರಿಗೆ ಸಲ್ಲಿಸಲಿದೆ. ಇದರಲ್ಲಿ ಆತ್ಮಹತ್ಯೆಯಿಂದಲೇ ಡಿಕೆ ರವಿ ಸಾವು ಸಂಭವಿಸಿದ್ದು ವೈಯುಕ್ತಿಕ ಕಾರಣವೇ ರವಿ ಸಾವಿಗೆ ಕಾರಣ ಅಂತ ಹೇಳಲಾಗಿದೆ. ಅಲ್ಲದೆ ಡಿಕೆ ರವಿ ಸಾವಿನಲ್ಲಿ ಬೇರೆಯವರ ಕೈವಾಡವಿಲ್ಲ ಅನ್ನೋದನ್ನೂ ಸಿಬಿಐ ಉಲ್ಲೇಖಿಸಿದೆ ಅಂತ ಹೇಳಲಾಗ್ತಿದೆ.
ಮಡಿವಾಳ ಪೊಲೀಸ್ ಠಾಣೆಯಲ್ಲಿ ಸಿಆರ್ಪಿಸಿ 174 ರ ಅಡಿ ದೂರು ದಾಖಲಿಸಿಕೊಂಡಿದ್ದ, ಪೊಲೀಸರು ತನಿಖೆ ನಡೆಸಿದ್ದರು. ಆರಂಭದಲ್ಲಿಯೇ ಇದೊಂದು ಆತ್ಮಹತ್ಯೆ ಅನ್ನೋ ಹೇಳಿಕೆಗಳು ಸರ್ಕಾರದಿಂದ ಪ್ರಸ್ತಾಪವಾದಾಗ ವಿಪಕ್ಷಗಳು ಸದನದಲ್ಲಿ ಸಿಬಿಐಗೆ ವಹಿಸಲು ಒತ್ತಾಯ ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಡಿಕೆ ರವಿ ಪ್ರಕರಣವನ್ನ ಮಾರ್ಚ್ 23 ರಂದು ಸಿಬಿಐಗೆ ವಹಿಸಿತ್ತು.
ವರದಿ: ರವಿಕುಮಾರ್ ಮತ್ತು ಮುತ್ತಪ್ಪ ಲಮಾಣಿ, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.