
ದೀಸಪುರ್(ನ.28): ಅಮೆರಿಕದಲ್ಲಿ ತೀವ್ರತರವಾದ ಹವಾಮಾನ ಬದಲಾವಣೆಗಳಾಗುತ್ತಿದ್ದು, ವಾಷಿಂಗ್ಟನ್‌ನಲ್ಲಿ ಇತ್ತೀಚೆಗೆ ಅತ್ಯಂತ ಶೀತ ಹವಾಮಾನ ಕಂಡು ಬಂದಿತ್ತು. ಆದರೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಈ ಕುರಿತು ಟ್ವೀಟ್ ಮಾಡಿ, ಭಾರತೀಯ ಯುವತಿಯೋರ್ವಳಿಂದ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ.
ಅಸ್ಸೋಂನ ಅಸ್ಥಾ ಸರ್ಮಾಹ್ ಎಂಬ ಯುವತಿ ಟ್ರಂಪ್ ಟ್ವೀಟ್‌ಗೆ ಮರು ಟ್ವೀಟ್ ಮಾಡಿ ವೆದರ್ ಮತ್ತು ಕ್ಲೈಮೆಟ್ ಎರಡೂ ಒಂದೇ ಅಲ್ಲ ಎಂದು ತಿಳಿಸಿದ್ದಾಳೆ. ಅಲ್ಲದೇ ಈ ಕುರಿತು ಬೇಕಾದರೆ ತಾನು ಎರಡನೇ ಕ್ಲಾಸ್‌ನಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ತನ್ನ ಜೊತೆಗಿದ್ದ ಎನ್‌ಸೈಕ್ಲೋಪಿಡಿಯಾ ಕೊಡುವೆ ಎಂದು ಅಸ್ಥಾ ಟ್ರಂಪ್ ಕಾಲೆಳೆದಿದ್ದಾಳೆ.
ಇನ್ನು ಅಸ್ಥಾ ಮಾಡಿರು ರಿಟ್ವೀಟ್‌ಗೆ ವಿಶ್ವದಾದ್ಯಂತ ಸುಮಾರು 22,000 ಲೈಕ್ಸ್ ಗಳು ಬಂದಿದ್ದು, ಈಕೆಯ ಟ್ವೀಟ್ ಸುಮಾರು 5,100 ಬಾರಿ ರಿಟ್ವೀಟ್ ಮಾಡಲಾಗಿದೆ.
ಅಲ್ಲದೇ ಅಸ್ಥಾಳಿಗೆ ಹವಾಮಾನ ವೈಪರೀತ್ಯ ಹಾಗೂ ಜಾಗತಿಕ ತಾಪಮಾನದಿಂದಾಗಿ ಅರೇಬಿಯನ್ ಸಮುದ್ರದಲ್ಲಿ ಆಗುತ್ತಿರುವ ಬದಲಾವಣೆ ಕುರಿತು ಅಧ್ಯಯನ ನಡೆಸಲು ಇಂಟರ್ನಶಿಪ್ ಕೂಡ ಆಫರ್ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.