
ಕೊಲ್ಕತಾ: ರಾಜಕೀಯ ಪಕ್ಷವೊಂದು ತಮ್ಮ ಹತ್ಯೆಗೆ ಸುಪಾರಿ ನೀಡಿದೆ ಎಂಬ ಗಂಭೀರ ಆರೋಪವನ್ನು ಪಶ್ಚಿಮ ಬಂಗಾಳ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಮಾಡಿದ್ದಾರೆ. ‘ನಿರ್ದಿಷ್ಟ ಪಕ್ಷವೊಂದು ನನ್ನನ್ನು ಕೊಲ್ಲಲು ಸುಪಾರಿ (ಗುತ್ತಿಗೆ) ನೀಡಿದೆ ಎಂದು ಆರೋಪ ಮಾಡಿದ್ದಾರೆ.
ನನ್ನನ್ನು ಹತ್ಯೆಗೈಯಲು ಯತ್ನಿಸುತ್ತಿರುವವರು ನನ್ನ ಮನೆಯ ಸ್ಥಳಾನ್ವೇಷಣೆ ಮಾಡಿದ್ದಾರೆ. ಹೀಗಾಗಿ ಪೊಲೀಸರು ಮನೆ ಬದಲಿಸುವಂತೆ ನನಗೆ ಸೂಚಿಸಿದ್ದಾರೆ. ಈ ಹಿಂದೆಯೂ ನನ್ನ ಹತ್ಯೆಗೆ ಯತ್ನಿಸಲಾಗಿತ್ತು’ ಎಂದು ಮಮತಾ ಸಂದ ರ್ಶನವೊಂದರಲ್ಲಿ ಹೇಳಿದ್ದಾರೆ. ಸಿಎಂ ಆಗುವುದಕ್ಕೂ ಮೊದಲು ಇದ್ದ ಹಳೆಯ ಮನೆಯಲ್ಲೇ ಮಮತಾ ಇದ್ದಾರೆ.
ಸರ್ಕಾರಿ ಬಂಗ್ಲೆಗೆ ಮನೆ ಬದಲಿಸುವಂತೆ ಗುಪ್ತಚರ ಮೂಲಗಳು ಅವರಿಗೆ ಸಲಹೆ ನೀಡಿವೆ. ‘ಆದರೆ, ನಾನು ಸಾವಿಗೆ ಹೆದರುವುದಿಲ್ಲ. ನಾನು ಇಲ್ಲದ ಸಂದರ್ಭ ಸರ್ಕಾರ ಮತ್ತು ಪಕ್ಷವನ್ನು ಯಾರು ಮುನ್ನಡೆಸಬೇಕು ಎಂದು ನನ್ನ ಉಯಿಲಿನಲ್ಲಿ ತಿಳಿಸಿದ್ದೇನೆ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.