ಮದ್ಯ ನಿಷೇಧದಿಂದ ಬಿಹಾರದಲ್ಲಿ ಅಪರಾಧ ಪ್ರಮಾಣ ಭಾರಿ ಇಳಿಕೆ..!

By Suvarna Web DeskFirst Published Feb 12, 2017, 4:41 PM IST
Highlights

2016ರ ಏಪ್ರಿಲ್‌ಗೂ ಮುನ್ನ 44 ಲಕ್ಷ ಬಿಹಾರಿಗಳು ಮದ್ಯ ಸೇವಿಸುತ್ತಿದ್ದರು. ಪ್ರತಿಯೊಬ್ಬರೂ ಮಾಸಿಕ 1 ಸಾವಿರ ರು. ಅನ್ನು ಇದಕ್ಕಾಗಿ ವ್ಯಯಿಸುತ್ತಿದ್ದರು.

ನವದೆಹಲಿ(ಫೆ.12): ಬಿಹಾರದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧ ಜಾರಿಗೊಳಿಸಿದ ನಂತರ ಅಪಹರಣ, ಕೊಲೆ, ಡಕಾಯಿತಿ ಹಾಗೂ ಅತ್ಯಾಚಾರ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿವೆ ಎಂದು ಸ್ವತಃ ರಾಜ್ಯ ಸರ್ಕಾರವೇ ಸುಪ್ರೀಂಕೋರ್ಟ್‌'ಗೆ ಪ್ರಮಾಣ ಪತ್ರ ಸಲ್ಲಿಸಿದೆ.

ಪಾನ ನಿಷೇಧ ಜಾರಿಗೆ ಬಂದು ಒಂದು ವರ್ಷವಾಗಿದ್ದು, ಈ ಅವಧಿಯಲ್ಲಿ ಅಪಹರಣ ಪ್ರಕರಣಗಳು ಶೇ.61.76ರಷ್ಟು ಇಳಿಕೆಯಾಗಿವೆ. ಕೊಲೆ ಪ್ರಕರಣಗಳು ಶೇ.28, ಡಕಾಯಿತಿ ಶೇ.23 ಹಾಗೂ ಅತ್ಯಾಚಾರ ಶೇ.10ರಷ್ಟು ಕಡಿಮೆಯಾಗಿವೆ. ಇದೇ ವೇಳೆ, ಕಾರು ಹಾಗೂ ಟ್ರ್ಯಾಕ್ಟರ್ ಮಾರಾಟ ಶೇ.30ರಷ್ಟು ಏರಿಕೆ ಕಂಡಿದೆ. ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಶೇ.11ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.

2016ರ ಏಪ್ರಿಲ್‌ಗೂ ಮುನ್ನ 44 ಲಕ್ಷ ಬಿಹಾರಿಗಳು ಮದ್ಯ ಸೇವಿಸುತ್ತಿದ್ದರು. ಪ್ರತಿಯೊಬ್ಬರೂ ಮಾಸಿಕ 1 ಸಾವಿರ ರು. ಅನ್ನು ಇದಕ್ಕಾಗಿ ವ್ಯಯಿಸುತ್ತಿದ್ದರು. ಮದ್ಯಪಾನ ನಿಷೇಧದಿಂದಾಗಿ ಮದ್ಯಪಾನ ಮಾಡುತ್ತಿದ್ದವರಿಗೆ ವಾರ್ಷಿಕ 5280 ಕೋಟಿ ರೂ ಉಳಿತಾಯವಾಗುತ್ತಿದೆ. ಆದರೆ ರಾಜ್ಯದ ಬೊಕ್ಕಸಕ್ಕೆ 5 ಸಾವಿರ ಕೋಟಿ ರೂ ಕೊರತೆ ಬಿದ್ದಿದೆ ಎಂದು ತಿಳಿಸಿದೆ.

click me!