ನವಾಝ್ ಶರೀಫ್ ರಾಜೀನಾಮೆ; ಯಾರಾಗಲಿರುವರು ಪಾಕಿಸ್ತಾನದ ಮುಂದಿನ ಪ್ರಧಾನಿ?

Published : Jul 28, 2017, 06:08 PM ISTUpdated : Apr 11, 2018, 12:44 PM IST
ನವಾಝ್ ಶರೀಫ್ ರಾಜೀನಾಮೆ; ಯಾರಾಗಲಿರುವರು ಪಾಕಿಸ್ತಾನದ ಮುಂದಿನ ಪ್ರಧಾನಿ?

ಸಾರಾಂಶ

ಪಾಕಿಸ್ತಾನ ಪ್ರಧಾನಿ ನವಾಝ್ ಶರೀಫ್'ರನ್ನು ಸುಪ್ರೀಂ ಕೋರ್ಟ್ ಪದಚ್ಯುತಗೊಳಿಸಿದ್ದು, ಮುಂದಿನ ಪ್ರಧಾನಿ ಯಾರಾಗಾಲಿದ್ದಾರೆ ಎಂಬುವುದರ ಕುರಿತು ಚರ್ಚೆಗಳು ಆರಂಭವಾಗಿವೆ. ಪಾಕಿಸ್ತಾನ ಮುಸ್ಲಿಮ್ ಲೀಗ್ (ನವಾಝ್) ಪಕ್ಷದ ಮುಖ್ಯಸ್ಥನಾಗಿರುವುದರಿಂದ ನವಾಝ್ ಶರೀಫ್ ತಮ್ಮ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಅಧಿಕಾರ ಹೊಂದಿದ್ದಾರೆ.

ಇಸ್ಲಾಮಾಬಾದ್(ಜು.28): ಪಾಕಿಸ್ತಾನ ಪ್ರಧಾನಿ ನವಾಝ್ ಶರೀಫ್'ರನ್ನು ಸುಪ್ರೀಂ ಕೋರ್ಟ್ ಪದಚ್ಯುತಗೊಳಿಸಿದ್ದು, ಮುಂದಿನ ಪ್ರಧಾನಿ ಯಾರಾಗಾಲಿದ್ದಾರೆ ಎಂಬುವುದರ ಕುರಿತು ಚರ್ಚೆಗಳು ಆರಂಭವಾಗಿವೆ. ಪಾಕಿಸ್ತಾನ ಮುಸ್ಲಿಮ್ ಲೀಗ್ (ನವಾಝ್) ಪಕ್ಷದ ಮುಖ್ಯಸ್ಥನಾಗಿರುವುದರಿಂದ ನವಾಝ್ ಶರೀಫ್ ತಮ್ಮ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಅಧಿಕಾರ ಹೊಂದಿದ್ದಾರೆ.

ಪ್ರಧಾನಿ ಹುದ್ದೆಗೆ ನವಾಝ್ ಪುತ್ರಿ  ಮರ್ಯಮ್ ನವಾಝ್ ಹೆಸರು ಕೇಳಿ ಬರುತ್ತಿದ್ದರೂ, ಅವರು ಚುನಾಯಿತ ಪ್ರತಿನಿಧಿಯಲ್ಲದಿರುವುದರಿಂದ ಪ್ರಧಾನಿಯಾಗುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ.

ನವಾಝ್ ಶರೀಫ್ ತಮಗೆ ನಿಷ್ಠರಾಗಿರುವ ಯಾರಾನ್ನಾದರೂ ಪ್ರಧಾನಿಯಾಗಿ ಆಯ್ಕೆ ಮಾಡುವ ಸಾಧ್ಯತೆಗಳು ಹೆಚ್ಚಿವೆ.  ಸಂಸತ್ತಿನಲ್ಲಿ ನವಾಝ್ ಪಕ್ಷವು ಬಹುಮತವನ್ನು ಹೊಂದಿರುವುದರಿಂದ, ಆ ಅಭ್ಯರ್ಥಿಯ ಆಯ್ಕೆಗೆ ಯಾವುದೇ ಅಡಚಣೆಗಳು ಇಲ್ಲವಾಗಿದೆ.  

ಶಹಬಾಝ್ ಶರೀಫ್:

ನವಾಝ್ ಶರೀಫ್  ತಾತ್ಕಾಲಿಕವಾಗಿ ಯಾರನ್ನಾದರೂ ಪ್ರಧಾನಿ ಮಾಡಿ, ಬಳಿಕ ತನ್ನ ಸಹೋದರ  ಶಹಬಾಝ್ ಶರೀಫ್'ರನ್ನು ಆ ಸ್ಥಾನದಲ್ಲಿ ಕುಳ್ಳರಿಸುವ ಸಾಧ್ಯತೆ ಇದೆ. ಶಹಬಾಝ್ ಶರೀಫ್ ಹಾಲಿ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಧಾನಿಯಾಗಬೇಕಾದರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಳಿಕ ಸಂಸತ್ತಿಗೆ ಸ್ಪರ್ಧಿಸಬೇಕಾಗುತ್ತದೆ.

ಖ್ವಾಝಾ ಆಸಿಫ್:

ನವಾಝ್ ಶರೀಫ್ ಆಪ್ತರಲ್ಲಿ ಒಬ್ಬರಾಗಿರುವ ಖ್ವಾಝಾ ಆಸಿಫ್ ಹೆಸರು ಕೂಡಾ ಪ್ರಧಾನಿ ಹುದ್ದೆಗೆ ಕೇಳಿಬರುತ್ತಿದೆ. ಖ್ವಾಝಾ ಆಸಿಫ್ ಹಾಲಿ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದಾರೆ. ರಕ್ಷಣಾ ಸಚಿವರಾಗಿದ್ದೂ, ಅವರು ಸೇನೆಗೆ ಹೆಚ್ಚಿನ ಅಧಿಕಾರ ನೀಡುವುದರ ಬಗ್ಗೆ ವಿರೋಧಿಸುವವರಾಗಿದ್ದಾರೆ. ಸೇನೆಯ ಬಗ್ಗೆ ಅವರ ಧೋರಣೆಯಿಂದಾಗಿ ನವಾಝ್ ಶರೀಫ್ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿತ್ತು.

ಸರ್ದಾರ್ ಅಯಾಝ್ ಸಾದಿಕ್:

ಪ್ರಧಾನಿ ಹುದ್ದೆಗೆ ಕೇಳಿ ಬರುತ್ತಿರುವ ಇನ್ನೊಂದು ಪ್ರಬಲ ಹೆಸರು ಸಂಸತ್ತಿನ ಸಭಾಪತಿಯಾಗಿರುವ ಸರ್ದಾರ್ ಅಯಾಝ್ ಸಾದಿಕ್ ಅವರದ್ದು. ಸರ್ದಾರ್ ಅಯಾಝ್ ಸಾದಿಕ್'ರು ನವಾಝ್ ಶರೀಫ್ ಆಪ್ತರಷ್ಟೇ ಅಲ್ಲ, ಶರೀಫ್'ರ ಪ್ರಬಲ ವಿರೋಧಿಯಾಗಿರುವ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್'ರನ್ನು ಕಳೆದ ಚುನಾವಣೆಯಲ್ಲಿ ಸೋಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ರೀನ್‌ಲ್ಯಾಂಡ್‌ಗೆ ನ್ಯಾಟೋ ಸೈನಿಕರ ಪ್ರವೇಶ
ದೇಶದ ಶ್ರೀಮಂತ ಪಾಲಿಕೆಗೆ ಮೊದಲ ಬಿಜೆಪಿ ಮೇಯರ್‌?