
ಬೆಂಗಳೂರು(ಅ.06): ಮುಂದಿನ ಚುನಾವಣೆ ನನ್ನ ನೇತೃತ್ವದಲ್ಲೇ ಎನ್ನುತ್ತಾ ಹೊರಟಿರುವ ಸಿಎಂ ಸಿದ್ದರಾಮಯ್ಯ, ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ಮುಖಂಡರನ್ನು ಅಣಿಗೊಳಿಸುತ್ತಿದ್ದಾರೆ. ಮನಸ್ತಾಪದಿಂದ ದೂರವಾಗಿದ್ದ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನ ಒಂದು ಮಾಡುವ ಪ್ರಯತ್ನವನ್ನ ಸಿದ್ದರಾಮಯ್ಯ ಮಾಡಿದ್ದಾರೆ.
ನಾಯಕ ಸಮುದಾಯದ ಪ್ರಬಲ ಮುಖಂಡರಾದ ಜಾರಕಿಹೊಳಿ ಸಹೋದರರನ್ನ ವಾಲ್ಮೀಕಿ ಜಯಂತಿಯಂದೇ ಕೈ ಕುಲುಕಿಸಿದ್ದಾರೆ. ವಾಲ್ಮೀಕಿ ಜಯಂತೋತ್ಸವದ ನಿಮಿತ್ತ ನಿನ್ನೆ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಹಾಗೂ ವಾಲ್ಮೀಕಿ ತಪೋವನ ಉದ್ಘಾಟನಾ ಸಮಯದಲ್ಲೇ ಇಬ್ಬರು ಮುಖಂಡರ ಮನಸ್ತಾಪ ಶಮನಕ್ಕೆ ಬ್ರೇಕ್ ಹಾಕುವ ಯತ್ನವನ್ನ ಸಿಎಂ ಮಾಡಿದ್ದಾರೆ.
ವಾಲ್ಮೀಕಿ ಪುತ್ಥಳಿ ಅನಾವರಣ ಮಾಡಿದ ತಕ್ಷಣವೇ ಪಕ್ಕದಲ್ಲಿದ್ದ ಸತೀಶ ಜಾರಕಿಹೊಳಿ ಕೈ ಹಿಡಿದು, ಹಿಂದೆ ನಿಂತಿದ್ದ ಸಚಿವ ರಮೇಶ ಜಾರಕಿಹೊಳಿಯನ್ನು ಕರೆದು ಇಬ್ಬರ ಕೈಯನ್ನು ಕುಲುಕಿಸಿದರು. ಇನ್ನೂ ಮನಸ್ತಾಪ ಬೇಡ. ಒಗ್ಗಟ್ಟಿನಿಂದ ಕೆಲಸ ಮಾಡಿ ಅಂತಾ ಸಲಹೆ ನೀಡಿದರು. ರಮೇಶ್ ಜಾರಕಿಹೊಳಿ ನಗುತ್ತಾ ನಿಂತರೆ, ಸತೀಶ್ ಜಾರಕಿಹೊಳಿ ಗಂಭೀರವಾಗೇ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.