ನಮ್ಮ ಮೆಟ್ರೋ: #hindiBeda ಆಯ್ತು ಈಗ #NonKannadigaEngineersBeda ಆಂದೋಲನ ಶುರು

Published : Jul 28, 2017, 06:27 PM ISTUpdated : Apr 11, 2018, 12:41 PM IST
ನಮ್ಮ ಮೆಟ್ರೋ: #hindiBeda ಆಯ್ತು ಈಗ #NonKannadigaEngineersBeda ಆಂದೋಲನ ಶುರು

ಸಾರಾಂಶ

#Namma MetroHindiBeda ಆಂದೋಲನದ ಯಶಸ್ಸಿನ ನಂತರ ಈಗ #Non-Kannadiga Engineers Beda ಆನ್'ಲೈನ್ ಆಂದೋಲನ ನಡೆಸಲು ಚಿಂತಿನೆ ನಡೆಸಲಾಗಿದೆ ಎಂದು ಇಂಗ್ಲೀಷ್ ಸುದ್ದಿವಾಹಿನಿ ವರದಿ ಮಾಡಿದೆ. 

ಬೆಂಗಳೂರು (ಜು.28): #Namma MetroHindiBeda ಆಂದೋಲನದ ಯಶಸ್ಸಿನ ನಂತರ ಈಗ #Non-Kannadiga Engineers Beda ಆನ್'ಲೈನ್ ಆಂದೋಲನ ನಡೆಸಲು ಚಿಂತಿನೆ ನಡೆಸಲಾಗಿದೆ ಎಂದು ಇಂಗ್ಲೀಷ್ ಸುದ್ದಿವಾಹಿನಿ ವರದಿ ಮಾಡಿದೆ. 

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಖ್ಯಸ್ಥ ಎಸ್.ಜಿ ಸಿದ್ದರಾಮಯ್ಯ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದು, ನಮ್ಮ ಮೆಟ್ರೋದಲ್ಲಿ ಕನ್ನಡಿಗರ ನೇಮಕಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು  ಬಿಎಂಆರ್'ಸಿಗೆ ಶಿಫಾರಸ್ಸು ಮಾಡಿ ಎಂದು ಪತ್ರದಲ್ಲಿ ಕೇಳಿಕೊಂಡಿದ್ದಾರೆ.

ಬಿಎಂಆರ್'ಸಿಯಲ್ಲಿ 7 ಕನ್ನಡೇತರ ಎಂಜಿನೀಯರ್'ಗಳಿದ್ದಾರೆ. ದೇಶದಲ್ಲಿಯೇ ಕರ್ನಾಟಕದಲ್ಲಿ ಹೆಚ್ಚು ಎಂಜಿನೀಯರಿಂಗ್ ಕಾಲೇಜುಗಳಿವೆ. ಸಾಕಷ್ಟು ಕನ್ನಡಿಗರು ಅರ್ಹತೆಯನ್ನು ಹೊಂದಿದ್ದಾರೆ. ಕನ್ನಡೇತರರನ್ನು ನೇಮಕ ಮಾಡಿಕೊಳ್ಳುವುದು ಸರೋಜಿನಿ ಮಯಿಷಿ ವರದಿಯನ್ನು ಉಲ್ಲಂಘಿಸಿದಂತೆ. ಕನ್ನಡೇತರ ಎಂಜಿನೀಯರ್'ಗಳನ್ನು ಕೆಲಸದಿಂದ ತೆಗೆದು ಹಾಕಿರುವ ಬಗ್ಗೆ ಸರ್ಕಾರ ಖಚಿತಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕನ್ನಡೇತರರನ್ನು ಕೆಲಸದಿಂದ ತೆಗೆದು ಹಾಕಿ ಅವರ ಜಾಗಕ್ಕೆ ಕನ್ನಡಿಗರನ್ನು ನೇಮಕ ಮಾಡಿಕೊಳ್ಳಬೇಕು. ಒಂದು ವೇಳೆ ಇವರ ಪ್ರಸ್ತಾವನೆಯನ್ನು ಒಪ್ಪಿದ್ದೇ ಆದಲ್ಲಿ ಕನ್ನಡೇತರರಿಗೆ ಕಗ್ಗಂಟಾಗಿ ಪರಿಣಮಿಸಲಿದೆ. ಈ ಚಿಂತನೆ ವಿಷವಾಗಿ ಪರಿಣಮಿಸಲಿದೆ.  

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?