ಬ್ರಾಹ್ಮಣರಿಂದ ಧರ್ಮ ಉಳಿದಿದೆ: ಯಡಿಯೂರಪ್ಪ

By Suvarna Web DeskFirst Published Feb 25, 2018, 1:22 PM IST
Highlights
  • ನಮಗೆ ಮೀಸಲಾತಿ ಬೇಡ, ಸಮಾನತೆ ಬೇಕು ಎನ್ನುವ ಬ್ರಾಹ್ಮಣ ಮಹಾಸಭಾದ ನಿಲುವಿಗೆ ಸಹಮತ
  • ಪಾಶ್ಚಿಮಾತ್ಯ ಸಂಸ್ಕೃತಿಯ ಅಬ್ಬರದ ನಡುವೆ ನಮ್ಮ ಹಿಂದೂ ಧರ್ಮ, ಸಂಸ್ಕೃತಿಯನ್ನು ಪಾಲಿಸುವ ಮೂಲಕ ರಕ್ಷಿಸಬೇಕಿದೆ

ಬೆಂಗಳೂರು: ಬ್ರಾಹ್ಮಣ ಸಮುದಾಯದಿಂದ ಈ ದೇಶದಲ್ಲಿ ಧರ್ಮ, ಆಚಾರ ವಿಚಾರ, ಸಂಸ್ಕೃತಿ ಉಳಿದಿದೆ. ಸಮಸ್ತ ಜೀವರಾಶಿಗೆ ಒಳಿತು ಬಯಸುವ ಸಮುದಾಯಕ್ಕೆ ತಮ್ಮ ಬೆಂಬಲ ಸದಾ ಇರುತ್ತದೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು.

ಶನಿವಾರ ಸಂಜೆ ನಡೆದ ಗುರುವಂದನೆ ಹಾಗೂ ಸಾಧಕರಿಗೆ ಸನ್ಮಾನಿಸುವ ಸಮಾರಂಭದಲ್ಲಿ ಅವರು ಮಾತನಾಡಿದರು. ನಮಗೆ ಮೀಸಲಾತಿ ಬೇಡ, ಸಮಾನತೆ ಬೇಕು ಎನ್ನುವ ಬ್ರಾಹ್ಮಣ ಮಹಾಸಭಾದ ನಿಲುವಿಗೆ ನನ್ನ ಸಹಮತವಿದೆ. ಇತರೆ ಸಮುದಾಯಗಳಂತೆ ಬ್ರಾಹ್ಮಣ ಸಮುದಾಯಕ್ಕೂ ಸವಲತ್ತು ಕೊಡುವುದು ಸರ್ಕಾರದ ಕರ್ತವ್ಯ ಎಂದರು.

ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸಮಾಜದಲ್ಲಿ ನಾವು ಹಿಂದೂಗಳು ಎಂದು ಹೇಳಿಕೊಳ್ಳಲು ಹಿಂಜರಿಯುವ ಕಾಲವೊಂದಿತ್ತು. ಈಗ ಹಿಂದೂ ಎನ್ನುವ ಕೂಗು ಎದ್ದಿದೆ. ಈ ದೇಶದ ಧರ್ಮ, ಸಂಸ್ಕೃತಿ ರಕ್ಷಣೆ ಹಿಂದೂಗಳಿಂದ ಮಾತ್ರ ಸಾಧ್ಯ. ಪಾಶ್ಚಿಮಾತ್ಯ ಸಂಸ್ಕೃತಿಯ ಅಬ್ಬರದ ನಡುವೆ ನಮ್ಮ ಹಿಂದೂ ಧರ್ಮ, ಸಂಸ್ಕೃತಿಯನ್ನು ಪಾಲಿಸುವ ಮೂಲಕ ರಕ್ಷಿಸಬೇಕಿದೆ ಎಂದರು.

ಇದೇ ವೇಳೆ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಗರುಡಾಚಾರ್, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ಡಾ.ತೇಜಸ್ವಿನಿ ಅನಂತಕುಮಾರ್, ವಿದ್ವಾಂಸ ಅರಳು ಮಲ್ಲಿಗೆ ಪಾರ್ಥಸಾರಥಿ ಮೊದಲಾದ ಸಾಧಕರನ್ನು ಸನ್ಮಾನಿಸಲಾಯಿತು.

ವ್ಯಾಸರಾಜ ಮಠದ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ, ಸಂಸ್ಕೃತ ವಿದ್ವಾಂಸ ಲಕ್ಷ್ಮೀ ತಾತಾಚಾರ್ಯ, ಮಾಜಿ ಸಚಿವ ಎಸ್. ಸುರೇಶ್‌ಕುಮಾರ್, ಶಾಸಕರಾದ ಬಿ.ಎನ್. ವಿಜಯಕುಮಾರ್, ಎಲ್.ಎ. ರವಿ ಸುಬ್ರಹ್ಮಣ್ಯ,

ಬಿಜೆಪಿ ಮುಖಂಡ ಸುಬ್ಬನರಸಿಂಹಮತ್ತಿತರರು ಉಪಸ್ಥಿತರಿದ್ದರು.

click me!