
ಮೈಸೂರು(ಅ.06): ನಿನ್ನೆ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಭಾರೀ ಮಳೆಯಾಗಿದೆ. ಆಶ್ಚರ್ಯವೆಂದರೆ ಸತತ ಸುರಿದ ಮಳೆಗೆ ಮೊಸಳೆ ಮರಿಯೊಂದು ಪತ್ತೆಯಾಗಿದೆ.
ಭಾರೀ ಪ್ರಮಾಣದ ಮಳೆಯಿಂದಾಗಿ ಮೊಸಳೆ ಮರಿಯೊಂದು ನೀರಿನಲ್ಲಿ ತೇಲಿ ಬಂದಿದೆ. ಶ್ರೀರಂಗಪಟ್ಟಣ ತಾಲೂಕಿನ ಕಾರೇಕುರ ಗ್ರಾಮದ ಶಶಿಕುಮಾರ್ ಎಂಬುವರ ಜಮೀನಿನಲ್ಲಿ ಈ ಮೊಸಳೆ ಮರಿ ಪತ್ತೆಯಾಗಿದೆ. ಆದರೆ ಈ ಮೊಸಳೆ ಮರಿ ಮೀನು ಸಾಕಾಣೆಯ ಕೃಷಿ ಹೊಂಡದಲ್ಲಿ ಪತ್ತೆಯಾಗಿದೆ. ಇಲ್ಲಿಗೆ ಮೀನು ತಿನ್ನಲು ಈ ಮೊಸಳೆ ಮರಿ ಬಂದಿರಬಹುದೆಂದು ಶಂಕಿಸಲಾಗಿದ್ದು, ಇನ್ನೂ ಇಲ್ಲಿನ ಸ್ಥಳೀಯರು ಈ ಮೊಸಳೆ ಮರಿಗೆ ಬಲೆ ಹಾಕಿ ರಕ್ಷಣೆ ಮಾಡಿದ್ದಾರೆ.
ಆದರೆ ಈ ಮೊಸಳೆ ಮರಿಯೊಂದಿಗೆ ದೊಡ್ಡ ಮೊಸಳೆಯೂ ಬಂದಿರಬಹುದೆಂಬ ಆತಂಕ ಜನರಲ್ಲಿ ಉಂಟಾಗಿದೆ. ಸದ್ಯಕ್ಕೆ ಈ ಮೊಸಳೆ ಮರಿಯನ್ನು ಮೃಗಾಲಯದ ವಶಕ್ಕೆ ನೀಡಲಾಗುತ್ತೆ ಎಂದು ಜಮೀನನ ಮಾಲೀಕರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.