
ಡಿಂಪು(ಅಸ್ಸಾಂ): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ವಿರುದ್ಧ ಅಸ್ಸಾಂ'ನ ಡಿಂಪುವಿನ ಮೊದಲ ದರ್ಜೆ ಮ್ಯಾಜಿಸ್ಟ್ರೇಟ್ ಕೋರ್ಟ್ 10 ಸಾವಿರ ಬಾಂಡ್'ನ ಜಾಮೀನು ಸಹಿತ ವಾರಂಟ್ ಹೊರಡಿಸಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರು ಮಾಡಿದ್ದ ಟ್ವೀಟ್' ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ವಾರಂಟ್ ಹೊರಡಿಸಿದ್ದು, ಮೇ.10ರೊಳಗಾಗಿ ಕೋರ್ಟ್'ಗೆ ಹಾಜರಾಗಬೇಕೆಂದು ಆದೇಶಿಸಿದೆ.
ದೆಹಲಿ ಮುಖ್ಯಮಂತ್ರಿ ಪ್ರಧಾನಿ ವಿರುದ್ಧ ಮಾಡಿದ್ದ ಟ್ವೀಟ್'ಗೆ ಸಂಬಂಧಿಸಿದಂತೆ ಅಸ್ಸಾಂ'ನ ಬಿಜೆಪಿ ನಾಯಕ ಸೂರ್ಜಯ್ಯ ರೋಗ್ಪಾರ್ 2016 ಡಿಸೆಂಬರ್ 26 ರಂದು ಸ್ಥಳೀಯ ಕೋರ್ಟ್'ನಲ್ಲಿ ಮಾನನಷ್ಟ ಮುಕದ್ದಮೆ ಹೊರಡಿಸಿದ್ದರು.
ಈ ಮೊದಲು ಕೋರ್ಟ್ ಕೂಡ ಜನವರಿ 30ರಂದು ಕೋರ್ಟ್'ಗೆ ಹಾಜರಾಗುವಂತೆ ಸಮನ್ಸ್ ಕೂಡ ಹೊರಡಿಸಿತ್ತು. ಎಎಪಿ ಪರ ವಕೀಲರಾದ ಗುರುಪ್ರೀತ್ ಸಿಂಗ್ ಉಪ್ಪಾಲ್ ಏಪ್ರಿಲ್' 23 ರಂದು ದೆಹಲಿ ಮುನಿಸಿಪಾಲ್ ಚುನಾವಣೆಯಿರುವುದರಿಂದ ಮುಖ್ಯಮಂತ್ರಿಗಳು ದೆಹಲಿ ಬಿಟ್ಟು ಹೋಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಪ್ರಧಾನಿ ಮೋದಿ ದೆಹಲಿ ವಿವಿಯಲ್ಲಿ ಪಡೆದ ಪದವಿಯ ಬಗ್ಗೆ ಕೇಜ್ರಿವಾಲ್ ಅನುಮಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಅನಂತರ ದೆಹಲಿ ವಿವಿ ಪದವಿ ಪಡೆದಿರುವುದು ಅಧಿಕೃತ ಎಂದು ಸ್ಪಷ್ಟಪಡಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.