ಕೊಡಗಿನಲ್ಲಿ ಧಾರಾಕಾರ ಮಳೆ: ಶಾಲೆಗಳಿಗೆ ನಾಳೆ ರಜೆ

By Suvarna Web DeskFirst Published Jul 19, 2017, 5:59 PM IST
Highlights

ಕಾವೇರಿ ಕಣಿವೆಯ ಪ್ರಮುಖ ಜಿಲ್ಲೆ ಕೊಡಗಿನಲ್ಲಿ ಮಳೆ ಕ್ಷೀಣಿಸಿರೋದು ಜನರಲ್ಲಿ ಆತಂಕ ಸೃಷ್ಟಿಸಿದ್ದು ಕಳೆದ ರಾತ್ರಿಯಿಂದ ಮತ್ತೆ ಮಳೆಯಾಗುತ್ತಿರೋದು ರೈತರಲ್ಲಿ ಆಶಾಭಾವನೆ ಮೂಡಿಸಿದೆ.

ಕೊಡಗಿನಲ್ಲಿ ಕಳೇದ ಅನೇಕ ದಿನಗಳಿಂದ ಮಂಕಾಗಿದ್ದ ಮುಂಗಾರುಮಳೆ ಮತ್ತೆ ಚುರುಕಾಗೋ ಲಕ್ಷಣ ಗೋಚರಿಸಿದೆ, ನಿನ್ನೆಯಿಂದ  ಜಿಲ್ಲೆಯ  ಸೋಮವಾರಪೇಟೆ ಮಡಿಕೇರಿ ವಿರಾಜಪೇಟೆ, ಗೋಣಿಕೊಪ್ಪಾ ಸೇರಿದಂತೆ ಹಲವೆಡೆ ಉತ್ತಮ ಮಳೆಬಿದ್ದಿದ್ದು ಮಳೆ ಚುರುಕಾಗೋ ಲಕ್ಷಣ ಕಾಣಿಸಿಕೊಂಡಿದೆ, ಅಲ್ಲದೇ ಬೆಳಿಗ್ಗೆಯಿಂದಲೂ ಧಾರಕಾರವಾಗಿ ಮಂಜಿನ ನಗರಿ ಮಡಿಕೇರಿಯಲ್ಲಿ ಮಳೆ ಬೀಳುತ್ತಿದ್ದು ಜನಜೀವನ ಅಸ್ಥವಾಸ್ಥಗೊಂಡಿದ್ದೆ,ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಅತ್ಯಂತ ಕಡಿಮೆಪ್ರಮಾಣದಲ್ಲಿ ಮಳೆಬಿದ್ದಿದ್ದು ಮಳೆಯ ಕೊರತೆ ಕಾಡುತ್ತಿತ್ತು. ಕಾವೇರಿ ಕಣಿವೆಯ ಪ್ರಮುಖ ಜಿಲ್ಲೆ ಕೊಡಗಿನಲ್ಲಿ ಮಳೆ ಕ್ಷೀಣಿಸಿರೋದು ಜನರಲ್ಲಿ ಆತಂಕ ಸೃಷ್ಟಿಸಿದ್ದು ಕಳೆದ ರಾತ್ರಿಯಿಂದ ಮತ್ತೆ ಮಳೆಯಾಗುತ್ತಿರೋದು ರೈತರಲ್ಲಿ ಆಶಾಭಾವನೆ ಮೂಡಿಸಿದೆ.

click me!