
ಬೆಂಗಳೂರು(ಅ.29): ಕಾಂಗ್ರೆಸ್'ನಲ್ಲಿ ಯು.ಟಿ. ಖಾದರ್ ಯಾವ ಸ್ಥಾನದಲ್ಲಿದ್ದಾರೋ ಅದೇ ಸ್ಥಾನದಲ್ಲಿ ಬಿ.ಎಂ. ಫಾರೂಕ್ ಅವರನ್ನು ನಾನು ಜೀವಂತವಾಗಿರುವಾಗಲೇ ಕಲ್ಪಿಸುತ್ತೇನೆ ಎಂದು ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹಮದ್ ಖಾನ್ ಅವರಿಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಟಾಂಗ್ ನೀಡಿದರು.
ಬ್ಯಾರಿ ಅಸೋಸಿಯೇಷನ್ ವಾರ್ಷಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯಸಭಾ ಚುನಾವಣೆಯಲ್ಲಿ ಫಾರೂಕ್ ಸೋತರು ನನ್ನ ಜೊತೆ ಇದ್ದರು. ಆದರೆ ನನ್ನವರೆ ನನಗೆ ಮೋಸ ಮಾಡಿದರು ಎಂದು ಪರೋಕ್ಷವಾಗಿ ಬಂಡಾಯ ಶಾಸಕರ ಬಗ್ಗೆ ಕೋಪ ವ್ಯಕ್ತಪಡಿಸಿದರು.
ಧರ್ಮದ ಹೆಸರಿನಲ್ಲಿ ದೇಶ, ಸಮಾಜ ಒಡೆಯುವ ಕೆಲಸ ನಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಒಂದು ದೇಶ, ಒಂದು ಕಾನೂನು ಇದು ನಮ್ಮ ಜಾತ್ಯತೀತ ರಾಷ್ಟ್ರದಲ್ಲಿ ಸಾಧ್ಯವಿಲ್ಲ ಇದಕ್ಕೆ ಅವಕಾಶ ಕೂಡುವುದಿಲ್ಲ ಅಂತಾ ಮಂಗಳೂರಿನಲ್ಲೇ ಹೇಳಿದ್ದೇನೆ. ರಾಷ್ಟಮಟ್ಟದಲ್ಲೇ ಇದು ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಚಿವ ಯು.ಟಿ. ಖಾದರ್, ಜೆಡಿಎಸ್ ನ ರಾಜ್ಯಸಭಾ ಚುನಾವಣಾ ಪರಾಜಿತ ಅಭ್ಯರ್ಥಿ ಬಿ.ಎಂ. ಫಾರೂಕ್ ಮುಂತಾದವರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.