
ಪಟ್ನಾ (ಡಿ.24): ಕಳ್ಳರನ್ನು ಹಿಡಿಯಲು ಪೊಲೀಸರು ನಾನಾ ಟ್ರಿಕ್'ಗಳನ್ನು ಬಳಸುತ್ತಾರೆ. ಇಲ್ಲೊಬ್ಬ ಕಳ್ಳನನ್ನು ಹಿಡಿಯಲು ಪೊಲೀಸರು ಅನುಸರಿಸಿದ ವಿಧಾನ ಬಹಳ ಮಜವಾಗಿದೆ. ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ನಮಗೆಲ್ಲರಿಗೂ ಗೊತ್ತು. ಅವರನ್ನು ಬಳಸಿಕೊಂಡು ಕಳ್ಳನನ್ನು ಹಿಡಿದಿದ್ದಾರೆ. ಅರೆ ಅವಳಿಗೂ, ಇದಕ್ಕೂ ಏನ್ ಸಂಬಂಧ ಅಂತ ತಲೆಕರೆದುಕೊಳ್ಳಬೇಡಿ. ವಿಷಯ ಏನಪ್ಪಾ ಅಂದ್ರೆ, ಬಿಜೆಪಿ ಮುಖಂಡ ಸಂಜಯ್ ಕುಮಾರ್ ಅವರ ದುಬಾರಿ ಫೋನೊಂದನ್ನು ಪಾಟ್ನಾದ ದರ್ಬಾಂಗದಲ್ಲಿ ಮಹಮ್ಮದ್ ಹಸ್ನೈನ್ ಎಂಬಾತ ಕದ್ದುಕೊಂಡು ಓಡಿ ಹೋಗುತ್ತಾನೆ. ಸಂಜಯ್ ಕುಮಾರ್ ದರ್ಬಾಂಗ್ ಪೊಲೀಸ್ ಸ್ಟೇಷನ್'ನಲ್ಲಿ ದೂರು ನೀಡುತ್ತಾರೆ. ಮಧುಬಾಲಾ ದೇವಿಯವರಿಗೆ ಕೇಸನ್ನು ವಹಿಸಲಾಗುತ್ತದೆ.
ಫೋನನ್ನು ಕದ್ದುಕೊಂಡು ಹೋದ ಮಹಮ್ಮದ್ ಸ್ವಿಚ್ ಆಫ್ ಮಾಡದೇ ಬಳಸುತ್ತಿರುತ್ತಾರೆ. ಪೊಲೀಸರು ಅವರನ್ನು ಬಂಧಿಸಲು ಸಾಕಷ್ಟು ಬಾರಿ ಯತ್ನಿಸಿದಾಗಲೂ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಳ್ಳುತ್ತಿದ್ದರು. ಕಡೆಗೆ ಮಧುಬಾಲಾ ದೇವಿ ಮಾಸ್ಟರ್ ಪ್ಲಾನ್ ಮಾಡುತ್ತಾರೆ. ಪ್ರತಿದಿನ ಮಹಮ್ಮದ್'ಗೆ ಗರ್ಲ್'ಫ್ರೆಂಡ್ ಅಂತೆ ಕಾಲ್ ಮಾಡುತ್ತಾರೆ. ಮೊದಮೊದಲು ಮಹಮ್ಮದ್ ಆಸಕ್ತಿ ತೋರುವುದಿಲ್ಲ. ನಿನ್ನ ಫೋಟೋ ಕಳುಹಿಸು ಅಂತ ಒಂದು ದಿನ ಹೇಳುತ್ತಾರೆ. ಅವರು ನಯನತಾರಾ ಫೋಟೋವನ್ನು ವಾಟ್ಸಾಪ್ ಮಾಡುತ್ತಾರೆ. ಫೋಟೊವನ್ನು ನೋಡಿ ಮಹಮ್ಮದ್ ಬೋಲ್ಡ್ ಆಗಿ ಬಿಡುತ್ತಾರೆ. ಗರ್ಲ್'ಫ್ರೆಂಡನ್ನು ಭೇಟಿ ಮಾಡಲು ಒಪ್ಪಿ ಅವರು ಹೇಳಿದ ಕಡೆ ಹೋಗುತ್ತಾರೆ. ಅಲ್ಲಿ ಕಡೆಗೂ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗುತ್ತಾರೆ.
ಮಧುಬಾಲಾರವರ ಬುದ್ದಿವಂತಿಕೆ ಉಪಯೋಗಿಸಿ ಕಳ್ಳನನ್ನು ಹಿಡಿದಿದ್ದಕ್ಕಾಗಿ ಪೊಲೀಸ್ ಇಲಾಖೆ ಅವರಿಗೆ ಬಹುಮಾನವನ್ನೂ ಘೋಷಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.