ವಿಚಾರವಾದಿ ಕೆ.ಎಸ್. ಭಗವಾನ್ ಹೇಳಿಕೆಗೆ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ಧಾರವಾಡ, [ಅ.06]: ಮೈಸೂರು ದಸರಾ ಬಗ್ಗೆ ವಿಚಾರವಾದಿ ಕೆ.ಎಸ್. ಭಗವಾನ್ ಹೇಳಿಕೆಗೆ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ಧಾರವಾಡದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, ದಸರಾ ಆಚರಣೆ ಶೋಷಣೆ ಎಂದಿದ್ದ ಭಗವಾನ್ ಮೇಲೆ ಈ ಕೂಡಲೇ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಭಗವಾನ್ ಮತ್ತು ಪ್ರಕಾಶ ರೈ ಹುಚ್ಚುಚ್ಚಾಗಿ ಮಾತಾಡ್ತಾ ಇದ್ದಾರೆ. ಹೀಗೆ ಮಾತಾಡೋರನ್ನು ಒದ್ದು ಒಳಗೆ ಹಾಕಬೇಕು. ಅವರಿಗೆ ಯಾವುದೇ ಸಾಮಾಜಿಕ ಕಾಳಜಿ ಇಲ್ಲ. ಅವರಿಗೆ ನಂಬಿಕೆಗಳು ಇಲ್ಲವಾದರೆ ಬಾಯಿ ಮುಚ್ಚಿಕೊಂಡು ಬಿದ್ದರಬೇಕು. ಮತ್ತೊಬ್ಬರ ನಂಬಿಕೆ ಬಗ್ಗೆ ಯಾಕೆ ಮಾತನಾಡಬೇಕು ಆಕ್ರೋಶ ವ್ಯಕ್ತಪಡಿಸಿದರು.
ಮಹಿಷಾ ಪರ ನಿಂತ ಭಗವಾನ್; ಭಗವಾನ್ ವಿರುದ್ಧ ತಿರುಗಿ ಬಿದ್ದ ಭಕ್ತರು!
ಅವರಿಬ್ಬರೂ ಪ್ರಚಾರದ ತೆವಲಿನಿಂದ ಮಾತಾಡ್ತಾ ಇದ್ದಾರೆ. ಅವರಿಗೆ ಧೈರ್ಯ ಇದ್ದರೆ ಬೇರೆ ಧರ್ಮದ ಬಗ್ಗೆ ಮಾತಾಡಲಿ ಎಂದು ಪ್ರಹ್ಲಾದ್ ಜೋಶಿ ಕೆಂಡಕಾರಿದರು.