ಇನ್ಮುಂದೆ ಇಲ್ಲಿನ ಸರ್ಕಾರಿ ಕಾಲೇಜು'ಗಳ ಶಿಕ್ಷಕರು ಜೀನ್ಸ್, ಟೀಶರ್ಟ್ ಧರಿಸುವಂತಿಲ್ಲ

By Suvarna Web DeskFirst Published Apr 6, 2017, 4:36 AM IST
Highlights

ಈಗಾಗಲೇ ವಸ್ತ್ರಸಂಹಿತೆಯನ್ನು ಜಾರಿಗೊಳಿಸಲು ಉನ್ನತ ಶಿಕ್ಷಣದ ನಿರ್ದೇಶನಾಲಯಗಳಿಗೆ ಸೂಚನೆ ನೀಡಲಾಗಿದ್ದು, 158 ಸರ್ಕಾರಿ ಕಾಲೇಜು ಹಾಗೂ 331 ಸರ್ಕಾರಿ ಅನುದಾನಿತ ಕಾಲೇಜುಗಳಿಗೆ ಸುತ್ತೋಲೆಯನ್ನು ಕಳುಹಿಸಲಾಗಿದೆ.

ಲಖನೌ(ಏ.6): ಸಿಗರೇಟ್ ಹಾಗೂ ಗುಟ್ಕಾ ಸೇವನೆಯನ್ನು ಸರ್ಕಾರಿ ಕಚೇರಿಗಳಲ್ಲಿ ನಿಷೇಧಿಸಿದ ನಂತರ ರಾಜ್ಯದಾದ್ಯಂತ ಇರುವ ಸರ್ಕಾರಿ ಕಾಲೇಜುಗಳಲ್ಲಿನ ಶಿಕ್ಷಕರು  ಜೀನ್ಸ್ ಹಾಗೂ ಟೀಶರ್ಟ್'ನಂತಹ ಪಾಶ್ಚಿಮಾತ್ಯ ಉಡುಪುಗಳನ್ನು ಧರಿಸುವುದನ್ನು ನಿಷೇಧಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಂದಾಗಿದ್ದಾರೆ.

ಈಗಾಗಲೇ ವಸ್ತ್ರಸಂಹಿತೆಯನ್ನು ಜಾರಿಗೊಳಿಸಲು ಉನ್ನತ ಶಿಕ್ಷಣದ ನಿರ್ದೇಶನಾಲಯಗಳಿಗೆ ಸೂಚನೆ ನೀಡಲಾಗಿದ್ದು, 158 ಸರ್ಕಾರಿ ಕಾಲೇಜು ಹಾಗೂ 331 ಸರ್ಕಾರಿ ಅನುದಾನಿತ ಕಾಲೇಜುಗಳಿಗೆ ಸುತ್ತೋಲೆಯನ್ನು ಕಳುಹಿಸಲಾಗಿದೆ. ಶಿಕ್ಷಕರಲ್ಲಿ ಶಿಸ್ತು ತರಿಸುವುದಕ್ಕಾಗಿ ಹಾಜರಾತಿ ಪುಸ್ತಕದ ಬದಲು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾಗಿದೆ.

 

(ಸಾಂದರ್ಭಿಕ ಚಿತ್ರ)              

click me!