
ಧಾರವಾಡ (ಡಿ.27): ಕನ್ನಡ ಚಿತ್ರರಂಗದ ಖ್ಯಾತ ಕಲಾ ನಿರ್ದೇಶಕ ಸುಭಾಷ್ ಕಡಕೋಳ ಇಂದು ಧಾರವಾಡದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
61 ವರ್ಷದ ಸುಭಾಷ್ ಅವರು, ಕಳೆದ ಎರಡು ತಿಂಗಳಿನಿಂದ ಅನಾರೋಗ್ಯದಿಂದ ನರಳುತ್ತಿದ್ದರು. ಮೂಲತಃ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಅಮಟೂರು ಗ್ರಾಮದವರಾದ ಸುಭಾಷ್ 35 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು.
ಕನ್ನಡ ಚಿತ್ರರಂಗದ ಖ್ಯಾತನಾಮರಾದ ಎಸ್ ನಾರಾಯಣ್, ಕ್ರೇಜಿಸ್ಟಾರ್ ರವಿಚಂದ್ರನ್, ದಿನೇಶಬಾಬು, ರಾಜೇಂದ್ರಸಿಂಗ್ ಬಾಬು, ಓಂ ಸಾಯಿಪ್ರಕಾಶ್, ಸೇರಿದಂತೆ ಅನೇಕರ ಚಿತ್ರಗಳಿಗೆ ಕಲಾ ನಿರ್ದೇಶನ ಮಾಡಿದ್ದರು.
ಕನ್ನಡದ ಖ್ಯಾತ ಚಿತ್ರಗಳಾದ ನಮ್ಮೂರ ಮಂದಾರ ಹೂವೇ, ಗೋಪಿ, ನೀಲಕಂಠ, ದುರ್ಗಾಶಕ್ತಿ, ಮೋಹಿನಿ, ಹೊಸರಾಗ, ಮೊಗ್ಗಿನ ಮನಸ್ಸು, ಹಿಮಪಾತ, ಪುಟ್ನಂಜ ಸೇರಿದಂತೆ ಇತರೆ ಹೆಸರಾಂತ ಚಿತ್ರಗಳಿಗೂ ಸುಭಾಷ್ ಕಲಾ ನಿರ್ದೇಶಕರಾಗಿ ದುಡಿದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.