ಅಂಗವಿಕಲರು, 80 ದಾಟಿದ ವೃದ್ಧರಿಗೆ ಅಂಚೆ ಮತ ಅವಕಾಶ

Published : Oct 27, 2019, 08:15 AM IST
ಅಂಗವಿಕಲರು, 80 ದಾಟಿದ  ವೃದ್ಧರಿಗೆ ಅಂಚೆ ಮತ ಅವಕಾಶ

ಸಾರಾಂಶ

ಅಂಗವಿಕಲರು, 80 ದಾಟಿದ ವೃದ್ಧರಿಗೆ ಅಂಚೆ ಮತ ಅವಕಾಶ | ಚುನಾವಣಾ ಸಿಬ್ಬಂದಿಗಷ್ಟೇ ಇದ್ದ ಸೌಲಭ್ಯ ವಿಸ್ತರಣೆ | ಕೇಂದ್ರ ಸರ್ಕಾರದ ಮತದಾರ ಸ್ನೇಹಿ ನಿರ್ಣಯ

ನವದೆಹಲಿ (ಅ.27): ಅಂಗವಿಕಲರು ಹಾಗೂ 80 ವರ್ಷ ದಾಟಿದ ವೃದ್ಧರಿಗೆ ಅಂಚೆ ಮತಕ್ಕೆ ಅವಕಾಶ ನೀಡುವ ಮಹತ್ವದ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.

ಈ ಬಗ್ಗೆ ಚುನಾವಣಾ ಆಯೋಗ ಮಾಡಿದ ಶಿಫಾರಸಿನ ಮೇರೆಗೆ ಕೇಂದ್ರ ಕಾನೂನು ಹಾಗೂ ನ್ಯಾಯಿಕ ಸಚಿವಾಲಯ ಚುನಾವಣಾ ನಿಯಮ-1961ಕ್ಕೆ ಅಕ್ಟೋಬರ್‌ 22ರಂದು ತಿದ್ದುಪಡಿ ಮಾಡಿದ್ದು, ಇದರಲ್ಲಿ ವೃದ್ಧರು ಹಾಗೂ ಅಂಗವಿಕಲರನ್ನು ‘ಗೈರು ಮತದಾರರ ಪಟ್ಟಿ’ಯಲ್ಲಿ ಸೇರಿಸಿದೆ.

ಅಯೋಧ್ಯೆಯಲ್ಲಿ 5.4 ಲಕ್ಷ ದೀಪ ಹಚ್ಚಿ ಗಿನ್ನೆಸ್ ದಾಖಲೆ

‘ಗೈರು ಮತದಾರರ ಪಟ್ಟಿ’ಯಲ್ಲಿ ಇರುವವರು ಅಂಚೆ ಮತದ ಮೂಲಕ ಮತ ಚಲಾಯಿಸಬಹುದಾಗಿದೆ. ಇದಕ್ಕಾಗಿ ಚುನಾವಣಾ ಆಯೋಗದ ‘13ಎ’ ಅರ್ಜಿಯನ್ನು ಪಡೆದುಕೊಂಡು ಭರ್ತಿ ಮಾಡಿ ಅಂಚೆ ಮತ ರವಾನಿಸಬಹುದು. ಈವರೆಗೆ ಸಶಸ್ತ್ರ ಪಡೆಗಳು ಹಾಗೂ ಚುನಾವಣಾ ಕರ್ತವ್ಯದ ಮೇಲೆ ನಿಯೋಜಿಸಲ್ಪಟ್ಟವರಿಗೆ ಮಾತ್ರ ಅಂಚೆ ಮತಕ್ಕೆ ಅವಕಾಶವಿತ್ತು.

‘ಅಂಗವಿಕಲರು ಹಾಗೂ ವಯೋವೃದ್ಧರಿಗೆ ಮತಗಟ್ಟೆತಲುಪಿ ಮತ ಹಾಕುವುದು ಕಷ್ಟವಾಗುತ್ತಿತ್ತು. ಹೀಗಾಗಿ ಅವರಿಗೆ ಅಂಚೆ ಮತಕ್ಕೆ ಅನುವು ಮಾಡಿದ್ದೇವೆ. ಇದರಿಂದ ಮತದಾನ ಪ್ರಮಾಣ ಹೆಚ್ಚಾಗುವ ವಿಶ್ವಾಸವಿದೆ’ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Viral Video: ಮಾಜಿ ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆದಿದ್ದ ವಕೀಲ ರಾಕೇಶ್‌ ಕಿಶೋರ್‌ಗೆ ಕೋರ್ಟ್‌ನಲ್ಲೇ ಚಪ್ಪಲಿಯಿಂದ ಹಲ್ಲೆ!
ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಕೋಕಾ ಕೋಲಾ ಕಂಪನಿ ಚಾರ್ಟೆಡ್ ಅಕೌಂಟೆಂಟ್ ಹಠಾತ್ ಸಾವು