ಡರ್ಟಿ ಡೈರಿ ರಹಸ್ಯಕ್ಕೆ ಸಿಎಂ ಕಂಗಾಲು?

Published : Feb 24, 2017, 02:16 PM ISTUpdated : Apr 11, 2018, 01:09 PM IST
ಡರ್ಟಿ ಡೈರಿ ರಹಸ್ಯಕ್ಕೆ ಸಿಎಂ ಕಂಗಾಲು?

ಸಾರಾಂಶ

ಕಾಂಗ್ರೆಸ್​​​​​’ನ ಬಹುತೇಕ ಸಚಿವರು ಹಾಗೂ ಶಾಸಕರು ಪ್ರತಿಕ್ರಿಯೆ ನೀಡಿಲ್ಲ. ಪ್ರಮುಖವಾಗಿ ಸಿಎಂ ಸಿದ್ದರಾಮಯ್ಯ ಡೈರಿ ಬಗ್ಗೆ ಈವರೆಗೂ ಪ್ರತಿಕ್ರಿಯೆ ನೀಡಿಲ್ಲ. ಇವತ್ತು ಯಾವುದೇ ಪೂರ್ವ ನಿಯೋಜಿತ ಕಾರ್ಯಕ್ರಮವಿರದ ಹಿನ್ನೆಲೆಯಲ್ಲಿ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲೇ ಸಿದ್ದರಾಮಯ್ಯ ಉಳಿದಿದ್ದರು. 

ಬೆಂಗಳೂರು (ಫೆ.24): ಹೈಕಮಾಂಡ್’ಗೆ ಕಪ್ಪ ಕಾಣಿಕೆ ವಿಚಾರ  ಕಾಂಗ್ರೆಸ್​​ ಪಾಳಯದಲ್ಲಿ ಸಂಚಲನ ಮೂಡಿಸಿದೆ.

ಇವತ್ತು ಶಿವರಾತ್ರಿ ಆಗಿರುವುದರಿಂದ ಸಚಿವರು ಹಾಗೂ ಕಾಂಗ್ರೆಸ್​ ಶಾಸಕರು ತಮ್ಮ ತಮ್ಮ ಕ್ಷೇತ್ರಗಳನ್ನ ತಲುಪಿದ್ದಾರೆ.

ಕಾಂಗ್ರೆಸ್​​​​​’ನ ಬಹುತೇಕ ಸಚಿವರು ಹಾಗೂ ಶಾಸಕರು ಪ್ರತಿಕ್ರಿಯೆ ನೀಡಿಲ್ಲ. ಪ್ರಮುಖವಾಗಿ ಸಿಎಂ ಸಿದ್ದರಾಮಯ್ಯ ಡೈರಿ ಬಗ್ಗೆ ಈವರೆಗೂ ಪ್ರತಿಕ್ರಿಯೆ ನೀಡಿಲ್ಲ. ಇವತ್ತು ಯಾವುದೇ ಪೂರ್ವ ನಿಯೋಜಿತ ಕಾರ್ಯಕ್ರಮವಿರದ ಹಿನ್ನೆಲೆಯಲ್ಲಿ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲೇ ಸಿದ್ದರಾಮಯ್ಯ ಉಳಿದಿದ್ದರು. 

ಸಿಎಂ ಸಿದ್ದರಾಮಯ್ಯ ಮನೆ ಬಿಟ್ಟು ಹೊರ ಬರಲಿಲ್ಲ. ನಿವಾಸಕ್ಕೆ ಯಾರೊಬ್ಬರನ್ನೂ  ಭದ್ರತಾ ಸಿಬ್ಬಂದಿ ಬಿಡಲಿಲ್ಲ.  

ರಾಜ್ಯಸಭಾ ಸದಸ್ಯ ಪ್ರೊ.ರಾಜೀವ್ ಗೌಡರು  ಬಂದರೂ ಪ್ರವೇಶ ನಿರಾಕರಿಸಲಾಯ್ತು. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಶಾಸಕ ವಸಂತ ಬಂಗೇರಾ ಬಂದ ದಾರಿಗೆ ಸುಂಕ ಇಲ್ಲ ಅನ್ನೋ ಥರಾ ಹೊರಟು ಹೋದರು.

ಮಧ್ಯಾಹ್ನ 3 ಗಂಟೆ ಕಳೆದರೂ ಯಾವೊಬ್ಬ ನಾಯಕನನ್ನೂ ಭೇಟಿಯಾಗಿಲ್ಲ.. ಮಾತಾಡಿಲ್ಲ. ಆದರೆ ಗೋವಿಂದರಾಜು ಮಾತ್ರ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸದ್ಯ ಕೊಲೆ ಮಾಡಿಲ್ಲ..! ಓಡಿಹೋದ ಮಗಳ ಪ್ರತಿಕೃತಿಯ ಶವಯಾತ್ರೆ ಮಾಡಿ ಅಂತ್ಯಸಂಸ್ಕಾರ ಮಾಡಿದ ಕುಟುಂಬ
ರಾತ್ರಿ ಕಣ್ಣೇ ಕಾಣೊಲ್ಲವೆಂದು ಹಗಲಿನಲ್ಲಿಯೇ ಕಿರುತೆರೆ ನಟ ಪ್ರವೀಣ್ ಮನೆಗೆ ಕನ್ನ ಹಾಕಿದ ಇರುಳು ಕುರುಡ!