ಕೇಜ್ರಿವಾಲ್‌ಗೆ ದಿಲ್ಲಿ ಕಿರೀಟ, ಏಕದಿನ ಸರಣಿ ಸೋತ ಭಾರತ; ಫೆ.11ರ ಟಾಪ್ 10 ಸುದ್ದಿ!

By Suvarna News  |  First Published Feb 11, 2020, 5:04 PM IST

ತೀವ್ರ ಕುತೂಹಲ ಕೆರಳಿಸಿದ್ದ ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್ ಭರ್ಜರಿ ಗೆಲುವು ಸಾಧಿಸಿ ದಿಲ್ಲಿ ಗದ್ದುಗೆ ಏರಿದೆ. ಇತ್ತ ಕಿವೀಸ್ ನಾಡಿನಲ್ಲಿ ಟೀಂ ಇಂಡಿಯಾ ಏಕದಿನ ಸರಣಿ ಕೈಚೆಲ್ಲಿದೆ. ರಾಜ್ಯದಲ್ಲಿ ನೂತನ ಸಚಿವರ ಖಾತೆ ಹಂಚಿಕೆಯಲ್ಲಿ ಬದಲಾವಣೆಯಾಗಿದೆ. ಸಾಲದ ಸುಳಿಯಲ್ಲಿ ಅನಿಲ್ ಅಂಬಾನಿ, ಬಾಲಿವುಡ್ ಲವ್ ಬ್ರೇಕಪ್ ಕಹಾನಿ ಸೇರಿದಂತೆ ಫಬ್ರವರಿ 11ರ ಟಾಪ್ 10 ಸುದ್ದಿ ಇಲ್ಲಿವೆ.


‘ಆಪ್’ ಕಾ ದಿಲ್ಲಿ: ಕೇಜ್ರಿ ಕುಳಿತರು ಮತ್ತೆ ಗದ್ದುಗೆಯಲ್ಲಿ!

Latest Videos

ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮುಗಿದಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ.

ಕುಂಠಿತಗೊಳ್ಳುತ್ತಿದೆ ಮೋದಿ ಹವಾ? 2 ವರ್ಷದಲ್ಲಿ 7 ರಾಜ್ಯ ಕಳೆದುಕೊಂಡ ಬಿಜೆಪಿ!

 ದೆಹಲಿ ಸೇರಿದಂತೆ ಬಿಜೆಪಿ ನೇತೃತ್ವದ NDA ಕಳೆದೆರಡು ವರ್ಷಗಳಲ್ಲಿ ಒಟ್ಟು 7 ರಾಜ್ಯಗಳನ್ನು ಕಳೆದುಕೊಂಡಿದೆ. 12 ರಾಜ್ಯಗಳಲ್ಲಿ ಬಿಜೆಪಿ ವಿರೋಧ ಪಕ್ಷಗಳೇ ಅಧಿಕಾರದಲ್ಲಿವೆ. ಕೇವಲ 16 ರಾಜ್ಯಗಳಲ್ಲಷ್ಟೇ NDA ಸರ್ಕಾರವಿದೆ. ಇನ್ನು ಇಲ್ಲಿ ಕೇವಲ ಶೇ. 42ರಷ್ಟು ಜನಸಂಖ್ಯೆ ಮಾತ್ರವಿದೆ ಎಂಬುವುದು ಉಲ್ಲೇಖನೀಯ.

ಪ್ರೇಮಿಗಳ ದಿನಕ್ಕೂ ಕೇಜ್ರಿಗೂ ಅವಿನಾಭಾವ ಸಂಬಂಧ: ಫೆ.14ಕ್ಕೆ ಪ್ರಮಾಣವಚನ?

ದೆಹಲಿ ಜನತೆ ಮತ್ತೊಮ್ಮೆ ಅರವಿಂದ ಕೇಜ್ರೀವಾಲ್‌ರನ್ನು ಸಿಎಂ ಆಗಿ ಆಯ್ಕೆ ಮಾಡಿದ್ದಾರೆ.  ಕೆಲವೇ ದಿನಗಳಲ್ಲಿ ಕೇಜ್ರೀವಾಲ್ ಮೂರನೇ ಬಾರಿ ದೆಹಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಸದ್ಯ ಅರವಿಂದ್ ಕೇಜ್ರೀವಾಲ್ ಫೆಬ್ರವರಿ 14 ರಂದು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸ್ತಾರಾ? ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ಯಾಕೆಂದರೆ ಕೇಜ್ರೀವಾಲ್ ಹಾಗೂ ಪ್ರೇಮಿಗಳ ದಿನಕ್ಕೂ ಅವಿನಾಭಾವ ಸಂಬಂಧವೊಂದಿದೆ.

ಪಾಟೀಲರ ಮುನಿಸಿಗೆ ಮದ್ದೆರದ ಸಿಎಂ; ಕೊನೆಗೂ ಆಯ್ತು ಖಾತೆ ಬದಲು!

ಅರಣ್ಯ ಖಾತೆ ಕೊಟ್ಟಿದ್ದಕ್ಕೆ ಬಿಸಿ ಪಾಟೀಲ್ ಮುನಿಸಿಕೊಂಡಿದ್ದರು. ಇದೀಗ ಸಿಎಂ, ಪಾಟೀಲರ ಮುನಿಸಿಗೆ ಮದ್ದರೆದಿದ್ದಾರೆ.  ಬಿ ಸಿ ಪಾಟೀಲರಿಗೆ ಅರಣ್ಯ ಖಾತೆ ಬದಲು ಕೃಷಿ ಖಾತೆ ನೀಡಿದ್ದಾರೆ. ಈ ಮೊದಲು ಬಸವರಾಜ್ ಬೊಮ್ಮಾಯಿ ಬಳಿ ಕೃಷಿ ಖಾತೆಯಿತ್ತು. ಅದನ್ನು ಪಾಟೀಲರಿಗೆ ನೀಡಲಾಗಿದೆ. ಆನಂದ್ ಸಿಂಗ್ ಅವರಿಗೆ ಅರಣ್ಯ ಹಾಗೂ ಪರಿಸರ ಖಾತೆ ಕೊಡಲಾಗಿದೆ. 

ಭಾರತಕ್ಕೆ ತಿರುಗೇಟು, ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ನ್ಯೂಜಿಲೆಂಡ್!

ತವರಿನಲ್ಲಿ ಟಿ20 ಸರಣಿ ಸೋತು ತೀವ್ರ ಟೀಕೆಗೆ ಗುರಿಯಾಗಿದ್ದ ನ್ಯೂಜಿಲೆಂಡ್ ಏಕದಿನ ಸರಣಿಯಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿದೆ. ಟಿ20 ಕ್ಲೀನ್ ಸ್ವೀಪ್ ಸೋಲಿಗೆ ಅಷ್ಟೇ ಪ್ರಬಲ ತಿರುಗೇಟು ನೀಡಿದೆ. 3ನೇ ಏಕದಿನ ಪಂದ್ಯದಲ್ಲೂ ಗೆಲುವು ಸಾಧಿಸೋ ಮೂಲಕ ನ್ಯೂಜಿಲೆಂಡ್ ಏಕದಿನ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. 

ಬಾಲಿವುಡ್ ಫೇಮಸ್ ಲವ್ ಬ್ರೇಕಪ್‌ ಜೋಡಿಗಳಿವು!

ಜಗತ್ತಿನ ಎಲ್ಲಾ ಪ್ರೀತಿಯೂ ಯಶಸ್ವಿಯಾಗುವುದಿಲ್ಲ. ಅದು ಒಂದಷ್ಟು ಖುಷಿ, ಒಂದಷ್ಟು ಬೇಸರವನ್ನು ಬಿಟ್ಟು ಹೋಗುತ್ತದೆ. ಬಾಲಿವುಡ್ ಜಗತ್ತಿನಲ್ಲಿ ಪ್ರೀತಿ ಬ್ರೇಕಪ್‌ನಲ್ಲಿ ಅಂತ್ಯವಾದ ಜೋಡಿಗಳಿವರು! 

ಬಂದೇಬಿಡ್ತು ವರ್ಷದ ಮೊದಲ ರೆಡ್‌ಮಿ ಫೋನ್; ಮತ್ತೆ ಮತ್ತೆ ಬೆಲೆ ಚೆಕ್‌ ಮಾಡೋದು ಪಕ್ಕಾ!

ಜನಪ್ರಿಯ ಮೊಬೈಲ್ ಕಂಪನಿ  ರೆಡ್‌ಮಿಯು 2020ರ ಮೊದಲ ಸ್ಮಾರ್ಟ್‌ಫೋನನ್ನು ಬಿಡುಗಡೆಮಾಡಿದೆ. ಚೀನಾದ ಸ್ಮಾರ್ಟ್‌ಫೋನ್ ದಿಗ್ಗಜ ಶ್ಯೋಮಿಯ ಉಪಸಂಸ್ಥೆಯಾಗಿರುವ ರೆಡ್‌ಮಿಯು ಈಗ 8A ಡ್ಯುಯಲ್ ಎಂಬ ಮಾಡೆಲನ್ನು ಭಾರತದ ಮಾರುಕಟ್ಟೆಗೆ ಬಿಟ್ಟಿದೆ.

12 ವರ್ಷದ ಹಿಂದೆ ಜಗತ್ತಿನ 6 ನೇ ಅತಿದೊಡ್ಡ ಶ್ರೀಮಂತ, ಈಗ ಆಸ್ತಿ ‘ಸೊನ್ನೆ!

ಒಂದು ಕಾಲದಲ್ಲಿ 500 ರು.ಗೆ ಮೊಬೈಲ್‌ ಫೋನ್‌ಗಳನ್ನು ಒದಗಿಸುವ ಮೂಲಕ ದೇಶದಲ್ಲಿ ಮೊಬೈಲ್‌ ಕ್ರಾಂತಿ ಮಾಡಿದ್ದ ರಿಲಯನ್ಸ್‌ ಕಮ್ಯುನಿಕೇಶನ್‌ ಕಂಪನಿ ಈಗ ದಿವಾಳಿಯಾಗಿದೆ. ಅದರ ಒಡೆಯ ಅನಿಲ್‌ ಅಂಬಾನಿ ಇಂಗ್ಲೆಂಡ್‌ನ ಕೋರ್ಟ್‌ ಮುಂದೆ ಸಾಲ ತೀರಿಸಲು ನನ್ನಲ್ಲಿ ನಯಾಪೈಸೆ ಹಣ ಇಲ್ಲ ಎಂದು ಹೇಳಿದ್ದಾರೆ.


ಎಚ್‌ಡಿಕೆ ಕಿರುಕುಳದಿಂದ ಜೆಡಿಎಸ್‌ ತೊರೆದೆ ಎಂದ ನೂತನ ಸಚಿವ

ಜೆಡಿಎಸ್‌ ಶಾಸಕನಾಗಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತವರ ಕುಟುಂಬದರು ನೀಡಿದ ಕಿರುಕುಳದಿಂದ ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ ಎಂದು ಪೌರಾಡಳಿತ ಮತ್ತು ತೋಟಗಾರಿಕೆ ಸಚಿವ ಕೆ.ಸಿ. ನಾರಾಯಣಗೌಡ ಹೇಳಿದ್ದಾರೆ.

ಹೆಂಡ್ತಿಗಾಗಿ ನಿರ್ಮಾಪಕರ ಮೇಲೆ ಕೈ ಮಾಡಿದ್ದ ಜಗ್ಗೇಶ್, ಚಿತ್ರರಂಗದಿಂದಲೇ ಬ್ಯಾನ್ ಆಗಿದ್ರು!

ಜಗ್ಗೇಶ್‌ ಹೆಂಡತಿ ಪರ ನಿಂತ ಕಾರಣಕ್ಕೆ ಚಿತ್ರರಂಗದಿಂದಲೇ ಬ್ಯಾನ್ ಆಗಿದ್ದ ವಿಷಯವನ್ನು ಇದೀಗ ರಿವೀಲ್ ಮಾಡಿದ್ದಾರೆ. ಆ ಸಮಯದಲ್ಲಿ ಡಾ. ರಾಜ್‌ಕುಮಾರ್ ಅವರು ನೀಡಿದ ಸಹಾಯದ ಬಗ್ಗೆ ಹಾಗೂ ಆಗಿದ್ದ ಒಗ್ಗಟ್ಟಿನ ಬಗ್ಗೆ ಮೆಲಕು ಹಾಕಿದ್ದಾರೆ ನವರಸ ನಾಯಕ ಜಗ್ಗೇಶ್. 

click me!