
ನವದೆಹಲಿ(ಡಿ.20): ಭಾರತೀಯ ರಿಸರ್ವ್ ಬ್ಯಾಂಕ್ ಸದ್ಯದಲ್ಲೇ 50 ರೂಪಾಯಿಯ ಹೊಸ ನೋಟನ್ನು ಹೊರ ತರಲಿದೆ. ಈ ನೋಟುಗಳು ಕೆಲವೊಂದು ಸುರಕ್ಷತಾ ಫೀಚರ್ಸ್'ನೊಂದಿಗೆ ಮಾರುಕಟ್ಟೆಗೆ ಬರಲಿವೆ. 50 ರೂಪಾಯಿಯ ಹೊಸ ನೋಟಿನಲ್ಲಿ ಸೀರಿಯಲ್ ನಂಬರ್ ಪ್ಯಾನಲ್ ಹಾಗೂ RBI ಗವರ್ನರ್'ವಿರುವ ಸ್ಥಳದಲ್ಲಿ L ಅಕ್ಷರವನ್ನು ಮುದ್ರಿಸಲಾಗುತ್ತದೆ ಎಂದು ಕೇಂದ್ರೀಯ ಬ್ಯಾಂಕ್ ಮಾಹಿತಿ ನೀಡಿದೆ.
ಬ್ಯಾಂಕ್'ಗೆ ಹಣ ಜಮಾವಣೆಗೊಳಿಸುವುದು ಬಲು ಕಷ್ಟ
ಇದಕ್ಕೂ ಮೊದಲು ಹಣಕಾಸು ಸಚಿವಾಲಯದ ಪರವಾಗಿ ಹಳೆ ನೋಟುಗಳನ್ನು ಸಂಗ್ರಹಿಸಲು ಒಂದು ಹೊಸ ಶರತ್ತನ್ನು ವಿಧಿಸಲಾಗಿದೆ. ಇದರ ಅನ್ವಯ ಡಿಸೆಂಬರ್ 30ರವರೆಗೆ ಒಬ್ಬ ವ್ಯಕ್ತಿ 5000 ಕ್ಕೂ ಹೆಚ್ಚಿನ ಮೊತ್ತ ಒಂದು ಬಾರಿಯಷ್ಟೇ ತನ್ನ ಖಾತೆಗೆ ಜಮಾಗೊಳಿಸಬಹುದು. ಸೋಮವಾರ ವಿತ್ತ ಸಚಿವಾಲ ಈ ಘೋಷಣೆಯ ಬಳಿಕ RBI ನಿಂದ ಬ್ಯಾಂಕ್ ಶಾಖೆಗಳಿಗೆ ಇಂತಹುದ್ದೊಂದು ಆದೇಶದ ಪ್ರತಿ ತಲುಪಿದೆ.
RBI ನಿಂದ ಜಾರಿಗೊಳಿಸಿರುವ ಈ ಆದೇಶದ ಅನ್ವಯ 'ತನ್ನ ಖಾತೆಗೆ 5000 ರೂಪಾಯಿಗೂ ಹೆಚ್ಚು ಹಣ ಜಮಾವಣೆ ಮಾಡುವ ವ್ಯಕ್ತಿ, ಆ ಹಣ ಆತನಿಗೆ ಎಲ್ಲಿಂದ ಬಂತು? ಇದಕ್ಕೂ ಮೊದಲು ಯಾಕೆ ಹಣವನ್ನು ಜಮಾವಣೆಗಿಳಿಸಿಲ್ಲ? ಎಂಬ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಇದನ್ನು ಬ್ಯಾಂಕ್'ನ ಕನಿಷ್ಟ ಇಬ್ಬರು ಅಧಿಕಾರಿಗಳಿಗೆ ಆತ ಸ್ಪಷ್ಟಪಡಿಸಬೇಕು. ಬ್ಯಾಂಕ್ ಆತನ ಉತ್ತರದಿಂದ ಸಂತುಷ್ಟಗೊಂಡರೆ ಮಾತ್ರ ಹಣ ಡೆಪಾಸಿಟ್ ಮಾಡಬೇಕು. ಅಲ್ಲದೆ ಈ ವಿಚಾರಣೆಯನ್ನು ತಪ್ಪದೇ ರೆಕಾರ್ಡ್ ಮಾಡಿ ಇಡಬೇಕು. ಇದನ್ನು ಅಡಿಟ್ ಟ್ರಾಯಲ್'ನಂತೆ ಪ್ರಸ್ತುತಪಡಿಸಬೇಕಾಗುತ್ತದೆ' ಎಂದದು ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.