ಪಂಚಭೂತಗಳಲ್ಲಿ ಲೀನರಾದ ಧರಂಸಿಂಗ್

Published : Jul 28, 2017, 06:39 PM ISTUpdated : Apr 11, 2018, 12:38 PM IST
ಪಂಚಭೂತಗಳಲ್ಲಿ ಲೀನರಾದ ಧರಂಸಿಂಗ್

ಸಾರಾಂಶ

ಅಜಾತಶತ್ರು, ಹಿರಿಯ ಮುತ್ಸದ್ಧಿ, ಕಾಂಗ್ರೆಸ್ ನ ಶಿಸ್ತಿನ ಸಿಪಾಯಿ ಇನ್ನೂ ನೆನಪು ಮಾತ್ರ. ಹೃದಯಘಾತದಿಂದ ನಿನ್ನೆ ವಿಧಿವಶರಾದ ಮಾಜಿ ಸಿಎಂ ಧರಂಸಿಂಗ್ ಅಂತ್ಯಕ್ರಿಯೆ ಇಂದು ನೆರವೇರಿತು. ಹುಟ್ಟೂರು ಜೇವರ್ಗಿಯ ನೆಲೋಗಿಯ ಅವ್ರ ಜಮೀನಿನಲ್ಲಿಯೇ ರಜಪೂತ ಆರ್ಯ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೀತು. ಮೂರು ಸುತ್ತು ಕುಶಾಲ ತೋಪು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಲಾಯ್ತು.

ಜೇವರ್ಗಿ(ಜು.28): ಅಜಾತಶತ್ರು ಧರಂಸಿಂಗ್ ಇನ್ನು ನೆನಪು ಮಾತ್ರ. ನಿನ್ನೆ ನಿಧನರಾಗಿದ ಧರಂಸಿಂಗ್ ಇಂದು ಪಂಚಭೂತಗಲ್ಲಿ ಲೀನರಾದರು. ಹಿರಿಯ ಪುತ್ರ ವಿಜಯ್ ಸಿಂಗ್ ಅಂತಿಮ ವಿಧಿವಿಧಾನ ಪೂರೈಸಿದರು.  ಬಳಿಕ ರಜಪೂತ ಆರ್ಯ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯ್ತು. ಇನ್ನು ದರ್ಶನ ಪಡೆಯಲು ಜನಸಾಗರವೇ ಹರಿದುಬಂದಿತ್ತು.

ಅಜಾತಶತ್ರು, ಹಿರಿಯ ಮುತ್ಸದ್ಧಿ, ಕಾಂಗ್ರೆಸ್ ನ ಶಿಸ್ತಿನ ಸಿಪಾಯಿ ಇನ್ನೂ ನೆನಪು ಮಾತ್ರ. ಹೃದಯಘಾತದಿಂದ ನಿನ್ನೆ ವಿಧಿವಶರಾದ ಮಾಜಿ ಸಿಎಂ ಧರಂಸಿಂಗ್ ಅಂತ್ಯಕ್ರಿಯೆ ಇಂದು ನೆರವೇರಿತು. ಹುಟ್ಟೂರು ಜೇವರ್ಗಿಯ ನೆಲೋಗಿಯ ಅವ್ರ ಜಮೀನಿನಲ್ಲಿಯೇ ರಜಪೂತ ಆರ್ಯ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೀತು. ಮೂರು ಸುತ್ತು ಕುಶಾಲ ತೋಪು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಲಾಯ್ತು.

ಶ್ರೀದೇವಲ ಗಣಾಗಪುರ ಕ್ಷೇತ್ರ ಅರ್ಚಕ ದೀಪಕ್ ಭಟ್  ನೇತೃತ್ವದಲ್ಲಿ  ಹಿರಿಯ ಪುತ್ರ ವಿಜಯ್ ಸಿಂಗ್ ಅಂತಿಮ ವಿಧಿವಿಧಾನ ಪೂರೈಸಿದರು. ಬಳಿಕ ಗಂಧದ ಚಕ್ಕದಿಂದ ತಂದೆ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಈ ವೇಳೆ ಕುಟುಂಬಸ್ಥರ, ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿತು.

ಇನ್ನೂ ಅಂತ್ಯಕ್ರಿಯೆಗೂ ಮುನ್ನ ವಿಜಯ್ ಸಿಂಗ್, ತಂದೆಯನ್ನು ನೆನೆದು ಕಣ್ಣೀರು ಹಾಕಿದರು. ದುಃಖದ ಮಡುವಿನಲ್ಲೂ ನೆರೆದಿದ್ದ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್, ಆಪ್ತ ಮಿತ್ರ ಮಲ್ಲಿಕಾರ್ಜುನ ಖರ್ಗೆ, ಸಚಿವೆ  ಉಮಾಶ್ರೀ, ಸಂಸದ ವೀರಪ್ಪ ಮೊಯ್ಲಿ ಸೇರಿದಂತೆ ವಿವಿಧ ಮಠಾಧೀಶರು ಅಂತಿಮ ದರ್ಶನ ಪಡೆದರು.

ಹರಿದು ಬಂದ ಜನಸಾಗರ

ನೆಚ್ಚಿನ ನಾಯಕನ ದರ್ಶನ ಪಡೆಯೋದಕ್ಕೆ ಜನಸಾಗರವೇ ಹರಿದುಬಂದಿತ್ತು. ಇನ್ನೂ ಅಂತ್ಯಕ್ರಿಯೆಗೂ ಮುನ್ನ ಕಲಬುರಗಿಯ ಎನ್.ವಿ.ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೀಡಲಾಗಿತು. ನಂತರ ಜೇವರ್ಗಿಗೆ  ಪಾರ್ಥಿವ ಶರೀರ ರವಾನಿಸಲಾಯಿತು. ನಂತರ ಜೇವರ್ಗಿಯಿಂದ ಹುಟ್ಟೂರು ನೆಲೋಗಿಗೆ ಪಾರ್ಥೀವ ಶರೀರ ಸಾಗಿಸುತ್ತಿದ್ದ ವೇಳೆ  ರಸ್ತೆಯ ಇಕ್ಕೆಲುಗಳಲ್ಲಿ ನಿಂತಿದ ಅಪಾರ ಜನಸ್ತೋಮ, ಅಂತಿಮ ನಮನ ಸಲ್ಲಿಸಿದರು. ನಾಡುಕಂಡ ಅಪ್ರತಿಮ ರಾಜಕಾರಣಿ, ಅಜಾತಶತ್ರು ಇನ್ನು ನೆನಪು ಮಾತ್ರ. ಅವ್ರ ಆತ್ಮಕ್ಕೆ ಶಾಂತಿ ಸಿಗಲಿ, ಆ ದೇವರು ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಕೊಡಲಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ
ಶಾಲಾ-ಕಾಲೇಜು ಹುಡುಗಿಯರಿಗೂ ಋತುಚಕ್ರ ರಜೆ?: ಸಂಪುಟ ಸಭೆಯಲ್ಲಿ ಕಾಯ್ದೆಗೆ ಅನುಮೋದನೆ ಸಾಧ್ಯತೆ