ಅರಸು ಕುಟುಂಬ ಏಳಿಗೆ ಕಾಣದಿರಲು ಬ್ರಾಹ್ಮಣ ಹೆಣ್ಣು ಮಕ್ಕಳ ಕಣ್ಣೀರು ಕಾರಣ?

By Suvarna Web DeskFirst Published Feb 25, 2018, 1:43 PM IST
Highlights
  • ಭೂಸುಧಾರಣಾ ಕಾನೂನು ಜಾರಿ ಸಂದರ್ಭದಲ್ಲಿ ಬ್ರಾಹ್ಮಣ ಸಮುದಾಯದ ಭೂಮಿ ಬಿಟ್ಟು ಬೇರೆ ಯಾವ ಸಮುದಾಯ ಭೂಮಿಯನ್ನಾದರೂ ವಶಪಡಿಸಿಕೊಳ್ಳಿ ಎಂದು ಹೇಳಿದ್ದೆ
  • ಆ ಸಮುದಾಯ ಹೆಣ್ಣು ಮಕ್ಕಳ ಕಣ್ಣೀರು ಅರಸು ಕುಟುಂಬವನ್ನು ಕಾಡುತ್ತಿದೆ

ಬೆಂಗಳೂರು: ದೇವರಾಜ ಅರಸು ನಂತರ ತಾವು ಐದು ವರ್ಷ ಪೂರ್ಣಕಾಲ ಆಡಳಿತ ನಡೆಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅರಸು ಅವರ ಕುಟುಂಬ ಏಕೆ ಏಳಿಗೆ ಆಗಲಿಲ್ಲ ಎಂದು ನಮ್ಮ ತಂದೆ ಬಳಿ ಕೇಳಿದೆ. ಅದಕ್ಕೆ ಅವರು ಭೂಸುಧಾರಣಾ ಕಾನೂನು ಜಾರಿ ಸಂದರ್ಭದಲ್ಲಿ ಬ್ರಾಹ್ಮಣ ಸಮುದಾಯದ ಭೂಮಿ ಬಿಟ್ಟು ಬೇರೆ ಯಾವ ಸಮುದಾಯ ಭೂಮಿಯನ್ನಾದರೂ ವಶಪಡಿಸಿಕೊಳ್ಳಿ ಎಂದು ಹೇಳಿದ್ದೆ. ಆದರೂ ಅರಸು ಬ್ರಾಹ್ಮಣರ ಭೂಮಿಯನ್ನೂ ವಶಪಡಿಸಿಕೊಂಡರು. ಆ ಸಮುದಾಯ ಹೆಣ್ಣು ಮಕ್ಕಳ ಕಣ್ಣೀರು ಅರಸು ಕುಟುಂಬವನ್ನು ಕಾಡುತ್ತಿದೆ ಎಂದು ಹೇಳಿದ್ದರು ಎಂದು ಎಚ್..ಡಿ. ಕುಮಾರಸ್ವಾಮಿ ತಮ್ಮ ತಂದೆಯ ಮಾತುಗಳನ್ನು ನೆನಪಿಸಿಕೊಂಡರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಎರಡು ದಿನಗಳ ‘ಬೆಂಗಳೂರು ಮಹಾನಗರ ವಿಪ್ರರ ಬೃಹತ್ ಸಮಾವೇಶ’ವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬರಲಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬ್ರಾಹ್ಮಣ ಸಮಾಜ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ನಿವಾರಿಸಲು ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲಾಗುವುದು. ಜತೆಗೆ ಸಮುದಾಯದ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

click me!