
ಚೆನ್ನೈ(ಡಿ.24): ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದಿಂದ ತೆರವಾದ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದೆ. ಬೃಹತ್ ಪ್ರಮಾಣದಲ್ಲಿ ಮತಗಳನ್ನು ಪಡೆದುಕೊಂಡು ಶಶಿಕಲಾ ಬಣದ ಟಿಟಿವಿ ದಿನಕರನ್ ವಿಜಯಿಯಾಗಿದ್ದಾರೆ. ಇದರಿಂದ ಜಯಲಲಿತಾ ಸ್ಥಾನಕ್ಕೆ ಇದೀಗ ದಿನಕರನ್ ಆಯ್ಕೆ ನಡೆದಿದೆ.
ಚೆನ್ನೈನ ಆರ್.ಕೆ. ನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಜಯಲಲಿತಾ 2016ರ ಡಿಸೆಂಬರ್ 5ರಂದು ನಿಧನರಾಗಿದ್ದರು. ಜಯಾ ನಿಧನದ ಒಂದು ವರ್ಷದ ಬಳಿಕ ಆರ್.ಕೆ. ನಗರ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಜಯಾ ನಿಧನದ ನಂತರ ಅಣ್ಣಾಡಿಎಂಕೆ ಪಕ್ಷ ಭಾಗವಾಗಿದ್ದು, ಈ ಚುನಾವಣೆ ಸಿಎಂ ಪಳನಿಸ್ವಾಮಿ ಹಾಗೂ ಶಶಿಕಲಾ ಬಣಗಳ ನಡುವೆ ಪೈಪೋಟಿಗೆ ಕಾರಣವಾಗಿತ್ತು.
ಪಳನಿಸ್ವಾಮಿ ಬಣದಿಂದ ಹಿರಿಯ ನಾಯಕ ಎ ಮಧುಸೂದನ್, ಶಶಿಕಲಾ ಬಣದಿಂದ ಟಿಟಿವಿ ದಿನಕರನ್ ಹಾಗೂ ಡಿಎಂಕೆ ಪಕ್ಷದಿಂದ ಮರುಧು ಗಣೇಶ್ ಸ್ಪರ್ಧೆ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.