ಅವಸರದಲ್ಲಿ ಎಣ್ಣೆ ಹೊಡೆದ, ಹೊಟ್ಟೆಯೇ ಹರಿದು ಹೋಯಿತು! ವಾಸ್ತವದಲ್ಲಿ ಆಗಿದ್ದೇನು?

Published : Jul 03, 2017, 01:17 PM ISTUpdated : Apr 11, 2018, 12:48 PM IST
ಅವಸರದಲ್ಲಿ ಎಣ್ಣೆ ಹೊಡೆದ, ಹೊಟ್ಟೆಯೇ ಹರಿದು ಹೋಯಿತು! ವಾಸ್ತವದಲ್ಲಿ ಆಗಿದ್ದೇನು?

ಸಾರಾಂಶ

 ಕುಡಿಯಲು ದೆಹಲಿಯ ಬಾರ್’ವೊಂದಕ್ಕೆ ಹೋಗಿದ್ದ ವ್ಯಕ್ತಿ ಬಿಳಿ ಹೊಗೆಯಾಡುತ್ತಿದ್ದ ಕಾಕ್’ಟೈಲನ್ನು ಕುಡಿದ್ದಿದ್ದಾನೆ. ಕುಡಿಯುತ್ತಲೇ ಆತನ ಆರೋಗ್ಯ ಕೆಟ್ಟಿದೆ, ಉಸಿರು ಕಟ್ಟಿದಂತಾಗಿದೆ. ಹೊಟ್ಟೆಯೂದಲಾರಂಭಿಸಿದೆ, ಬಹಳ ನೋವಿನಿಂದ ಆತ ನರಳಲಾರಂಭಿಸಿದ್ದಾನೆ. ಆರೋಗ್ಯ ಸ್ಥಿತಿ ಬಹಳ ಗಂಭೀರ ಮಟ್ಟಕ್ಕೆ ತಲುಪಿದೆ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಪರೀಕ್ಷೆಕೊಳಪಡಿಸಿದಾಗ ಆತನ ಹೊಟ್ಟೆಯಲ್ಲಿ ದೊಡ್ಡ ತೂತಾಗಿದೆ. ವಾಸ್ತವದಲ್ಲಿ ಆಗಿದ್ದೇನು?

ನವದೆಹಲಿ: 30 ವರ್ಷ ಪ್ರಾಯದ ವ್ಯಕ್ತಿಯೊಬ್ಬ ಕಾಕ್’ಟೈಲ್ ಕುಡಿದು ಹೊಟ್ಟೆಯಲ್ಲೇ ತೂತು ಮಾಡಿಕೊಂಡ ಘಟನೆ ದೆಹಲಿಯಲ್ಲಿ ನಡೆದಿದೆ.

ಕುಡಿಯಲು ದೆಹಲಿಯ ಬಾರ್’ವೊಂದಕ್ಕೆ ಹೋಗಿದ್ದ ವ್ಯಕ್ತಿ ಬಿಳಿ ಹೊಗೆಯಾಡುತ್ತಿದ್ದ ಕಾಕ್’ಟೈಲನ್ನು ಕುಡಿದ್ದಿದ್ದಾನೆ. ಕುಡಿಯುತ್ತಲೇ ಆತನ ಆರೋಗ್ಯ ಕೆಟ್ಟಿದೆ, ಉಸಿರು ಕಟ್ಟಿದಂತಾಗಿದೆ. ಹೊಟ್ಟೆಯೂದಲಾರಂಭಿಸಿದೆ, ಬಹಳ ನೋವಿನಿಂದ ಆತ ನರಳಲಾರಂಭಿಸಿದ್ದಾನೆ. ಆರೋಗ್ಯ ಸ್ಥಿತಿ ಬಹಳ ಗಂಭೀರ ಮಟ್ಟಕ್ಕೆ ತಲುಪಿದೆ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಪರೀಕ್ಷೆಕೊಳಪಡಿಸಿದಾಗ ಆತನ ಹೊಟ್ಟೆಯಲ್ಲಿ ದೊಡ್ಡ ತೂತಾಗಿದ್ದು, ಹರಿದುಹೋಗಿದ್ದು ಕಂಡುಬಂದಿದೆ.

ವಾಸ್ತವದಲ್ಲಿ ನಡೆದದ್ದೇನು?

ಕಾಕ್’ಟೈಲ್ ಮೇಲೆಯಾಡುತ್ತಿದ್ದ ಬಿಳಿಹೊಗೆಯು  ಲಿಕ್ವಿಡ್ ನೈಟ್ರೋಜನ್’ನದಾಗಿತ್ತು. ಅದರ ಕುದಿಯುವ ಉಷ್ಣಾಂಶ -195.8 ಡಿಗ್ರಿ ಸೆಲ್ಸಿಯಸ್ ಆಗಿರುವುದರಿಂದ, ವಸ್ತುಗಳನ್ನು ತಕ್ಷಣ ತಂಪಾಗಿಸಲು ಅಥವಾ ಫ್ರೀಝ್ ಮಾಡಲು ಅದನ್ನು ಬಳಸುತ್ತಾರೆ.

ಕಂಪ್ಯೂಟರ್’ಗಳನ್ನು ತಂಪಾಗಿಸಲು, ವೈದ್ಯಕೀಯ ಉಪಕರಣಗಳನ್ನು ಫ್ರೀಝ್ ಮಾಡಲು  ಮುಂತಾದ ಉದ್ದೇಶಗಳಿಗೆ ಅದನ್ನು ಉಪಯೋಗಿಸುತ್ತಾರೆ. ದ್ರವ ವಸ್ತುವಿನಲ್ಲಿ ಲಿಕ್ವಿಡ್ ನೈಟ್ರೋಜನನ್ನು ಬೆರೆಸಿದಾದಲ್ಲಿ, ಬಳಸುವ ಮೊದಲು ಅದು ಹೊಗೆಯ ರೂಪದಲ್ಲಿ ಸಂಪೂರ್ಣವಾಗಿ ಆವಿಯಾಗುವವೆರೆಗೆ ಕಾಯಬೇಕು.

ಅಲ್ಲದೇ 20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಲಿಕ್ವಿಡ್ ನೈಟ್ರೋಜನ್ ಹಿಗ್ಗುವ ಪ್ರಮಾಣ 1:694 ಆಗಿದೆ. ಅಂದರೆ, 1 ಲೀಟರ್ ಲಿಕ್ವಿಡ್ ನೈಟ್ರೋಜನ್ 20 ಡಿಗ್ರಿ ತಾಪಮಾನದಲ್ಲಿ 694 ಲೀಟರ್’ನಷ್ಟು ಗ್ಯಾಸ್ ಆಗಿ ಪರಿವರ್ತನೆಗೊಳ್ಳುತ್ತದೆ.

ಮೇಲಿನ ಘಟನೆಯಲ್ಲಿ ಆ ವ್ಯಕ್ತಿ ಲಿಕ್ವಿಡ್ ನೈಟ್ರೋಜನ್ ಆವಿಯಾಗುವ ಮುಂಚೆಯೇ ಕಾಕ್’ಟೈಲನ್ನು ಕುಡಿದಿದ್ದಾನೆ. ಹೊಟ್ಟೆಗೆ ಸೇರಿದ ತಕ್ಷಣ ಗ್ಯಾಸ್’ಗೆ ಹಿಗ್ಗಲು ಆರಂಭಿಸಿದೆ, ಅದರಿಂದ ಹೊಟ್ಟೆಯೂ ಕೂಡಾ ಹಿಗ್ಗುತ್ತಾ ಹೋಗಿದೆ. ಕೊನೆಗೆ ಹೊಟ್ಟೆಯಲ್ಲೇ ಬಹಳ ದೊಡ್ಡ ತೂತನ್ನೇ ಕೊರೆದಿದೆ.

ಈ ಘಟನೆ 2 ತಿಂಗಳ ಹಿಂದೆ ನಡೆದಿದ್ದು, ಕೆಲದಿನಗಳ ಮಟ್ಟಿಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದನು. ಆತ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ. ಆ ಘಟನೆ ಬಳಿಕ ನಾನು ಕುಡಿಯುವುದನ್ನೇ ನಿಲ್ಲಿಸಿದ್ದೇನೆ ಎಂದು ಆತ ಹೇಳಿದ್ದಾನೆ.

(ಸಾಂದರ್ಭಿಕ ಚಿತ್ರ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!