ತುರ್ತು ಸಭೆ ಕರೆದ ಶಿವಸೇನೆ: ಎನ್'ಡಿಎ'ಗೆ ಗುಡ್'ಬೈ ಹೇಳಲು ತಯಾರಿ !

Published : Sep 04, 2017, 06:24 PM ISTUpdated : Apr 11, 2018, 12:52 PM IST
ತುರ್ತು ಸಭೆ ಕರೆದ ಶಿವಸೇನೆ: ಎನ್'ಡಿಎ'ಗೆ ಗುಡ್'ಬೈ ಹೇಳಲು ತಯಾರಿ !

ಸಾರಾಂಶ

ಪ್ರಸ್ತುತ ಎನ್'ಡಿಎ ಮೈತ್ರಿಕೂಟದಲ್ಲಿ ಭಾರಿ ಕೈಗಾರಿಕಾ ಸಚಿವ ಅನಂತ್ ಗೀತೆ ಮಾತ್ರ ಏಕೈಕ ಶಿವಸೇನಾ ಸದಸ್ಯರಾಗಿದ್ದಾರೆ. 

ಮುಂಬೈ(ಸೆ.04): ಕೇಂದ್ರ ಸಚಿವ ಸಂಪುಟ ವಿಸ್ತರಣೆ ನಂತರ ಮುನಿಸಿಕೊಂಡಿರುವ ಎನ್'ಡಿಎ ಮಿತ್ರ ಪಕ್ಷ ಶಿವಸೇನೆ ಮಿತ್ರಕೂಟದಿಂದ ಹೊರಬರುವ ಸೂಚನೆ ನೀಡುತ್ತಿದೆ.

ಈ ಸಂಬಂಧ ಪಕ್ಷದ ಅಧ್ಯಕ್ಷ ಉದ್ಭವ್ ಠಾಕ್ರೆ ಇಂದು ಪಕ್ಷದ ನಾಯಕರ ತುರ್ತು ಸಭೆ ಕರೆದಿದ್ದಾರೆ. ಇದರ ಬೆನ್ನಲ್ಲೆ ಶಿವಸೇನೆ ಸಂಸದರಾದ ಸಂಜಯ್ ಸಂಜಯ್ ರಾವುತ್ ಎನ್'ಡಿಎ ಬಹುತೇಕ ಮೃತಪಟ್ಟಂತೆ ಎಂದು ತಿಳಿಸಿದ್ದಾರೆ. ನಿನ್ನೆ ನಡೆದ ಕೇಂದ್ರ ಸಂಪುಟ ವಿಸ್ತರಣೆ ಕಾರ್ಯಕ್ರಮದಲ್ಲಿ ಶಿವಸೇನೆಯ ಯಾವೊಬ್ಬ ನಾಯಕರು ಪಾಲ್ಗೊಂಡಿರಲಿಲ್ಲ. ಹೊಸಬರ ಮಂತ್ರಿಮಂಡಳದಲ್ಲಿ ಶಿವಸೇನೆಯ ಸಂಸದರನ್ನು ಪರಿಗಣಿಸದ ಕಾರಣ ಆ ಪಕ್ಷದ ಮುನಿಸಿಗೆ ಕಾರಣವಾಗಿದೆ.

ಪ್ರಸ್ತುತ ಎನ್'ಡಿಎ ಮೈತ್ರಿಕೂಟದಲ್ಲಿ ಭಾರಿ ಕೈಗಾರಿಕಾ ಸಚಿವ ಅನಂತ್ ಗೀತೆ ಮಾತ್ರ ಏಕೈಕ ಶಿವಸೇನಾ ಸದಸ್ಯರಾಗಿದ್ದಾರೆ.  ಈ ಮಧ್ಯೆ ಸಂಪುಟ ವಿಸ್ತರಣೆಯಲ್ಲಿ ಇನ್ನೊಂದು ಮಿತ್ರ ಪಕ್ಷ ಜೆಡಿಯು ಕೂಡ ಮುನಿಸಿಕೊಂಡಂತಿದೆ. ಭಾನುವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಜೆಡಿಯು ನಾಯಕರು ಕಾಣಿಸಲಿಲ್ಲ. ಆದರೆ ತಮಗೆ ಯಾವುದೇ ಬೇಜಾರಿಲ್ಲ ಎಂದು ಜೆಡಿಯು ವಕ್ತಾರ ಕೆ.ಸಿ. ತ್ಯಾಗಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಲವ್ ಮಾಡು, ಇಲ್ಲಾಂದ್ರೆ ಸಾಯ್ತೀನಿ: ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಕಿರುಕುಳ ಕೊಟ್ಟ ಖತರ್ನಾಕ್ ಲೇಡಿ
ಸರ್ಕಾರಿ ನೇಮಕಾತಿ ವಿಳಂಬ: ಮನನೊಂದು ಧಾರವಾಡ ರೈಲು ಹಳಿಗೆ ಸಿಲುಕಿ ಯುವತಿ ದಾರುಣ ಸಾವು!