
ಬೆಂಗಳೂರು(ಅ.22): ಒತ್ತುವರಿದಾರರ ವಿರುದ್ದ ಸಮರ ಸಾರಿದ್ದ ಸುವರ್ಣನ್ಯೂಸ್ ಪ್ರಯತ್ನಕ್ಕೆ ಕೊನೆಗೂ ಜಯ ಸಿಕ್ಕಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಸೇರಿದಂತೆ 24 ಆಸ್ತಿಗಳನ್ನ ಸರ್ಕಾರ ವಶಕ್ಕೆ ಪಡೆದಿದೆ.
ಬೆಂಗಳೂರಿನಲ್ಲಿ ಸರ್ಕಾರಿ ಭೂಮಿ ಒತ್ತುವರಿದಾರರ ವಿರುದ್ಧ ಪಾಲಿಕೆ ಹಲವು ಕಡೆ ತೆರವು ಕಾರ್ಯ ನಡೆಸಿತ್ತು. ಆದರೆ, ನಟ ದರ್ಶನ್ ಮನೆ ಹಾಗೂ ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪನವರ ಒಡೆತನದ ಎಸ್ಎಸ್ ಆಸ್ಪತ್ರೆಯನ್ನ ತೆರೆಮರೆಯಲ್ಲಿ ರಕ್ಷಿಸುವ ಕೆಲಸ ಮಾಡಲಾಗುತ್ತಿತ್ತು. ಈ ನಡುವೆ ಸುವರ್ಣನ್ಯೂಸ್ ದೊಡ್ಡವರಿಗೆ ಚಾಲೆಂಜ್ ಎನ್ನುವ ಅಭಿಯಾನದಡಿ ನಿರಂತರ ವರದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ದರ್ಶನ್ ಮನೆಯನ್ನ ತನ್ನ ವಶಕ್ಕೆ ಪಡೆದಿದೆ.
ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿರೊ ಸರ್ಕಾರಿ ಬಿ-ಖರಾಬು ಭೂಮಿಯ ಒತ್ತುವರಿ ಜಾಗದಲ್ಲಿ ನಟ ದರ್ಶನ್ ಮನೆ ಇತ್ತು. ಸತತ 3 ತಿಂಗಳ ನೋಟಿಸ್, ವಾದ-ವಿವಾದಗಳು ನಡೆದ ಬಳಿಕ ಇಂದು ದರ್ಶನ್ ಮನೆ ಮೇಲೆ 20 ಗುಂಟೆಯ ಈ ಜಾಗ ಸರ್ಕಾರಿ ಖರಾಬಿಗೆ ಸೇರಿದ್ದು, ಈ ಆಸ್ತಿ ಸರ್ಕಾರಕ್ಕೆ ಸೇರಿದೆ ಅಂತಾ ಬರೆಯುವ ಮೂಲಕ ಜಿಲ್ಲಾಡಳಿತ ತನ್ನ ವಶಕ್ಕೆ ಪಡೆದಿದೆ.
ಈ ನಡುವೆ ನಿನ್ನೆ ಎಸ್ ಎಸ್ ಆಸ್ಪತ್ರೆ ಹಾಗೂ 44 ಮಂದಿ ಒತ್ತುವರಿದಾರರು ಕೋರ್ಟ್ ಮೊರೆಹೋಗಿ ತಮ್ಮ ದಾಖಲೆಗಳನ್ನ ಮರುಪರಿಶೀಲನೆ ಮಾಡಲು ಕಾಲವಾಕಾಶ ಕೇಳಿದ್ದರು. ಅದರಂತೆ ಸದ್ಯ 4 ವಾರಗಳು ಒತ್ತುವರಿದಾರರಿಗೆ ರಿಲೀಫ್ ಸಿಕ್ಕಿದೆ. ಉಳಿದಂತೆ 24 ಆಸ್ತಿಗಳು ಸರ್ಕಾರಿ ಸ್ವತ್ತು ಎಂದು ಬರೆಯುವ ಮೂಲಕ ಜಿಲ್ಲಾಡಳಿತ ವಶಕ್ಕೆ ಪಡೆದಿದೆ. ಇದರಲ್ಲಿ ನಟ ದರ್ಶನ್ ಮನೆ ಕೂಡ ಸೇರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.