ಚಿಕ್ಕರಾಯಪ್ಪಗೆ ’ರಾಜ’ಆಶ್ರಯ : ಮುಖ್ಯಾತಿ'ಮುಖ್ಯ' ರಾಜಕಾರಣಿಯ ಫಾರ್ಮ್ ಹೌಸ್'ನಲ್ಲಿರುವ ಶಂಕೆ !

Published : Dec 27, 2016, 08:39 PM ISTUpdated : Apr 11, 2018, 12:51 PM IST
ಚಿಕ್ಕರಾಯಪ್ಪಗೆ ’ರಾಜ’ಆಶ್ರಯ : ಮುಖ್ಯಾತಿ'ಮುಖ್ಯ' ರಾಜಕಾರಣಿಯ ಫಾರ್ಮ್ ಹೌಸ್'ನಲ್ಲಿರುವ ಶಂಕೆ !

ಸಾರಾಂಶ

ಆಶ್ರಯ ನೀಡಿದ ರಾಜಕಾರಣಿ ಹಾಗೂ ಆಶ್ರಯ ತಾಣದ ಬಗ್ಗೆ ಇಡಿ ಅಧಿಕಾರಿಗಳಿಗೆ ಖಚಿತ ಮಾಹಿತಿಯಿದ್ದು, 'ಮುಖ್ಯಾತಿಮುಖ್ಯ' ರಾಜಕಾರಣಿಯೊಬ್ಬರ ಫಾರ್ಮ್​​ ಹೌಸ್​ನಲ್ಲಿ ಅಡಗಿ ಕುತಿರುವ ಚಿಕ್ಕರಾಯಪ್ಪ ರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಲು ಚಿಂತನೆ ನಡೆಸಿದ್ದಾರೆ.

ಬೆಂಗಳೂರು(ಡಿ.28):  ಬ್ಲ್ಯಾಕ್​ ಅಂಡ್​ ದಂಧೆಯಲ್ಲಿ  ಶಾಮೀಲಾದ  ಭ್ರಷ್ಟ ಅಧಿಕಾರಿ ಚಿಕ್ಕರಾಯಪ್ಪ ನಾಪತ್ತೆಯಾಗಿ ಹಲವು ದಿನಗಳೆ ಕಳೆದಿವೆ. ಕಾವೇರಿ ನಿಗಮ ಮಂಡಳಿ ಎಂಡಿ ಆಗಿದ್ದ ಚಿಕ್ಕರಾಯಪ್ಪ  ಐಟಿ ದಾಳಿ ನಂತರ ತಲೆಮರೆಸಿಕೊಂಡಿದ್ದಾರೆ. ಮೂಲಗಳ ಪ್ರಕಾರ  ಚಿಕ್ಕರಾಯಪ್ಪ  ಅವರಿಗೆ ರಾಜ್ಯದ ಪ್ರಭಾವಿ ರಾಜಕಾರಣಿ ಒಬ್ಬರಿಂದ ಆಶ್ರಯ ಸಿಕ್ಕಿದೆ ಎನ್ನಲಾಗಿದೆ.

ಆಶ್ರಯ ನೀಡಿದ ರಾಜಕಾರಣಿ ಹಾಗೂ ಆಶ್ರಯ ತಾಣದ ಬಗ್ಗೆ ಇಡಿ ಅಧಿಕಾರಿಗಳಿಗೆ ಖಚಿತ ಮಾಹಿತಿಯಿದ್ದು, 'ಮುಖ್ಯಾತಿಮುಖ್ಯ' ರಾಜಕಾರಣಿಯೊಬ್ಬರ ಫಾರ್ಮ್​​ ಹೌಸ್​ನಲ್ಲಿ ಅಡಗಿ ಕುತಿರುವ ಚಿಕ್ಕರಾಯಪ್ಪ ರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಲು ಚಿಂತನೆ ನಡೆಸಿದ್ದಾರೆ.

ಸ್ಥಳೀಯ ಪೊಲೀಸರ ಸಹಾಯ ಕೋರಲು ಮುಂದಾಗಿರುವ ಇಡಿ ಅಧಿಕಾರಿಗಳು ಕಾನೂನು ತಜ್ಞರ ಅಭಿಪ್ರಾಯ ಕೇಳಲು ಮುಂದಾಗಿದ್ದಾರೆ. ಅಲ್ಲದೆ ಆಶ್ರಯ ನೀಡಿರುವ ರಾಜಕಾರಣಿಯ ಮೇಲೂ ಕ್ರಮಕ್ಕೆ ಅಧಿಕಾರಿಗಳ ಚಿಂತನೆ ನಡೆಸಿದ್ದಾರೆ. ಆದರೆ ಮುಖ್ಯಾತಿಮುಖ್ಯ ಹುದ್ದೆಯಲ್ಲಿರುವ ರಾಜಕಾರಣಿಯ ಮೇಲೆ ಕ್ರಮ ಸಾಧ್ಯವೆ  ಎನ್ನುವುದು ಸದ್ಯದ ಪ್ರಶ್ನೆ !    

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಾಜಿ ಸಚಿವ ರಾಜುಗೌಡ ಕಾರು ಅಪಘಾತ ಕೇಸ್‌ಗೆ ಟ್ವಿಸ್ಟ್, ಟಿಪ್ಪರ್ ಎರಡು ಬಾರಿ ಡಿಕ್ಕಿ ಹಿಂದೆ ಅನುಮಾನ
ಸ್ಟೇಜ್ ಮೇಲೇನೇ ಸಿಟ್ಟಿಗೆದ್ದ ರಚಿತಾ ರಾಮ್ 'ಫ*..' ಅಂದೇಬಿಟ್ರು!.. ಅಂಥಾ ಸಿಟ್ಟು 'ಲೇಡಿ ಬಾಸ್‌'ಗೆ ಯಾಕ್ ಬಂತು?