ಡೀಮ್ಡ್ ಕಾಡಿಂದ ಕೃಷಿ ಭೂಮಿ ಕೈಬಿಡಲು ಸಂಪುಟದಲ್ಲಿ ಶೀಘ್ರ ನಿರ್ಧಾರ: ತಿಮ್ಮಪ್ಪ

By Suvarna Web DeskFirst Published Jun 20, 2017, 10:12 AM IST
Highlights

ಸಾಗುವಳಿ ಜಮೀನನ್ನು ಡೀಮ್‌್ಡ ಅರಣ್ಯ ಪ್ರದೇಶದಿಂದ ಕೈಬಿಡುವ ವಿಷಯಕ್ಕೆ ಸಂಬಂಧಿಸಿದ ವರದಿ ಕೈಸೇರಿದ್ದು, ಸಚಿವ ಸಂಪುಟದಲ್ಲಿ ಈ ವಿಷಯವಿಟ್ಟು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಆಶ್ವಾಸನೆ ನೀಡಿದ್ದಾರೆ.

ವಿಧಾನ ಪರಿಷತ್ತು: ಸಾಗುವಳಿ ಜಮೀನನ್ನು ಡೀಮ್‌್ಡ ಅರಣ್ಯ ಪ್ರದೇಶದಿಂದ ಕೈಬಿಡುವ ವಿಷಯಕ್ಕೆ ಸಂಬಂಧಿಸಿದ ವರದಿ ಕೈಸೇರಿದ್ದು, ಸಚಿವ ಸಂಪುಟದಲ್ಲಿ ಈ ವಿಷಯವಿಟ್ಟು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಆಶ್ವಾಸನೆ ನೀಡಿದ್ದಾರೆ.

ರಾಜ್ಯದಲ್ಲಿನ ಬರಗಾಲ ಕುರಿತು ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಅವರು ಸೋಮವಾರ ಉಡುಪಿ ಜಿಲ್ಲೆಯ ಜನರಿಗೆ ಹಕ್ಕುಪತ್ರ ನೀಡದಿರುವ ಕುರಿತು ಪ್ರಸ್ತಾಪಿಸಿದಾಗ ಉತ್ತರ ನೀಡಿದ ಸಚಿವರು, ಹಕ್ಕುಪತ್ರ ನೀಡುವ ಸಂಬಂಧ ಈ ಹಿಂದೆ ಸಂಪುಟ ಸಭೆಯಲ್ಲಿ ಚರ್ಚೆ ಬಂದಾಗ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಕಂಡು ಬಂದವು. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಈಗ ವರದಿ ಕೈ ಸೇರಿದ್ದು, ಶೀಘ್ರದಲ್ಲಿಯೇ ಸಂಪುಟ ಸಭೆಯಲ್ಲಿ ಈ ವಿಷಯವನ್ನಿಟ್ಟು ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು. ಹಕ್ಕುಪತ್ರ ನೀಡಲು ಡೀಮ್‌್ಡ ಅರಣ್ಯ ಪ್ರದೇಶ ಅಡ್ಡಿಯಾಗಿದೆ ಎಂದರು.

ವಿಧಾನ ಪರಿಷತ್‌: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ ಯಾವುದೇ ಪೂರ್ವಾಗ್ರಹ ಪೀಡಿತ, ದ್ವೇಷ ಇಲ್ಲವೇ ಪ್ರತಿಕಾರ ಮನೋಭಾವದಿಂದ ಕೂಡಿಲ್ಲ. ವಿಧೇಯಕದ ಬಗ್ಗೆ ಚರ್ಚೆ ಆದ ಮೇಲೆ ಸಾರ್ವಜನಿಕ ಹಿತಾಸಕ್ತಿ ಇದ್ದರೆ ಅನುಮೋದನೆ ಮಾಡಬಹುದು ಎಂದು ಆರೋಗ್ಯ ಸಚಿವ ರಮೇಶ್‌ಕುಮಾರ್‌ ಸ್ಪಷ್ಟಪಡಿಸಿದ್ದಾರೆ. ವಿಧೇಯಕದ ಕುರಿತು ಜಂಟಿ ಸದನ ಸಮಿತಿ ರಚನೆ ಅಗತ್ಯವಿಲ್ಲ. ಜಂಟಿ ಸಮಿತಿ ರಚಿಸುವುದೇ ವಿಧೇಯಕ ಅಂಗೀಕಾರ ವಿಳಂಬ ಆಗುವಂತೆ ಮಾಡುವುದಾಗಿದೆ ಎಂದು ಹೇಳಿದ್ದಾರೆ.

click me!