ಮನೆ ಮಾಡಿ ನಾಪತ್ತೆಯಾದ ಮಾಜಿ ಸಂಸದೆ ರಮ್ಯಾ : ಮನೆ ಸುತ್ತಲು ಕಣ್ಗಾವಲು

Published : Oct 29, 2016, 01:03 PM ISTUpdated : Apr 11, 2018, 12:55 PM IST
ಮನೆ ಮಾಡಿ ನಾಪತ್ತೆಯಾದ ಮಾಜಿ ಸಂಸದೆ ರಮ್ಯಾ : ಮನೆ ಸುತ್ತಲು ಕಣ್ಗಾವಲು

ಸಾರಾಂಶ

ಜನರ ಕೈಗೆ ಸುಲಭವಾಗಿ ಸಿಗಲು ಬಸ್ ಸ್ಟಾಂಡ್ ಸನಿಹದಲ್ಲಿ ಮನೆ ಮಾಡೋದಾಗಿ ರಮ್ಯಾ ಅದರಂತೆ ಬಸ್ ಸ್ಟಾಂಡ್'ಗೆ  ಸನಿಹವೇ ಇರೋ ವಿದ್ಯಾನಗರದ ಬಳಿಯ ವಿ.ವಿ.ಸ್ಟೇಡಿಯಂ ಎದುರು ಮನೆ ಮಾಡಿದ್ದಾರೆ.

ಮಂಡ್ಯ(ಅ.29): ಪಟ್ಟಣದಲ್ಲಿ ಮಾಜಿ ಸಂಸದೆ ರಮ್ಯಾ ಮನೆ ಮಾಡಿದ್ದಾರೆ. ಆದರೆ ಈ ಮನೆಯಲ್ಲಿ ರಮ್ಯಾಳ ಸುಳಿವು ಕಾಣ್ತಿಲ್ಲ. ಮನೆಯ ಮುಂದೆ ಮೂರ್ನಾಲ್ಕು ಜನ ಸೆಕ್ಯುರಿಟಿ ಸಿಬ್ಬಂದಿಗಳನ್ನು ಹಾಕಿ ಮನೆಯ ಸುತ್ತಲೂ ಸಿ.ಸಿ.ಟಿವಿ ಹಾಕಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಜನರ ಕೈಗೆ ಸುಲಭವಾಗಿ ಸಿಗಲು ಬಸ್ ಸ್ಟಾಂಡ್ ಸನಿಹದಲ್ಲಿ ಮನೆ ಮಾಡೋದಾಗಿ ರಮ್ಯಾ ಅದರಂತೆ ಬಸ್ ಸ್ಟಾಂಡ್'ಗೆ  ಸನಿಹವೇ ಇರೋ ವಿದ್ಯಾನಗರದ ಬಳಿಯ ವಿ.ವಿ.ಸ್ಟೇಡಿಯಂ ಎದುರು ಮನೆ ಮಾಡಿದ್ದಾರೆ. ಆದರೆ ಈ ಮನೆಯಲ್ಲಿ ಅವರು ಯಾರ ಕೈಗೂ ಸಿಗುತ್ತಿಲ್ಲ. ಮನೆಯ ಗೃಹ ಪ್ರವೇಶದ ವಿಷಯವನ್ನು ಯಾರಿಗೂ ತಿಳಿಸದೆ ರಹಸ್ಯವಾಗಿ ಮಾಡಿರೋ ಮಾಜಿ ಸಂಸದೆ ರಮ್ಯಾ ಮಂಡ್ಯದಲ್ಲಿ ‌ಮನೆ ಮಾಡಿದ್ದು ಯಾಕೆ ಅನ್ನೋದು ಸ್ಥಳೀಯ ಸಾರ್ವಜನಿಕರಿಗೆ ಯಕ್ಷ ಪ್ರಶ್ನೆಯಾಗಿದೆ. ಅಲ್ಲದೆ ಸ್ಥಳೀಯ ಜನರ ನಡುವೆಯಿದ್ದು ಕೆಲಸ ಮಾಡುವುದಾಗಿ ಹೇಳಿದ್ದ ರಮ್ಯಾ ಮನೆಗೆ ಇಷ್ಟೊಂದು ಸೆಕ್ಯೂರಿಟಿ ಇಟ್ಕೋಂಡ್ ಹೇಗೆ ಕೆಲಸ ಮಾಡ್ತಾರೆ? ಅಲ್ಲದೆ ಜನ ಸಾಮಾನ್ಯರ ಕೈಗೆ ಹೇಗೆ ಸಿಗ್ತಾರೆ ಅನ್ನೋ ಬಗ್ಗೆ ಸ್ಥಳೀಯರು ಆರೋಪ ಮಾಡಿದ್ದು,ರಮ್ಯರವರ ನಡೆ ಏನೆಬುಂದನ್ನು ರಮ್ಯಾ ರವರು ಸ್ಪಷ್ಟಪಡಿಸುವಂತೆ ಒತ್ತಾಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅರಾವಳಿ ಉಳಿಸಿ: ಜನವರಿ 7 ರಿಂದ ಯುವ ಕಾಂಗ್ರೆಸ್‌ನಿಂದ 1,000 ಕಿ.ಮೀ ಬೃಹತ್ ಪಾದಾಯಾತ್ರೆ!
ಹೊಸ ವರ್ಷ ಸಂಭ್ರಮದಲ್ಲಿ ಕಾರು ಖರೀದಿಸುವವರಿಗೆ ಶಾಕ್, ಜನವರಿಯಿಂದ ರೆನಾಲ್ಟ್ ಬೆಲೆ ಏರಿಕೆ