ಸ್ಯಾಮ್ಸನ್ ಗುಡುಗು, ಜಾಹೀರ್, ಮಿಶ್ರ ದಾಳಿಗೆ ಪುಣೆ ತತ್ತರ

By Suvarna Web DeskFirst Published Apr 11, 2017, 12:40 PM IST
Highlights

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ'ನಲ್ಲಿ ನಡೆದ ಐಪಿಎಲ್ ಆವೃತ್ತಿಯ 9 ಪಂದ್ಯದಲ್ಲಿ ಡೆಲ್ಲಿ ಒಡ್ಡಿದ 205 ರನ್'ಗಳ ಬೃಹತ್ ಮೊತ್ತವನ್ನು ಎದುರಿಸಲಾಗಿದೆ ಪುಣೆ ತಂಡ 108 ರನ್'ಗಳಿಗೆ ಆಲ್'ಔಟ್ ಆದರು.

ಪುಣೆ(ಏ.11): ಸಂಜು ಸ್ಯಾಮ್ಸನ್ ಸಿಡಿಲಬ್ಬರದ ಶತಕ ಮತ್ತು ಜಾಹೀರ್ ಹಾಗೂ ಅಮೀತ್ ಮಿಶ್ರ ಅವರ ಬೌಲಿಂಗ್ ದಾಳಿಗೆ ನಲುಗಿದ ರೈಸಿಂಗ್ ಪುಣೆ ಸೂಪರ್'ಜೈಂಟ್ ತಂಡ ದೆಲ್ಲಿ ಡೇರ್'ಡೇವಿಲ್ಸ್ ವಿರುದ್ಧ 97 ರನ್'ಗಳ ಭಾರಿ ಸೋಲು ಅನುಭವಿಸಿದರು.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ'ನಲ್ಲಿ ನಡೆದ ಐಪಿಎಲ್ ಆವೃತ್ತಿಯ 9 ಪಂದ್ಯದಲ್ಲಿ  ಡೆಲ್ಲಿ ಒಡ್ಡಿದ 205 ರನ್'ಗಳ ಬೃಹತ್ ಮೊತ್ತವನ್ನು ಎದುರಿಸಲಾಗಿದೆ ಪುಣೆ ತಂಡ 108 ರನ್'ಗಳಿಗೆ ಆಲ್'ಔಟ್ ಆದರು.

ಆರಂಭಿಕ ಆಟಗಾರ ಮಾಯಂಕ್ ಅಗರ್'ವಾಲ್ 20 ರನ್ ಗಳಿಸಿದ್ದು ಬಿಟ್ಟರೆ ಅಜಿಂಕ್ಯ ರಹಾನೆ, ಮಹೇಂದ್ರ ಸಿಂಗ್ ಧೋನಿ, ಡುಪ್ಲೆಸಿಸ್ ಸೇರಿದಂತೆ ಯಾರೊಬ್ಬ ಆಟಗಾರರು  20ರ ಗಡಿ ದಾಟಲಿಲ್ಲ. ಡೆಲ್ಲಿ ಪರ ಜಾಹೀರ್ ಖಾನ್ 20/3, ಅಮಿತ್ ಮಿಶ್ರ 11/3 ಹಾಗೂ ಕಮ್ಮಿನ್ಸ್ 24/2 ವಿಕೇಟ್ ಗಳಿಸಿ ಪುಣೆ ಪತನಕ್ಕೆ ಕಾರಣರಾದರು.

ಸಂಜು ಸ್ಯಾಮ್ಸನ್ ಸಿಡಿಲಬ್ಬರದ ಚೊಚ್ಚಲ ಶತಕ

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ತಂಡಕ್ಕೆ ಯುವ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಬಾರಿಸಿದ ಚೊಚ್ಚಲ ಶತಕ ಹಾಗೂ ಕೊನೆಯಲ್ಲಿ ಕ್ರಿಸ್ ಮೋರಿಸ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ತಂಡವು 205ರನ್'ಗಳ ಬೃಹತ್ ಮೊತ್ತ ಕಲೆಹಾಕಿತು.

ಎರಡನೇ ಓವರ್'ನ ಮೊದಲ ಎಸೆತದಲ್ಲೇ ಆಘಾತ ಅನುಭವಿಸಿದರೂ ಧೃತಿಗೆಡದೇ ಬ್ಯಾಟ್ ಬೀಸಿದ ಸಂಜು ಸ್ಯಾಮ್ಸನ್ ಐಪಿಎಲ್'ನಲ್ಲಿ ಚೊಚ್ಚಲ ಶತಕದ ಸಾಧನೆ ಮಾಡಿದರು. ಕೇವಲ 63 ಎಸೆತಗಳನ್ನೆದುರಿಸಿದ ಕೇರಳದ ಯುವ ಪ್ರತಿಭೆ 8 ಬೌಂಡರಿ ಹಾಗೂ 5 ಸಿಕ್ಸರ್'ಗಳ ನೆರವಿನಿಂದ 102 ರನ್ ಕಲೆಹಾಕಿದರು.

ಇನ್ನು ಸಂಜು ಸ್ಯಾಮ್ಸನ್ ಬಳಿಕ ಬ್ಯಾಟಿಂಗ್'ಗಿಳಿದ ಕ್ರಿಸ್ ಮೋರಿಸ್ ಎದುರಾಳಿ ಬೌಲರ್'ಗಳನ್ನು ಅಕ್ಷರಶಃ ಬೆಚ್ಚಿಬೀಳುವಂತೆ ಬ್ಯಾಟ್ ಬೀಸಿದರು. ಕೇವಲ 9 ಎಸೆತಗಳನ್ನೆದುರಿಸಿದ ಮೋರಿಸ್ 38ರನ್ ಚಚ್ಚಿದರು. ಅದರಲ್ಲಿ ನಾಲ್ಕು ಬೌಂಡರಿ ಮೂರು ಭರ್ಜರಿ ಸಿಕ್ಸರ್'ಗಳೂ ಸೇರಿದ್ದವು.

ಪುಣೆ ಪರ ದೀಪಕ್ ಚಾಹರ್, ಇಮ್ರಾನ್ ತಾಹಿರ್ ಮತ್ತು ಆ್ಯಡಂ ಜಂಪ ತಲಾ ಒಂದೊಂದು ವಿಕೆಟ್ ಪಡೆದರು.

ಸ್ಕೋರ್:

ಡೆಲ್ಲಿ ಡೇರ್'ಡೆವಿಲ್ಸ್: 205/4(20/20)

ಸಂಜು ಸ್ಯಾಮ್ಸನ್: 102

ಕ್ರಿಸ್ ಮೋರಿಸ್ : 38

ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ : 108 (16.1/20)

ಮಾಯಾಂಕ್ ಅಗರ್'ವಾಲ್ : 20

ಜಾಹೀರ್ ಖಾನ್ :20/3

ಅಮಿತ್ ಮಿಶ್ರ: 11/3

ಪಂದ್ಯ ಶ್ರೇಷ್ಠ:ಸಂಜು ಸಾಮ್ಸನ್

click me!