ಮುಖೇಶ್ ಅಂಬಾನಿ ಸುದ್ದಿಗೋಷ್ಠಿ : ಜಿಯೋ ಸೌಲಭ್ಯ 12 ತಿಂಗಳು ಮುಂದುವರಿಕೆ, ಏನೇನಿದೆ ಗೊತ್ತಾ ?

By Suvarna Web DeskFirst Published Feb 20, 2017, 10:06 PM IST
Highlights

ಜಿಯೋ ಸೌಲಭ್ಯ 12 ತಿಂಗಳು ಮುಂದುವರಿಕೆ

ಮುಂಬೈ(ಫೆ.21): ಇಡೀ ಅಂತರ್ಜಾಲ ವ್ಯವಸ್ಥೆಗೆ ಸೆಡ್ಡು ಹೊಡೆದಿರುವ ರಿಲಯನ್ಸ್ ಜಿಯೋ ತನ್ನ ಉಚಿತ ಸೇವೆಯನ್ನು ಮುಂದಿನ 12 ತಿಂಗಳುಗಳ ಕಾಲ ಮುಂದುವರಿಸಿದೆ.  ಹಾಲಿ ಉಚಿತ ಕರೆ ಮುಂದಿನ 12 ತಿಂಗಳುಗಳ ಕಾಲ ಮುಂದುವರಿಯಲಿದೆ. ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿದ ರಿಲಯನ್ಸ್ ಮುಖ್ಯಸ್ಥ 99 ರೂ. ಪಾವತಿಸಿದರೆ ಜಿಯೋ ಉಚಿತ ಕರೆ ಮುಂದುವರಿಯಲಿದ್ದು, ಮಾ.31ರೊಳಗೆ ಕೇವಲ 99ರೂ. ರಿಚಾರ್ಜ್​ ಮಾಡಿಸಿದರೆ ಉಚಿತ ಸೇವೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಈ ವರ್ಷದ ಮಾರ್ಚ್ 31ರ ನಂತರ ಪ್ರತಿ 1 ಜಿಬಿಗೆ 10 ರೂ. ಶುಲ್ಕ ವಿಧಿಸುವ ಸಾಧ್ಯತೆ ಬಹುತೇಕ ಖಚಿತವಾಗಿದೆ.ಈಗಾಗಲೇ 10 ಕೋಟಿ ಚಂದದಾರರು ಜಿಯೋ ಸಿಮ್ ಅನ್ನು ಖರೀದಿಸಿ ಬಳಸುತ್ತಿದ್ದಾರೆ. ರಿಲಯನ್ಸ್ ಜಿಯೋ 10 ಕೋಟಿ ಗ್ರಾಹಕರನ್ನು ಕೇವಲ 170 ದಿನಗಳಲ್ಲಿ ಹೊಂದಿದೆ. ಕಂಪನಿಯು ಶೇ.99 ಜನಸಂಖ್ಯೆಗೆ ತನ್ನ ಜಾಲವನ್ನು ವರ್ಷಾಂತ್ಯದೊಳಗೆ ವಿಸ್ತರಿಸುವ ಗುರಿ ಹೊಂದಿದೆ ಎಂದು ಹೇಳಿದರು.

ಜಿಯೋ ಪ್ರೈಮ್

‘ಜಿಯೋ ಪ್ರೈಮ್’ ಸದಸ್ಯತ್ವದ ಆರ್ ಅಡಿ, ಈಗ ಇರುವ ಗ್ರಾಹಕರು ಒಂದು ಸಲದ ಶುಲ್ಕವಾದ 99 ರು. ನೀಡಿ ಚಂದಾದಾರರಾಗಬಹುದು. ಇದು ಚಂದಾ ಶುಲ್ಕ ಮಾತ್ರ. ಮಾರ್ಚ್ 1ರಿಂದ ಮಾರ್ಚ್ 31ರ ಅವಯಲ್ಲಿ ಜಿಯೋ ಪ್ರೈಮ್ ಚಂದಾದಾರರಾಗಬೇಕು.

ಬಳಿಕ ಏ.1ರಿಂದ ‘ಜಿಯೋ ಪ್ರೈಮ್’ ಚಂದಾದಾರರು ಮಾಸಿಕ 303 ರು. ಕೊಟ್ಟು ರೀಚಾರ್ಜ್ ಮಾಡಿಕೊಂಡರೆ ಈಗ ಇರುವ ಸೌಲಭ್ಯಗಳು ಮಾರ್ಚ್ 2018ರವರೆಗೆ ಲಭ್ಯವಿರುತ್ತವೆ. ಅಂದರೆ ದಿನಕ್ಕೆ 10 ರು. ಮಾತ್ರ ಕೊಟ್ಟಂತಾಗುತ್ತದೆ ಎಂದು ಮುಕೇಶ್ ಅಂಬಾನಿ ಹೇಳಿದರು. ಆದರೆ ಈಗ ಇರುವಂತೆ ಏಪ್ರಿಲ್1ರಿಂದ ಮುಂದಿನ 1 ವರ್ಷದ ಅವಗೆ ಧ್ವನಿಕರೆಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

click me!