
ನವದೆಹಲಿ (ಏ.06): ರಾಜಸ್ಥಾನದಲ್ಲಿ ಗೋವು ಸಾಗಿಸುತ್ತಿದ್ದವನ ಹತ್ಯೆ ಪ್ರಕರಣ ಲೋಕಸಭೆಯಲ್ಲಿ ಪ್ರತಿಧ್ವನಿಸಿದೆ. ಗೋವು ಸಾಗಿಸುತ್ತಿದ್ದವನ ಹತ್ಯೆ ಪ್ರಕರಣ ಕುರಿತಂತೆ ಲೋಕಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ರಾಜಸ್ಥಾನ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ಧಾರೆ. ರಾಜಸ್ಥಾನ ಸರ್ಕಾರ, ಕೊಲೆಗಾರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಆದರೆ, ಅದರ ಬದಲಿಗೆ ಸರ್ಕಾರವೇ ಗೂಂಡಾಗಳನ್ನು ರಕ್ಷಿಸುತ್ತಿದೆ ಎಂದು ಖರ್ಗೆ ಆರೋಪಿಸಿದ್ದಾರೆ.
ಏನಿದು ಪ್ರಕರಣ.?
ರಾಜಸ್ಥಾನದ ಅಲ್ವಾರ್ ಎಂಬಲ್ಲಿ ಗೋವುಗಳನ್ನು ಸಾಗಣೆ ಮಾಡುತ್ತಿದ್ದ ಪೆಹ್ಲು ಖಾನ್ ಎಂಬುವವರ ಮೇಲೆ ಗೋ ರಕ್ಷಕರು ಹಲ್ಲೆ ನಡೆಸಿದ್ದರು. ದಾಳಿ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಪೆಹ್ಲುಖಾನ್ ಬುಧವಾರ ಮೃತಪಟ್ಟಿದ್ದಾರೆ. ಜೈಪುರದಿಂದ ಹರಿಯಾಣಕ್ಕೆ ಗೋವುಗಳನ್ನು ಕರೆತರುತ್ತಿದ್ದ ನಾಲ್ಕು ವಾಹನಗಳನ್ನು ತಡೆಗಟ್ಟಿದ್ದ ಗೋರಕ್ಷಕರು, ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದಾರೆ ಎಂದು ಶಂಕಿಸಿ ಹಲ್ಲೆ ಮಾಡಿದ್ದರು. ಈ ವೇಳೆ, ತಾವು ಗೋವುಗಳನ್ನು ಖರೀದಿಸಿದ್ದೇವೆಂದು ಖಾನ್ ದಾಖಲೆಗಳನ್ನು ತೋರಿಸಿದ್ದರೂ ಗೋ ರಕ್ಷಕರು ನಂಬಲಿಲ್ಲ. ಮೃತ ಪೆಹ್ಲು ಖಾನ್, ಹರಿಯಾಣದಲ್ಲಿ ಡೈರಿ ಫಾರ್ಮ್ ನಡೆಸುತ್ತಿದ್ದರು.
ಇದುವರೆಗೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. 200ಕ್ಕೂ ಹೆಚ್ಚು ಮಂದಿ ಶಂಕಿತ ಆರೋಪಿಗಳ ವಿಚಾರಣೆ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.