
ನವದೆಹಲಿ(ಜು.03): ಜಿಎಸ್‌ಟಿ ಹಾಗೂ ಸಬ್ಸಿಡಿ ಕಡಿತದಿಂದಾಗಿ ಇನ್ನು ಮುಂದೆ ಅಡುಗೆ ಅನಿಲ (ಎಲ್‌ಪಿಜಿ)ಕ್ಕೆ 32 ರೂ. ಹೆಚ್ಚು ಪಾವತಿಸಬೇಕು. ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸುವ ಕಡ್ಡಾಯ ತಪಾಸಣೆ, ಅಡುಗೆ ಅನಿಲ ಸಂಪರ್ಕಕಕ್ಕೆ ಆಡಳಿತಾತ್ಮಕ ಶುಲ್ಕ, ಸ್ಥಾಪನೆ, ಹೆಚ್ಚುರಿ ಸಿಲಿಂಡರ್ ವ್ಯವಸ್ಥೆ ಜಿಎಸ್‌ಟಿ ಶೇ.18ರ ಸ್ಲಾಬ್‌ನಲ್ಲಿ ಬರಲಿದೆ.
ಆದರೆ, ಎಲ್‌ಪಿಜಿ ಶೇ.5ರ ಜಿಎಸ್‌ಟಿ ಸ್ಲಾಬ್ ವ್ಯಾಪ್ತಿಗೆ ಬರುವುದು. ಈ ಮೊದಲು ದಿಲ್ಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಹಸಿರು ಇಂಧನಕ್ಕೆ ತೆರಿಗೆ ವಿಧಿಸುತ್ತಿರಲಿಲ್ಲ. ಶೇ. 2ರಿಂದ ಶೇ.4ರಷ್ಟು ವ್ಯಾಟ್ ಶುಲ್ಕ ಮಾತ್ರ ವಿಧಿಸಲಾಗುತ್ತಿತ್ತು. ಜಿಎಸ್‌ಟಿ ಜಾರಿ ನಂತರ ಇಂಧನಕ್ಕೆ ಕರ ವಿಧಿಸದ ರಾಜ್ಯಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 12-15 ರೂ. ಹೆಚ್ಚಾಗಬಹುದು. ಉಳಿದೆಡೆ, ಆಯಾ ರಾಜ್ಯಗಳ ವ್ಯಾಟ್ ಹಾಗೂ ಜಿಎಸ್‌ಟಿ ತೆರಿಗೆ ದರದ ವ್ಯತ್ಯಾಸ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ಜೂನ್‌ನಿಂದ ಸಬ್ಸಿಡಿ ಮೊತ್ತ ಕಡಿತಗೊಳಿಸಿರುವುದರಿಂದ ಸಿಲಿಂಡರ್ ದರ ಮತ್ತೂ ಹೆಚ್ಚಲಿದೆ. ಜೂನ್‌ವರೆಗೆ 119.85 ರೂ. ಸಬ್ಸಿಡಿ ದೊರೆಯುತ್ತಿತ್ತು. ಹೊಸ ಅಧಿಸೂಚನೆಯಂತೆ ಇನ್ನು ಮುಂದೆ ಬ್ಯಾಂಕ್ ಖಾತೆಗೆ ಬರುವ ಸಬ್ಸಿಡಿ ಹಣ 107ರೂ. ಮಾತ್ರ. ಜಿಎಸ್‌ಟಿ ಹಾಗೂ ಸಬ್ಸಿಡಿ ಕಡಿತದಿಂದ ಪ್ರತಿ ಸಿಲಿಂಡರ್ ಬೆಲೆ ಅಂದಾಜು 32 ರೂ. ಹೆಚ್ಚಾಗಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.