ತಮ್ಮ ಮದುವೆಯ ನೆನಪನ್ನು ಸುಂದರವಾಗಿಡಲು ಒಬ್ಬೊಬ್ಬರು ಒಂದೊಂದು ರೀತಿ ಮದುವೆಯಾಗುತ್ತಾರೆ. ಇಲ್ಲೊಂದು ಜೋಡಿ ಮ್ಯಾರಾಥಾನ್ ಓಡುತ್ತಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ವಾಷಿಂಗ್ ಟನ್ (ಅ. 29): ಅಮೆರಿಕದ ಜೋಡಿಯೊಂದು ಮ್ಯಾರಥಾನ್ ಓಡುವಾಗಲೇ ಮದುವೆಯಾಗಿದೆ.
ಡೆಟ್ರಾಯಿಟ್‌ನಲ್ಲಿ ಇತ್ತೀಚೆಗೆ ನಡೆದ 26 ಮೈಲು ದೂರದ ಮ್ಯಾರಥಾನ್‌ನ ಅರ್ಧ ಭಾಗ ಕ್ರಮಿಸುತ್ತಲೇ ವಿಟ್ನಿ ಬ್ಲ್ಯಾಕ್ ಮತ್ತು ಸ್ಟೀವನ್ ಫಿಲಿಪ್ ಎಂಬ ಜೋಡಿ ರಸ್ತೆಯಲ್ಲೇ ಮದುವೆಯಾಗಿದೆ. ಮೊದಲೇ ಸಿದ್ಧತೆ ಮಾಡಿಕೊಂಡಿದ್ದ ಕಾರಣ ಎಲ್ಲರೂ ಸ್ಥಳದಲ್ಲಿ ಸಿದ್ಧವಾಗಿದ್ದರು. ಹೀಗಾಗಿ ಕೆಲವೇ ನಿಮಿಷಗಳಲ್ಲಿ ಮದುವೆ ಮುಗಿಸಿದ ಜೋಡಿ, ಬಳಿಕ ಮ್ಯಾರಥಾನ್ ಅನ್ನು ಪೂರೈಸಿದೆ.