ಮಹದೇಶ್ವರ ಬೆಟ್ಟ ದರ್ಶನ್‌ಗೆ ದತ್ತು ನೀಡಿಲ್ಲ: ಅರಣ್ಯ ಇಲಾಖೆ

Published : Dec 19, 2018, 11:02 AM IST
ಮಹದೇಶ್ವರ ಬೆಟ್ಟ ದರ್ಶನ್‌ಗೆ  ದತ್ತು ನೀಡಿಲ್ಲ: ಅರಣ್ಯ ಇಲಾಖೆ

ಸಾರಾಂಶ

ಮಲೆ ಮಹದೇಶ್ವರ ಬೆಟ್ಟವನ್ನು ದರ್ಶನ್ ದತ್ತು ತೆಗೆದುಕೊಂಡಿದ್ದು ನಿಜನಾ? ಅರಣ್ಯ ಇಲಾಖೆ ನೀಡಿದೆ ಸ್ಪಷ್ಟೀಕರಣ | 

ಬೆಂಗಳೂರು (ಡಿ. 19):  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಲೆ ಮಹದೇಶ್ವರ ಬೆಟ್ಟವನ್ನು ದತ್ತು ತೆಗೆದುಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು ಇದಕ್ಕೆ ಅರಣ್ಯ ಇಲಾಖೆ ಸ್ಪಷ್ಟನೆ ನೀಡಿದೆ. 

ಅರಣ್ಯ ಭೂಮಿಯನ್ನು ಸಾರ್ವಜನಿಕರಿಗೆ ದತ್ತು ನೀಡುವಂತಹ ಯಾವುದೇ ಯೋಜನೆ ರಾಜ್ಯ ಸರ್ಕಾರದಲ್ಲಿಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.

ಪ್ರಾಣಿಯಾಯ್ತು , ಈಗ ಇಡೀ ಬೆಟ್ಟವನ್ನೇ ದತ್ತು ಪಡೆದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಅರಣ್ಯ, ಮೀಸಲು ಅರಣ್ಯ ಹಾಗೂ ವನ್ಯಜೀವಿ ಧಾಮಗಳನ್ನು ದತ್ತು ನೀಡುವಂತಹ ಯಾವುದೇ ಯೋಜನೆ ಅರಣ್ಯ ಇಲಾಖೆಯಲ್ಲಿಲ್ಲ. ಆದರೆ, ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ಚಿತ್ರ ನಟ ದರ್ಶನ್‌ ಅವರು ಮಲೈ ಮಹದೇಶ್ವರ ವನ್ಯಜೀವಿ ಧಾಮದ ಅರಣ್ಯ ಭೂಮಿ ದತ್ತು ಪಡೆದಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿದೆ. ಈ ಅಂಶ ಸತ್ಯಕ್ಕೆ ದೂರವಾಗಿದೆ ಎಂದು ಮಲೈ ಮಹದೇಶ್ವರ ವನ್ಯಜೀವಿ ಧಾಮದ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕೊಂಡಲು ತಿಳಿಸಿದ್ದಾರೆ.

ದರ್ಶನ್ ಕುರುಕ್ಷೇತ್ರಕ್ಕೆ ಸೆನ್ಸಾರ್ ಮಂಡಳಿ ಸರ್ಟಿಫಿಕೇಟ್, ಅಂಬಿ ನೆನಪು

ದರ್ಶನ್‌ ಅವರು ಮಲೈಮಹದೇಶ್ವರ ವನ್ಯಜೀವಿಧಾಮದಲ್ಲಿರುವ ಎರಡು ಕ್ಯಾಂಪ್‌ಗಳಲ್ಲಿ ಕಾರ್ಯನಿರ್ವಹಿಸುವ ಅರಣ್ಯ ವೀಕ್ಷಕರ ಕಲ್ಯಾಣಕ್ಕಾಗಿ ಹಣ ನೀಡಿದ್ದಾರೆ. ಆದರೆ, ಅರಣ್ಯ ಭೂಮಿ ದತ್ತು ಪಡೆದಿದ್ದಾರೆ ಎಂಬ ಅಂಶ ಸತ್ಯಕ್ಕೆ ದೂರವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾದು ಕಾದು ಸುಸ್ತಾದ ಶೆಹಬಾಜ್‌ ಷರೀಫ್‌, ಟರ್ಕಿ ಅಧ್ಯಕ್ಷರ ಜೊತೆ ಪುಟಿನ್‌ ಮೀಟಿಂಗ್‌ ವೇಳೆ ಒಳನುಗ್ಗಿದ ಪಾಕ್‌ ಪ್ರಧಾನಿ!
ಬೆಂಗಳೂರಿನಲ್ಲಿ ಇಷ್ಟೊಂದು ಚಳಿಗೆ ಕಾರಣವೇನು? ಮುಂದಿನ ಮೂರು ದಿನ ಉತ್ತರ ಕರ್ನಾಟಕದಲ್ಲಿ ಶೀತಗಾಳಿ!