ಅಯೋಧ್ಯೆಯಲ್ಲಿ 5.4 ಲಕ್ಷ ದೀಪ ಹಚ್ಚಿ ಗಿನ್ನೆಸ್‌ ದಾಖಲೆ

Published : Oct 27, 2019, 08:02 AM ISTUpdated : Oct 27, 2019, 05:24 PM IST
ಅಯೋಧ್ಯೆಯಲ್ಲಿ 5.4 ಲಕ್ಷ  ದೀಪ ಹಚ್ಚಿ ಗಿನ್ನೆಸ್‌ ದಾಖಲೆ

ಸಾರಾಂಶ

ಸರಯೂ ನದಿ ದಂಡೆ ಮೇಲೆ 5.4 ಲಕ್ಷ  ದೀಪ  ಹಚ್ಚಿ ಗಿನ್ನಿಸ್ ದಾಖಲೆ | ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನೇತೃತ್ವದಲ್ಲಿ ಸರಯೂ ನದಿ ದಂಡೆ ಮೇಲೆ ‘ರಾಮ್‌ ಕಿ ಪೈಡಿ’ 

ಅಯೋಧ್ಯೆ (ಅ. 27): ದೀಪಾವಳಿ ನಿಮಿತ್ತ ರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಶುಕ್ರವಾರ ಸಂಜೆ 5.4 ಲಕ್ಷ ದೀಪಗಳನ್ನು ಸರಯೂ ನದಿ ದಂಡೆಯಲ್ಲಿ ಬೆಳಗುವ ಮೂಲಕ ಗಿನ್ನೆಸ್‌ ವಿಶ್ವದಾಖಲೆ ಮಾಡಲಾಗಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನೇತೃತ್ವದಲ್ಲಿ ನದಿ ದಂಡೆಯ ‘ರಾಮ್‌ ಕಿ ಪೈಡಿ’ಯಲ್ಲಿ ಈ ದೀಪಗಳನ್ನು ಬೆಳಗಲಾಯಿತು. ಮುಖ್ಯ ಅತಿಥಿಯಾಗಿ ಫಿಜಿ ದೇಶದ ಭಾರತೀಯ ಮೂಲದ ಮಂತ್ರಿ ವೀಣಾ ಭಟ್ನಾಗರ್‌ ಹಾಗೂ ರಾಜ್ಯಪಾಲೆ ಆನಂದಿಬೆನ್‌ ಪಟೇಲ್‌ ಅವರೂ ಪಾಲ್ಗೊಂಡಿದ್ದರು. ಮೊದಲ ದೀಪವನ್ನು ಈ ಮೂರೂ ಗಣ್ಯರು ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹರ್ಯಾಣ ಸಿಎಂ ಆಗಿ ಖಟ್ಟರ್ ಡಿಸಿಎಂ ಆಗಿ ದುಷ್ಯಂತ್ ಶಪಥ

ಸಾವಿರಾರು ಜನ ಪಾಲ್ಗೊಂಡಿದ್ದ ಈ ಸಮಾರಂಭವು ದೀಪಗಳಿಂದ ಝಗಮಗಿಸಿ ಗಮನ ಸೆಳೆಯಿತು. 2017 ರಿಂದಲೇ ಇಲ್ಲಿ ದೀಪ ಬೆಳಗುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕಳೆದ ವರ್ಷ ದಾಖಲೆಯ 3 ಲಕ್ಷ ದೀಪ ಬೆಳಗಲಾಗಿತ್ತು. ಈ ದಾಖಲೆ ಮುರಿವ ಉದ್ದೇಶದಿಂದ ಸರ್ಕಾರ ಈ ಬಾರಿ 5.4 ಲಕ್ಷ ದೀಪಗಳನ್ನು ತಂದಿರಿಸಿತ್ತು. ಗಿನ್ನೆಸ್‌ ದಾಖಲೆ ಪುಸ್ತಕದ ಅಧಿಕಾರಿಗಳು ದೀಪ ಬೆಳಗುವುದನ್ನು ವೀಕ್ಷಿಸಿದ್ದು, ಅಧಿಕೃತವಾಗಿ ದಾಖಲೆ ಪುಸ್ತಕದಲ್ಲಿ ಸೇರಿಸುವುದೊಂದೇ ಬಾಕಿ ಇದೆ.

ಎಲ್ಲೆ ಮೀರದೇ ಜಯ- ಯೋಗಿ:

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಆದಿತ್ಯನಾಥ್‌, ‘ರಾಮನ ನಡೆಯನ್ನು ಅನುಸರಿಸಿ, ಯಾವುದೇ ಎಲ್ಲೆಗಳನ್ನು ಮೀರದೇ ಜಯ ಸಾಧಿಸಲು ಅವಕಾಶವಿದೆ’ ಎಂದು ಮಾರ್ಮಿಕವಾಗಿ ಹೇಳಿದರು. ಈ ಮೂಲಕ ಅಯೋಧ್ಯೆ ರಾಮಜನ್ಮಭೂಮಿ ವಿವಾದದಲ್ಲಿ ರಾಮಮಂದಿರ ಕಟ್ಟುವ ಪರ ತೀರ್ಪು ಬರಲಿದೆ ಎಂದು ಪರೋಕ್ಷವಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಅಕ್ಟೋಬರ್ 27ರ ಟಾಪ್ 10 ಸುದ್ದಿಗಾಗಿ ಕ್ಲಿಕ್ ಮಾಡಿ:

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸುವುದು ಕಾಂಗ್ರೆಸ್‌ನವರಿಗೆ ಇಷ್ಟವಿಲ್ಲ: ಎಚ್.ಡಿ.ಕುಮಾರಸ್ವಾಮಿ
ರೈತರಿಗೆ ಅನುಕೂಲ ಮಾಡುವುದೇ ಗುರಿ: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್