ಕವರ್​​ಸ್ಟೋರಿ ಎಕ್ಸ್’ಪೋಸ್: ವಾಹನ ಚಾಲಕರೇ ಎಚ್ಚೆತ್ತುಕೊಳ್ಳಿ! ಬಂಕ್​ಗಳಲ್ಲಿ ನಡೆಯುತ್ತಿದೆ ಭಾರೀ ಹಗರಣ

Published : Aug 16, 2017, 02:12 PM ISTUpdated : Apr 11, 2018, 01:10 PM IST
ಕವರ್​​ಸ್ಟೋರಿ ಎಕ್ಸ್’ಪೋಸ್: ವಾಹನ ಚಾಲಕರೇ ಎಚ್ಚೆತ್ತುಕೊಳ್ಳಿ! ಬಂಕ್​ಗಳಲ್ಲಿ ನಡೆಯುತ್ತಿದೆ ಭಾರೀ ಹಗರಣ

ಸಾರಾಂಶ

ಒಂದು ಕಡೆ ಪೆಟ್ರೋಲ್​ ಡೀಸೆಲ್ ದರ ಗಗನಕ್ಕೇರುತ್ತಿದೆ. ಇನ್ನೊಂದೆಡೆ ನಮ್ಮ ರಾಜ್ಯದ ಪೆಟ್ರೊಲ್​ ಬಂಕ್’​ಗಳಲ್ಲಿ  ಅಳತೆಯಲ್ಲಿ ಭಾರೀ ಮೋಸ ಮಾಡಲಾಗುತ್ತಿದೆ. ಆ ಮೂಲಕ ಗ್ರಾಹಕರಿಗೆ ಭರ್ಜರಿ ವಂಚನೆ ಮಾಡಲಾಗುತ್ತಿದೆ. ಈ ವಂಚನಾ ಜಾಲವನ್ನು  ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ತಂಡ ರಿಯಾಲಿಟಿ ಚೆಕ್​ ಮಾಡಿ ಬಯಲಿಗೆಳೆದಿದೆ. ನಾನಾ ಕಡೆ ರಹಸ್ಯ ಕಾರ್ಯಾಚರಣೆ ಮಾಡಿ ಪೆಟ್ರೋಲ್​ ಬಂಕ್​ ಮಾಲೀಕರ ಮೋಸದಾಟವನ್ನ ಬಹಿರಂಗಗೊಳಿಸಿದೆ.

ಒಂದು ಕಡೆ ಪೆಟ್ರೋಲ್​ ಡೀಸೆಲ್ ದರ ಗಗನಕ್ಕೇರುತ್ತಿದೆ. ಇನ್ನೊಂದೆಡೆ ನಮ್ಮ ರಾಜ್ಯದ ಪೆಟ್ರೊಲ್​ ಬಂಕ್’​ಗಳಲ್ಲಿ  ಅಳತೆಯಲ್ಲಿ ಭಾರೀ ಮೋಸ ಮಾಡಲಾಗುತ್ತಿದೆ. ಆ ಮೂಲಕ ಗ್ರಾಹಕರಿಗೆ ಭರ್ಜರಿ ವಂಚನೆ ಮಾಡಲಾಗುತ್ತಿದೆ. ಈ ವಂಚನಾ ಜಾಲವನ್ನು  ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ತಂಡ ರಿಯಾಲಿಟಿ ಚೆಕ್​ ಮಾಡಿ ಬಯಲಿಗೆಳೆದಿದೆ. ನಾನಾ ಕಡೆ ರಹಸ್ಯ ಕಾರ್ಯಾಚರಣೆ ಮಾಡಿ ಪೆಟ್ರೋಲ್​ ಬಂಕ್​ ಮಾಲೀಕರ ಮೋಸದಾಟವನ್ನ ಬಹಿರಂಗಗೊಳಿಸಿದೆ.

ಕವರ್​ಸ್ಟೋರಿ ತಂಡ ದೊಡ್ಡ ಬಳ್ಳಾಪುರದ ಮಹಾದೇವಯ್ಯ ಆಂಡ್​ ಕೋ ಪೆಟ್ರೋಲ್​ ಬಂಕ್ ​ನಲ್ಲಿ ನಡೆಸಿದ ರಿಯಾಲಿಟಿ ಚೆಕ್​ ಮಾಡಿದಾಗ, ಒಂದೊಂದು ಬಾರಿ ಒಂದೊಂದು ಅಳತೆ ಕಾಣ ಸಿಕ್ತು. ಆರಂಭದಲ್ಲಿ ನಾವು ಕ್ಯಾನ್​ನಲ್ಲಿ ಪೆಟ್ರೋಲ್​ ಖರೀದಿಸಿ, ಅದನ್ನು ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ಅನುಮತಿ ಪಡೆದು ಖರೀದಿಸಿದ ಮಾಪನದಲ್ಲಿ ಅಳತೆ ಮಾಡಿದಾಗ 50 mlಗೂ ಹೆಚ್ಚು ವ್ಯತ್ಯಾಸ ಕಂಡು ಬಂತು.

ಆ ಬಳಿಕ ನೇರವಾಗಿ ಪೆಟ್ರೋಲ್​ ಬಂಕ್​ ಒಳಗೇ ಹೋಗಿ ಅವರದ್ದೇ ಮಾಪನದಲ್ಲಿ ಅಳತೆ ಮಾಡಿದಾಗ್ಲೂ ಭಾರೀ ವ್ಯತ್ಯಾಸ ಕಂಡು ಬಂತು. ಬಳಿಕ ಚರ್ಚೆಗಿಳಿದಾಗ ಮತ್ತೆ ಅಳತೆ ಮಾಡಿ ತೋರಿಸ್ತೀವಿ ಅಂದ್ರು. ಆಗ ಇದ್ದಕ್ಕಿದ್ದ ಹಾಗೆ ಕರೆಂಟ್​ ಬೇರೆ ಹೋಯ್ತು. ಮತ್ತೆ ಚೆಕ್​ ಮಾಡಿದಾಗ ಐದು ಲೀಟರ್​ಗಿಂತಲೂ ಹೆಚ್ಚು ಪೆಟ್ರೋಲ್​ ಹಾಕಿದ್ರು. ಈ ರೀತಿ ಒಮ್ಮೊಮ್ಮೆ ಒಂದೊಂದು ರೀತಿಯ ಅಳತೆ ತೋರಿಸಿದ್ರು. ಇದು ಇಲ್ಲಿ ಅಳತೆಯಲ್ಲಿ ನಡೆಯುತ್ತಿರೋ  ಮೋಸಕ್ಕೆ ಹಿಡಿದ ಕನ್ನಡಿಯಾಗಿದೆ.

ದೊಡ್ಡಬಳ್ಳಾಪುರ:

ದೊಡ್ಡಬಳ್ಳಾಪುರದ ಕನ್ನಮಂಗಲದ ಎಸ್​ಎಲ್​ವಿ ಫಿಲ್ಲಿಂಗ್​ ಸ್ಟೇಷನ್​ನಲ್ಲಿ ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ತಂಡ ರಿಯಾಲಿಟಿ ಚೆಕ್​ ಮಾಡಿದಾಗ  ಐದು ಲೀಟರ್​ಗೆ ನೂರು ಎಂ.ಎಲ್​ ವ್ಯತ್ಯಾಸ ಕಂಡು ಬಂತು ಗೊತ್ತಾ? ಆರಂಭದಲ್ಲಿ  ಬಂಕ್​ನವರ ಮಾಪನದಲ್ಲಿ ಚೆಕ್​ ಮಾಡಿದ್ವಿ. ಆಗ ವ್ಯತ್ಯಾಸ ಕಂಡು ಬಂತು. ಬಳಿಕ  ಕವರ್​ಸ್ಟೋರಿ ತಂಡ ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ಅನುಮತಿ ಪಡೆದು ಖರೀದಿಸಿದ ಮಾಪನದಲ್ಲಿ ಅಳತೆ ಮಾಡಿದಾಗಲೂ ವ್ಯತ್ಯಾಸ ಕಂಡು ಬಂತು. ಎಷ್ಟು ವ್ಯತ್ಯಾಸ ಇರಬಹುದು ಅಂತ ಚೆಕ್​ ಮಾಡಿದಾಗ ನೂರು ಎಂಎಲ್​ ವ್ಯತ್ಯಾಸ ಕಂಡು ಬಂತು.

ಅಚ್ಚರಿಯಾಯ್ತಾ?  ಈ ರೀತಿ ಐದು ಲೀಟರ್​ಗೆ ನೂರು ಎಂಎಲ್​​​ ಖೋತಾ ಆದ್ರೆ ಗ್ರಾಹಕರಿಗಾಗೋ ನಷ್ಟ ಎಷ್ಟು ಆಗುತ್ತೆ ಗೊತ್ತಾ?

ನಷ್ಟದ ಲೆಕ್ಕಾಚಾರ

100ML      6.83   ರೂ

50ML         3.41 ರೂ

30ML         2.00 ರೂ

10ML          0.68 ಪೈಸೆ

 

ನೆಲಮಂಗಲ:

ನೆಲಮಂಗಲದ ಮಾರುತಿ ಕಿಸಾನ್​ ಪೆಟ್ರೋಲ್​ ಬಂಕ್​ನಲ್ಲಿ ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ತಂಡ ರಿಯಾಲಿಟಿ ಚೆಕ್​ ಮಾಡಿದಾಗ ವಿಚಿತ್ರ ಅನುಭವವೇ  ಆಯ್ತು. ಅಲ್ಲಿನ ಬಂಕ್​ ಸಿಬ್ಬಂದಿ ರಹಸ್ಯ ಕಾರ್ಯಾಚರಣೆ ವೇಳೆ 5 ಲೀಟರ್​​ಗೆ ಅರ್ಧ ಲೀಟರ್​ ವ್ಯತ್ಯಾಸ ಬರುತ್ತೆ ಅಂತ ಹೇಳಿದ್ರು. ಬಳಿಕ ಅಳತೆ ಚೆಕ್​ ಮಾಡಿ ಅಂತ ಕೇಳಿದಾಗ ಯಾವುದೇ ಕಾರಣಕ್ಕೂ ಅಳತೆ ಮಾಡಿ ಕೊಡಲ್ಲ ಅಂತ ದರ್ಪ ಮೆರೆದ್ರು. ನಮ್ಮ ಜೊತೆ ಜಗಳಕ್ಕಿಳಿದ್ರು. ಒತ್ತಾಯದ ಬಳಿಕ ಮಾಪನ ತಂದ್ರು, ಅಳತೆ ಮಾಡಿದಾಗ ಅಳತೆಯಲ್ಲಿ ವ್ಯತ್ಯಾಸ ಕಂಡು ಬಂತು.

ಬೆಂಗಳೂರು ನಗರ:

ರಾಜಧಾನಿ ಬೆಂಗಳೂರಿನ ಪೆಟ್ರೋಲ್​ ಬಂಕ್​ಗಳಲ್ಲಿ ಅಳತೆಯಲ್ಲಿ  ಗ್ರಾಹಕರಿಗೆ ಮೋಸ ಮಾಡಲಾಗುತ್ತಾ ಅಂತ ಚೆಕ್​ ಮಾಡಲು ನಮ್ಮ ಕವರ್​ಸ್ಟೋರಿ ತಂಡ ರಹಸ್ಯ ಕಾರ್ಯಾಚರಣೆಗೆ ಇಳಿಯಿತು. ಆಗ ನಮ್ಮ ಬಲೆಗೆ ಬಿದ್ದ ಮೊದಲ ವಂಚಕ ಬಂಕ್​ ಅಂದ್ರೆ  ಮೈಸೂರು ಬ್ಯಾಂಕ್​ನಲ್ಲಿದ್ದ  ಇಂಡಿಯನ್ ಆಯಿಲ್​ ಪೆಟ್ರೋಲ್​ ಬಂಕ್​. ಇಲ್ಲಿ ಅಳತೆಯಲ್ಲಿ ಮೋಸ ಮಾತ್ರವಲ್ಲ  ಬಂಕ್​ ಸಿಬ್ಬಂದಿ ಸೊಕ್ಕು ಕೂಡಾ ಬಯಲಾಯ್ತು. ಹೇಗೆ ಗ್ರಾಹಕರ ಮೇಲೆ ಬಂಕ್​ ಸಿಬ್ಬಂದಿ ದರ್ಪ ಪ್ರದರ್ಶಿಸುತ್ತಿದ್ದಾರೆ ಅನ್ನೋದು ಗೊತ್ತಾಯ್ತು.

ಬನಶಂಕರಿಯಲ್ಲಿರೋ ಪೆಟ್ರೋಲ್​ ಬಂಕ್​’ನಲ್ಲಂತು ಬಂಕ್​ ಸಿಬ್ಬಂದಿ ದಾರಿ ತಪ್ಪಿಸಲು ಮುಂದಾದ್ರು. ಅಳತೆ ಮಾಡಿ 5 ಲೀಟರ್​ ಪೆಟ್ರೋಲ್​ ಕೊಡಿ ಅಂತ ಕೇಳಿದಾಗ ಅರ್ಧ ಲೀಟರ್​ ಮಾಪನ ತೋರಿಸಿ ನಾವು ಇದರಲ್ಲೇ ಅಳತೆ ಮಾಡೋದು ಅಂದ್ರು. ಆ ಬಳಿಕ ತಮ್ಮಲ್ಲಿ ಐದು ಲೀಟರ್ ಮಾಪನ ಇಲ್ಲಾ ಅಂದ್ರು. ಕೊನೆಗೆ ಕ್ಯಾಮರಾ ಹೊರಗೆ ತಂದಾಗ ಇಂಧನ ಚೆಕ್​ ಮಾಡಿದಾಗ ಆಳತೆಯಲ್ಲಿ ಭಾರೀ ವ್ಯತ್ಯಾಸ ಕಂಡು ಬಂತು.

ಡಬಲ್​ ರೋಡ್​ನಲ್ಲಿರೋ ಭಾರತ್​ ಪೆಟ್ರೋಲ್​ ಬಂಕ್ ಸಿಬ್ಬಂದಿ ಆರಂಭದಲ್ಲಿ ಅಳತೆ ಮಾಡಿ ಕೊಡಲ್ಲ ಎಂದು ದರ್ಪ ತೋರಿದ್ರು. ಮನವಿ ಮಾಡಿದ್ರೆ ಮಾತ್ರ ಅಳತೆ ಮಾಡಿ ಕೊಡ್ತೀವಿ ಅಂದ್ರು. ಯಾವಾಗ ಕ್ಯಾಮರಾ ತೋರಿಸಿದೆವೋ ಆಗ ಅಳತೆ ಮಾಡಲು ಒಪ್ಪಿದ್ರು. ಇಲ್ಲಿ ಒಂದೊಂದು ಗನ್​ನಲ್ಲಿ ಒಂದೊಂದು ಅಳತೆ ಬರಲು ಪ್ರಾರಂಭಿಸಿತು. ಒಂದು ಗನ್​ನಲ್ಲಂತು 40 ml ವ್ಯತ್ಯಾಸ ಕಂಡು ಬಂತು.

ಬೆಂಗಳೂರಿನಲ್ಲಿ ಮತ್ತೊಂದು ವಿಚಿತ್ರ ಅಂಶ ಬಹಿರಂಗವಾಯಿತು. ಅದೇನಂದ್ರೆ ಕೆಲವು ಪೆಟ್ರೋಲ್​ ಬಂಕ್​ಗಳಲ್ಲಿ ಎರಡೆರಡು ಅಳತೆ ಮಾಪನಗಳನ್ನ ಹೊಂದಿವೆ ಎಂದು. ಗ್ರಾಹಕರನ್ನು ವಂಚಿಸಲು ಇವರು ಇಂಥಾ ಟ್ರಿಕ್ಸ್​ ಬಳಸುತ್ತಿದ್ರು. ಇದು ಬಂಬೂ ಬಜಾರ್​ನ ಯುನಿವರ್ಸಲ್​ ಪೆಟ್ರೋಲ್​ ಬಂಕ್​ನಲ್ಲಿ ಕಂಡು ಬಂತು. ಕೆಲವು ಪೆಟ್ರೋಲ್​ ಬಂಕ್​ ಗಳು ಮಾತ್ರ ಪಕ್ಕಾ 5 ಲೀಟರ್​​ ಅಳತೆ ಇಟ್ಟುಕೊಂಡಿದ್ದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!