
ಬೆಂಗಳೂರು[ನ.28]: ಕಲಿಯುಗದ ಕರ್ಣ ನಟ ಅಂಬರೀಶ್ ಇಹಲೋಕ ತ್ಯಜಿಸಿದ್ದಾರೆ. ಇವರ ಅಗಲುವಿಕೆ ಇಡೀ ಕರುನಾಡನ್ನೇ ಕಾಡುತ್ತಿದ್ದು, ಅಭಿಮಾನಿಗಳು ಮಂಡ್ಯದ ಗಂಡನ್ನು ನೆನೆದು ಇನ್ನೂ ಕಂಬನಿ ಮಿಡಿಯುತ್ತಿದ್ದಾರೆ. ಹೀಗಿರುವಾಗ ಅಂಬಿಗೆ ತಮ್ಮ ಸಾವಿನ ಸುಳಿವು ಈ ಮೊದಲೇ ಸಿಕ್ಕಿತ್ತಾ ಎಂಬ ಅನುಮಾನ ಕಾಡಲಾರಂಭಿಸಿದೆ. ಇದಕ್ಕೆ ಕಾರಣವಾಗಿದ್ದು, ನಾಲ್ಕು ತಿಂಗಳ ಹಿಂದೆ ಅವರು ತೆಗೆದುಕೊಂಡ ಹೆಜ್ಜೆ. ಅಷ್ಟಕ್ಕೂ ಅವರೇನು ಮಾಡಿದ್ದರು ಅಂತೀರಾ? ಇಲ್ಲಿದೆ ವಿವರ
ಇದನ್ನೂ ಓದಿ: ಅಂಬಿ ಅಂತ್ಯಕ್ರಿಯೆ: ಒಂದಾಗಲೇ ಇಲ್ಲ ಈ ಸ್ಯಾಂಡಲ್‌ವುಡ್ ಸ್ಟಾರ್ಸ್
ಜುಲೈ 21ರಂದು ಬೆಳಿಗ್ಗೆಯೇ ಮದ್ದೂರು ಸಬ್ ರಿಜಿಸ್ಟ್ರಾರ್ ಕಚೇರಿಗೆ ಪುತ್ರ ಅಭಿಷೇಕ್ ಜೊತೆಗೆ ತೆರಳಿದ್ದ ಅಂಬಿ ತನ್ನ ಹುಟ್ಟೂರು ಮಂಡ್ಯದ ದೊಡ್ಡ ಅರಸಿನಕೆರೆಯ ಏಳೂವರೆ ಎಕರೆ ಜಮೀನು ಸೇರಿದಂತೆ ತನ್ನೆಲ್ಲಾ ಆಸ್ತಿಯನ್ನು ಮಗನ ಹೆಸರಿಗೆ ವಿಲ್ ಮಾಡಿಸಿದ್ದರು. ಸಂಜೆ ವೇಳೆಗೆ ಕಾನೂನು ಪ್ರಕ್ರಿಯೆ ಮುಗಿಸಿದ್ದ ಅಂಬರೀಶ್ ತಮ್ಮ ಆಸ್ತಿಯನ್ನು ಅಧಿಕೃತವಾಗಿ ಅಭಿ ಹೆಸರಿಗೆ ನೋಂದಾಯಿಸಿದ ಬಳಿಕ ಬೆಂಗಳೂರಿಗೆ ಮರಳಿದ್ದರು.
ಇದನ್ನೂ ಓದಿ: ಕಂಠೀರವ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಅಭಿಮಾನಿಗಳ ವಿರೋಧ
ಅಂಬರೀಶ್ ಈ ನಡೆ ಗಮನಿಸಿದರೆ ಅವರಿಗೆ ತಮ್ಮ ಸಾವಿನ ಸುಳಿವು ಮೊದಲೇ ಸಿಕ್ಕಿತ್ತಾ ಎಂಬುವುದು ಕಾಡುವುದು ಸಹಜ. ಅದೇನಿದ್ದರೂ ಸದ್ಯ 'ಜಲೀಲ' ನಮ್ಮನ್ನಗಲಿದ್ದಾರೆ, ಆದರೆ ಅವರ ನೆನಪುಗಳು ಮಾತ್ರ ಅಜರಾಮರ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.