AAP Mission Punjab: ಆಟೋ ಚಾಲಕನ ಮನೆಗೆ ತೆರಳಿ ಭೋಜನ ಸವಿದ ಕೇಜ್ರಿವಾಲ್‌

By Suvarna NewsFirst Published Nov 24, 2021, 11:48 AM IST
Highlights

ಪಂಜಾಬ್‌ನಲ್ಲಿ 2022ರಲ್ಲಿ ಅಂದರೆ ಮುಂದಿನ ವರ್ಷ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ತಮ್ಮ ಪಕ್ಷ ಆಮ್‌ ಆದ್ಮಿ ಪಾರ್ಟಿಯ(AAP) ಮಿಷನ್‌ ಪಂಜಾಬ್‌ಗಾಗಿ ಒಂದು ತಿಂಗಳ ಕಾಲ ಪಂಜಾಬ್‌ನ ಅನೇಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಪಂಜಾಬ್‌ನ ಲೂಧಿಯಾನ(Ludhiana )ದ ಆಟೋ ರಿಕ್ಷ ಚಾಲಕರೊಬ್ಬರು ಕೇಜ್ರಿವಾಲ್‌ ಅವರನ್ನು ಊಟಕ್ಕೆ ಆಹ್ವಾನಿಸಿದ್ದರು.

ಈಗ ಪಂಜಾಬ್‌ ವಿಧಾನಸಭಾ ಚುನಾವಣೆ(punjab assembly election) ಮೇಲೆ ಕಣ್ಣೀಟ್ಟಿರುವ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಈಗ ಆಟೋ ಚಾಲಕ(auto driver)ರೊಬ್ಬರ ಮನೆಗೆ ಊಟಕ್ಕೆ ಹೋಗಿದ್ದಾರೆ. ಪಂಜಾಬ್‌ನಲ್ಲಿ 2022ರಲ್ಲಿ ಅಂದರೆ ಮುಂದಿನ ವರ್ಷ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ತಮ್ಮ ಪಕ್ಷ ಆಮ್‌ ಆದ್ಮಿ ಪಾರ್ಟಿಯ(AAP) ಮಿಷನ್‌ ಪಂಜಾಬ್‌ಗಾಗಿ ಒಂದು ತಿಂಗಳ ಕಾಲ ಪಂಜಾಬ್‌ನ ಅನೇಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಪಂಜಾಬ್‌ನ ಲೂಧಿಯಾನ(Ludhiana )ದ ಆಟೋ ರಿಕ್ಷಾ ಚಾಲಕರೊಬ್ಬರು ಕೇಜ್ರಿವಾಲ್‌ ಅವರನ್ನು ಊಟಕ್ಕೆ ಆಹ್ವಾನಿಸಿದ್ದರು. ಈ ಆಹ್ವಾನವನ್ನು ಸ್ವೀಕರಿಸಿದ ಅರವಿಂದ್‌ ಕೇಜ್ರಿವಾಲ್‌(Arvind Kejriwal) ಆ ಆಟೋ ಚಾಲಕನ ರಿಕ್ಷಾದಲ್ಲೇ ಅವರ ಮನೆಗೆ ಹೋಗಿ ಭೋಜನ ಸವಿದಿದ್ದಾರೆ.

ಈ ಬಗ್ಗೆ ಅರವಿಂದ್‌ ಕೇಜ್ರಿವಾಲ್‌ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಟ್ವಿಟ್‌(tweet) ಮಾಡಿದ್ದು‌, ದಿಲೀಪ್‌ ತಿವಾರಿ ತುಂಬಿದ ಹೃದಯದಿಂದ ನಮ್ಮನ್ನು ಅವರ ಮನೆಗೆ ಭೋಜನಕ್ಕೆ ಕರೆದಿದ್ದರು. ಅವರ ಮನೆಯ ಭೋಜನ ತುಂಬಾ ಚೆನ್ನಾಗಿತ್ತು. ಅವರ ಕುಟುಂಬ ನಮ್ಮನ್ನು ತುಂಬ ಪ್ರೀತಿಯಿಂದ ಬರ ಮಾಡಿಕೊಂಡಿದೆ. ನಾನು ಅವರ ಇಡೀ ಕುಟುಂಬವನ್ನು ದೆಹಲಿಯ ನಮ್ಮ ಮನೆಗೆ ಬಂದು ಭೋಜನ ಸವಿಯಲು ಕರೆದಿದ್ದೇನೆ ಎಂದಿದ್ದಾರೆ.  ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥರೂ ಆಗಿರುವ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ಲೂಧಿಯಾನ ನಗರ(Ludhiana city)ದಲ್ಲಿ ಪಕ್ಷದ ಇತರ ನಾಯಕರೊಂದಿಗೆ ಸೇರಿ ದೊಡ್ಡ ಸಂಖ್ಯೆಯಲ್ಲಿ ಆಟೋ ರಿಕ್ಷಾ ಚಾಲಕರೊಂದಿಗೆ ಸಮಾವೇಶವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ  ದಿಲೀಪ್‌ ತಿವಾರಿ(Dilip Tiwari), ಕೇಜ್ರಿವಾಲ್‌ ಅವರನ್ನು ಊಟಕ್ಕೆ ಆಹ್ವಾನಿಸಿದ್ದರು. ಇಲ್ಲಿ ಮುಂದಿನ ವರ್ಷ ಚುನಾವಣೆ ಇದೆ. 

Assembly elections:ಅಧಿಕಾರ ನೀಡಿದರೆ 18 ತುಂಬಿದ ಪಂಜಾಬ್ ಮಹಿಳೆಯರಿಗೆ ತಿಂಗಳಿಗೆ 1,000 ರೂ; ಕೇಜ್ರಿವಾಲ್ ಭರವಸೆ!

ಇದಕ್ಕೂ ಮೊದಲು ತಿವಾರಿ " ನಾನು ನಿಮ್ಮ ದೊಡ್ಡ ಅಭಿಮಾನಿ, ನಾನೊಬ್ಬ ಆಟೋ ಚಾಲಕ, ನೀವು ಆಟೋ ಚಾಲಕರಿಗೆ ತುಂಬಾ ಸಹಾಯ ಮಾಡಿದ್ದೀರಿ. ನೀವು ಈ ಬಡ ಆಟೋ ಚಾಲಕನ ಮನೆಗೆ ಊಟಕ್ಕೆ ಬರುವಿರೇ ನಾನು ನಿಮ್ಮನ್ನು ತುಂಬು ಹೃದಯದಿಂದ ಆಹ್ವಾನಿಸುತ್ತಿದ್ದೇನೆ ಎಂದು ಕೇಜ್ರಿವಾಲ್‌ ಅವರನ್ನು ಆಹ್ವಾನಿಸಿದ್ದಾರೆ. ಇದಕ್ಕೆ ಖಂಡಿತ ರಾತ್ರಿ ಬರಬಹುದೇ ಎಂದು ಕೇಜ್ರಿವಾಲ್‌ ಕೇಳಿದ್ದಾರೆ. ಇದಕ್ಕೆ ತಿವಾರಿ ರಾತ್ರಿಯೇ ಬನ್ನಿ ಎಂದು ಉತ್ತರಿಸಿದ್ದಾರೆ. ಈ ವೇಳೆ ಕೇಜ್ರಿವಾಲ್‌, ನನ್ನ ಜೊತೆಗೆ ಪಕ್ಷದ ಇನ್ನಿಬ್ಬರು ನಾಯಕರಾದ ಭಗವಂತ್‌ ಮನ್ನಾ(Bhagwant Mann) ಹಾಗೂ ಹರ್ಪಾಲ್‌ ಸಿಂಗ್‌ ಚೀಮಾ(Harpal Singh Cheema) ಅವರನ್ನು ಕರೆದುಕೊಂಡು ಬರಲೇ ಎಂದು ಕೇಳಿದ್ದಾರೆ.

ಇದಕ್ಕೂ ಮೊದಲು ಆಟೋ ಚಾಲಕನ ಆಹ್ವಾನ ಸ್ವೀಕರಿಸಿದ ಬಳಿಕ ಟ್ವಿಟ್‌ ಮಾಡಿದ ಕೇಜ್ರಿವಾಲ್‌, ಆಟೋ ಚಾಲಕನ ಆಹ್ವಾನದಿಂದ ಹೃದಯ ತುಂಬಿ ಬಂತು. ನಾವು ಖಂಡಿತ ಅವರ ಮನೆಗೆ ಊಟಕ್ಕೆ ಹೋಗುತ್ತಿದ್ದೇ ಎಂದಿದ್ದರು. ನಂತರ ಎಎಪಿ  ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಕೇಜ್ರಿವಾಲ್‌ , ಮನ್ನಾ ಹಾಗೂ ಚೀಮಾ ತಿವಾರಿ ಅವರ ಆಟೋದಲ್ಲಿರುವ ವಿಡಿಯೋವನ್ನು ಹಾಗೂ ಅವರ ಮನೆಯಲ್ಲಿ ಊಟ ಮಾಡುತ್ತಿರುವ ಫೋಟೋವನ್ನು ಟ್ವಿಟ್‌ ಮಾಡಿತ್ತು. ಕೇಜ್ರಿವಾಲ್‌ ತಮ್ಮ ಮನೆಗೆ ಬಂದಿರುವುದಕ್ಕೆ ಆಟೋ ಚಾಲಕ  ದಿಲೀಪ್‌ ತಿವಾರಿ ಕೂಡ ತುಂಬಾ ಸಂತಸಗೊಂಡಿದ್ದಾರೆ. ಇದಕ್ಕೂ ಮೊದಲು ಕೇಜ್ರಿವಾಲ್‌, ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಛನ್ನಿ(Charanjit Singh Channi) ನಕಲಿ ಕೇಜ್ರಿವಾಲ್‌(fake Kejriwal), ಆತ ನನ್ನ ಅಜೆಂಡಾಗಳನ್ನು ಅನುಷ್ಠಾನಗೊಳಿಸದೆ ನಕಲಿ ಮಾಡಿದರು. ನಾನು ಪಂಜಾಬ್‌ನಲ್ಲಿ ಏನು ಭರವಸೆ ನೀಡುತ್ತೇನೋ ಅದನ್ನು ಎರಡು ದಿವಸ ಕಳೆದು ಅವರು ಘೋಷಣೆ ಮಾಡುತ್ತಾರೆ. ಆದರೆ ಅದನ್ನು ಅನುಷ್ಠಾನಕ್ಕೆ ತರುವುದಿಲ್ಲ ಎಂದು ಕೇಜ್ರಿವಾಲ್‌ ಪಂಜಾಬ್‌ ಸಿಎಂ ವಿರುದ್ಧ ಹರಿಹಾಯ್ದರು.

ಇನ್ನು ಪಂದಿಲ್ಲಿ ಶಾಲೆಗಳಲ್ಲಿನ್ನು ದೇಶ ಭಕ್ತಿಯೂ ಪಠ್ಯ!

ಜಾಬ್ ವಿಧಾನಸಭೆ ಚುನಾವಣೆಯನ್ನು ಗುರಿಯಾಗಿಸಿ, ಮುಂದಿನ ಒಂದು ತಿಂಗಳ ಕಾಲ ಅರವಿಂದ್‌ ಕೇಜ್ರಿವಾಲ್‌ ಪಂಜಾಬ್‌ನಲ್ಲಿ ಹಲವು ಪ್ರದೇಶಗಳಿಗೆ ಭೇಟಿ ನೀಡಿ ಸಭೆ ಸಮಾರಂಭಗಳನ್ನು ನಡೆಸುತ್ತಿದ್ದಾರೆ. ಇಂದು ಅಮೃತಸರ(Amritsar )ದಲ್ಲಿ ಸುದ್ದಿಗೋಷ್ಠಿ ನಡೆಸುವ ಕೇಜ್ರಿವಾಲ್‌ ನಂತರ ಬೇರೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

click me!