ನಾಟಿ ವೈದ್ಯರ ಹಿತ ಕಾಪಾಡಲು ಹೊಸ ನೀತಿ: ಸಚಿವ ರಮೆಶ್ ಕುಮಾರ್

By Suvarna Web DeskFirst Published Jun 20, 2017, 10:04 AM IST
Highlights

ಗ್ರಾಮೀಣ ಭಾಗದಲ್ಲಿರುವ ನಾಟಿ ವೈದ್ಯರ ಹಿತ ಕಾಪಾಡಲು ನೀತಿಯೊಂದನ್ನು ಜಾರಿಗೆ ತರಲು ಸರ್ಕಾರ ಉದ್ದೇಶಿಸಿದ್ದು, ಈ ಕುರಿತು ರಚಿಸಿರುವ ಸಮಿತಿ ಇನ್ನೊಂದು ತಿಂಗಳಲ್ಲಿ ವರದಿ ನೀಡಲಿದೆ ಎಂದು ಆರೋಗ್ಯ ಸಚಿವ ಕೆ.ಆರ್‌. ರಮೇಶ್‌ಕುಮಾರ್‌ ತಿಳಿಸಿದ್ದಾರೆ.

ವಿಧಾನ ಪರಿಷತ್ತು:  ಗ್ರಾಮೀಣ ಭಾಗದಲ್ಲಿರುವ ನಾಟಿ ವೈದ್ಯರ ಹಿತ ಕಾಪಾಡಲು ನೀತಿಯೊಂದನ್ನು ಜಾರಿಗೆ ತರಲು ಸರ್ಕಾರ ಉದ್ದೇಶಿಸಿದ್ದು, ಈ ಕುರಿತು ರಚಿಸಿರುವ ಸಮಿತಿ ಇನ್ನೊಂದು ತಿಂಗಳಲ್ಲಿ ವರದಿ ನೀಡಲಿದೆ ಎಂದು ಆರೋಗ್ಯ ಸಚಿವ ಕೆ.ಆರ್‌. ರಮೇಶ್‌ಕುಮಾರ್‌ ತಿಳಿಸಿದ್ದಾರೆ.

ನಕಲಿ ವೈದ್ಯರ ಹಾವಳಿ ಕುರಿತು ಬಿಜೆಪಿಯ ಎಸ್‌.ವಿ. ಸಂಕನೂರು ಪ್ರಶ್ನೆಗೆ ಉತ್ತರಿಸಿದ ಸಚಿವರು, ಗ್ರಾಮೀಣ ಭಾಗದಲ್ಲಿ ನಾಟಿ ವೈದ್ಯರು, ಪರಂಪರಾಗತವಾಗಿ ಔಷಧ, ಚಿಕಿತ್ಸೆ ನೀಡುವ ಕುಟುಂಬಗಳು ಇನ್ನೂ ಇವೆ. ಇವರಿಂದ ಗ್ರಾಮೀಣ ಜನತೆಗೆ ಅನುಕೂಲವಾ ಗಿದೆ. ಗ್ರಾಮೀಣ ಭಾಗಗಳಲ್ಲಿ ಪರಂಪರಾಗತ ವಾಗಿ ಚಿಕಿತ್ಸೆ ನೀಡುತ್ತಿರುವವರು ನಕಲಿ ವೈದ್ಯ ರಲ್ಲ, ಇಂತಹ ಗ್ರಾಮೀಣ ನಾಟಿ ವೈದ್ಯರಿಗಾ ಗಿಯೇ ನೀತಿ ರಚಿಸಲಾಗುತ್ತಿದೆ ಎಂದರು.

ನಕಲಿ ವೈದ್ಯರ ಮಟ್ಟಹಾಕಲು ಮಾರ್ಗೋಪಾಯಗಳನ್ನು ಕಂಡು ಹಿಡಿಯಲಾಗಿದ್ದು, ಪ್ರತೀ ಜಿಲ್ಲೆಯಲ್ಲಿ ನಕಲಿ ವೈದ್ಯರನ್ನು ಗುರುತಿಸಲು ರಚಿಸಿರುವ ಕಾರ್ಯಪಡೆ ನಾಟಿ ವೈದ್ಯರನ್ನೂ ಗುರುತು ಮಾಡಲಿದೆ. ಇವರನ್ನು ನಕಲಿ ವೈದ್ಯರ ಪಟ್ಟಿಗೆ ಸೇರುವುದಿಲ್ಲವೆಂದು ಭರವಸೆ ನೀಡಿದರು.

click me!