24 ತಾಸು ವಿದ್ಯುತ್ ನೀಡಲು ಆದಿತ್ಯನಾಥ್ ಆದೇಶ

By Suvarna Web DeskFirst Published Apr 11, 2017, 11:50 AM IST
Highlights

ನವರಾತ್ರಿ ಸಂದರ್ಭದಲ್ಲಿ 24 ಗಂಟೆ ಯಾವುದೇ ಅಡ್ಡಿಯಿಲ್ಲದೇ ವಿದ್ಯುತ್ ಪೂರೈಕೆ ಮಾಡಿ ಯಶಸ್ವಿಯಾದ ಬಳಿಕ ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಜಿಲ್ಲೆಗಳಲ್ಲಿ 24 ತಾಸು, ಹಳ್ಳಿಗಳಲ್ಲಿ 18 ತಾಸು, ತಾಲೂಕು ಪ್ರದೇಶ ಹಾಗೂ ಬುಂದೇಲ್ ಖಂಡ ಭಾಗಗಳಲ್ಲಿ 20 ತಾಸು ವಿದ್ಯುತ್ ನೀಡಬೇಕೆಂದು ಇಂದು ಆದೇಶಿಸಿದ್ದಾರೆ.

ನವದೆಹಲಿ (ಏ.11): ನವರಾತ್ರಿ ಸಂದರ್ಭದಲ್ಲಿ 24 ಗಂಟೆ ಯಾವುದೇ ಅಡ್ಡಿಯಿಲ್ಲದೇ ವಿದ್ಯುತ್ ಪೂರೈಕೆ ಮಾಡಿ ಯಶಸ್ವಿಯಾದ ಬಳಿಕ ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿಲ್ಲೆಗಳಲ್ಲಿ 24 ತಾಸು, ಹಳ್ಳಿಗಳಲ್ಲಿ 18 ತಾಸು, ತಾಲೂಕು ಪ್ರದೇಶ ಹಾಗೂ ಬುಂದೇಲ್ ಖಂಡ ಭಾಗಗಳಲ್ಲಿ 20 ತಾಸು ವಿದ್ಯುತ್ ನೀಡಬೇಕೆಂದು ಇಂದು ಆದೇಶಿಸಿದ್ದಾರೆ.

ಗ್ರಾಮೀಣ ಭಾಗಗಳಲ್ಲಿ ಟ್ರಾನ್ಸ್ ಫಾರ್ಮಾರ್ ಸುಟ್ಟು ಹೋಗಿದ್ದರೆ ಕೂಡಲೇ ಸರಿಪಡಿಸಿ. ಇದರಿಂದಾಗಿ ಕೃಷಿ ಚಟುವಟಿಕೆಗಳಿಕೆ ಅಡ್ಡಿಯಾಗಬಾರದು. ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸಲು ಅನುಕೂಲವಾಗಲು ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ನಿರಂತರವಾಗಿ ವಿದ್ಯುತ್ ನೀಡಿ  ಎಂದು ಆದಿತ್ಯನಾಥ್ ಇಂಧನ ಇಲಾಖೆಗೆ ಸೂಚಿಸಿದ್ದಾರೆ.

click me!