
ನವದೆಹಲಿ: ವೃದ್ಧ ಅಪ್ಪ ಅಮ್ಮಂದಿರನ್ನು ಮಕ್ಕಳು ನೋಡಿಕೊಳ್ಳದೆ ಇದ್ದರೆ ವಿಧಿಸಲಾಗುತ್ತಿದ್ದ ಜೈಲು ಶಿಕ್ಷೆಯನ್ನು ಹಾಲಿ ಇರುವ 3 ತಿಂಗಳಿನಿಂದ 6 ತಿಂಗಳಿಗೆ ಏರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಅಷ್ಟೇ ಅಲ್ಲ, ಪಾಲಕರು ಹಾಗೂ ಹಿರಿಯ ನಾಗರಿಕರ ಕಲ್ಯಾಣ ಮತ್ತು ನಿರ್ವಹಣೆ ಕಾಯ್ದೆ-2007 ರಲ್ಲಿ ಇರುವ ‘ಮಕ್ಕಳು’ ಎಂಬುದರ ವ್ಯಾಖ್ಯಾನವನ್ನು ಬದಲಿಸಿ ಅದಕ್ಕೆ ಅಳಿಯ ಹಾಗೂ ಸೊಸೆಯನ್ನೂ ಸೇರಿಸುವ ಸಾಧ್ಯತೆಯಿದೆ.
ಸದರಿ ಕಾಯ್ದೆಯನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಪುನರ್‌ವಿಮರ್ಶೆ ಮಾಡುತ್ತಿದ್ದು, ಕೆಲ ನಿಯಮಗಳನ್ನು ಬದಲಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ತಿದ್ದುಪಡಿ ಕಾಯ್ದೆಯು ಅಂಗೀಕಾರವಾದರೆ ಸದ್ಯ
ಪೋಷಕರನ್ನು ನೋಡಿಕೊಳ್ಳದೆ ಇರುವ ಮಕ್ಕಳು ನೀಡಬೇಕಾದ ಮಾಸಿಕ ನಿರ್ವಹಣಾ ವೆಚ್ಚಕ್ಕಿದ್ದ 10 ಸಾವಿರ ರು. ಮಿತಿಯೂ ರದ್ದಾಗಲಿದೆ.
ಮಕ್ಕಳು ತಮ್ಮನ್ನು ನೋಡಿಕೊಳ್ಳದಿದ್ದರೆ ಹಿರಿಯ ನಾಗರಿಕರು ನಿರ್ವಹಣಾ ನ್ಯಾಯಾಧಿಕರಣಕ್ಕೆ ದೂರು ನೀಡಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.