ಕೊರೋನಾ ವೈರಸ್ ತಡೆಯಲು ಹೇರಿರುವ ಲಾಕ್‌ಡೌನ್ ಜೊತೆಗೆ ಪ್ರಧಾನಿ ಮೋದಿ ದೇಶದ ಜನತೆಗೆ ಮತ್ತೊಂದು ಕರೆ ನೀಡಿದ್ದಾರೆ. ಲಾಕ್‌ಡೌನ್ ಬಳಿಕ ಮೋದಿ ಅಸ್ತ್ರವೇನು ಅನ್ನೋ ಕುತೂಹಲಕ್ಕೂ ಉತ್ತರ ಸಿಕ್ಕಿದೆ. ಆದೇಶ ದಿಕ್ಕರಿಸಿದ ಮೂವರು ಇದೀಗ ಜೈಲುಪಾಲಾಗಿದ್ದಾರೆ. ಎಲ್ಲಾ ಅಂಗಡಿಗಳು ಮುುಚ್ಚಿರುವ ಕಾರಣ ಕುಡುಕರು ಪರದಾಡ ಹೆಚ್ಚಾಗಿದೆ. ಇದೀಗ ಕಳ್ಳತನಕ್ಕೆ ಇಳಿದಿರುವ ಕುಡುಕರು ಅಲ್ಲೂ ನಿಯತ್ತು ತೋರಿದ್ದಾರೆ. ಸೂಪರ್ ಹಿಟ್ ಆಯ್ತು ರಾಮಾಯಣ ಸೀರಿಯಲ್, ಸಚಿನ್, ಕೊಹ್ಲಿ ಜೊತೆ ಮೋದಿ ಸಭೆ ಸೇರಿದಂತೆ ಏಪ್ರಿಲ್ 3ರ ಟಾಪ್ 10 ಸುದ್ದಿ ಇಲ್ಲಿವೆ.
21 ದಿನದ ಲಾಕ್‌ಔಟ್ ನಂತರ ಮುಂದೇನು? ಮೋದಿ ಮುಂದಿನ ಅಸ್ತ್ರವೇನು?...
ಲಾಕ್‌ಡೌನ್‌ಗಿಂತ ಮೊದಲು ರಾತ್ರಿ 1 ಗಂಟೆಗೆ ಇಬ್ಬರು ಸಚಿವರು ಮತ್ತು ಇಬ್ಬರು ಕಾರ್ಯದರ್ಶಿಗಳಿಗೆ ಸ್ವತಃ ಮೋದಿ ಫೋನ್ ಮಾಡಿ, ದಿಲ್ಲಿ ವಿಮಾನ ನಿಲ್ದಾಣದಲ್ಲಿ ಸರಿಯಾಗಿ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ನಡೆಸುತ್ತಿಲ್ಲ ಎಂದು ಝಾಡಿಸಿದರಂತೆ. ಕೂಡಲೇ ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯ ತರಿಸಿಕೊಂಡು ಸ್ವತಃ ನೋಡಿ ಕೆಲವೊಂದಿಷ್ಟುನಿರ್ದೇಶನ ಕೊಟ್ಟನಂತರವೇ ಮಲಗಲು ಹೋದರಂತೆ.
ಲಾಕ್‌ಡೌನ್ ಉಲ್ಲಂಘನೆ: ಬೀದಿಗೆ ಬಂದ ಮೂವರಿಗೆ ಜೈಲು
ಬಾರಾಮತಿ ನಗರದಲ್ಲಿ ಅನಾವಶ್ಯಕವಾಗಿ ಸುತ್ತಾಡುತ್ತಿದ್ದ ಕಾರಣಕ್ಕೆ ಮೂವರ ವಿರುದ್ಧ ಐಪಿಸಿ ಸೆಕ್ಷನ್ 188ರ ಪ್ರಕಾರ ಕೇಸು ದಾಖಸಿಕೊಳ್ಳಲಾಗಿದೆ. ನಿಯಮ ಉಲ್ಲಂಘನೆಗೆ ಜೈಲು ಶಿಕ್ಷೆ ವಿಧಿಸಿದ್ದು ಇದೇ ಮೊದಲು.
ನೆರವು ಕೇಳಿದವನ ಮನೆಗೆ 2 ಗಂಟೇಲಿ ಅಕ್ಕಿ ಕಳುಹಿಸಿದ ಪ್ರಧಾನಿ ಮೋದಿ
ಲಾಕ್‌ಡೌನ್ ವೇಳೆ ಒಂದೊತ್ತಿನ ಊಟಕ್ಕೂ ಇಲ್ಲದೆ ಸಂಕಷ್ಟಕ್ಕೀಡಾಗಿದ್ದ ಯುವಕನೊಬ್ಬನಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯಸ್ಥಿಕೆ ಪರಿಣಾಮ ಅಕ್ಕಿ ಪೂರೈಕೆಯಾದ ಅಚ್ಚರಿಯ ಘಟನೆ ಕೇರಳದಲ್ಲಿ ನಡೆದಿದೆ.
ಇನ್ನೆರಡು ವಾರದಲ್ಲಿ 10,000 ಮಂದಿಗೆ ಕೊರೋನಾ ವೈರಸ್?
ಭಾರತದಲ್ಲಿ ಕೊರೋನಾ ವೈರಸ್ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಸಾಗುತ್ತಿದೆ. ಇದೇ ರೀತಿ ಮುಂದುವರೆದರೆ ಮುಂದಿನ ಎರಡು ವಾರಗಳಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ದಾಟಲಿದೆ ಎನ್ನುತ್ತಿವೆ ವರದಿಗಳು.
ಲಕ್ಷ ಲಕ್ಷ ಹಣ ಮುಟ್ಟದೆ ಮದ್ಯದ ಬಾಟಲಿ ಮಾತ್ರ ದೋಚಿದ್ರು..! ಇದು ಸ್ವಾಮಿ ನಿಯತ್ತು..!
ಮದ್ಯಪ್ರಿಯರು ಗುರುವಾರ ಬೀದರ್ ಮತ್ತು ಗದಗದ ಲಕ್ಷಾಂತರ ಮೌಲ್ಯದ ಮದ್ಯವನ್ನು ದರೋಡೆ ಮಾಡಿದ್ದಾರೆ. ಗದಗನ ವಲಯದ ಎಂಎಸ್‌ಐಎಲ್‌ನಲ್ಲಿ ದುಬಾರಿ ಮದ್ಯ ಹಾಗೂ 1.50 ಲಕ್ಷ ಬಿಟ್ಟು ಕೇವಲ ಕಡಿಮೆ ಬೆಲೆಯ ಮದ್ಯ ಕಳವು ಮಾಡಿದ್ದಾರೆ.
ದೀಪ ಹಚ್ಚಿ ಏಕತೆಯ ಸಂದೇಶ ಸಾರಲು ಮೋದಿ ಭಾರತೀಯರಿಗೆ ಕರೆ!
ಕೊರೋನಾ ವೈರಸ್ ತಡೆಯಲು ನಾವೆಲ್ಲಾ ಒಂದಾಗೋಣ. ಏಪ್ರಿಲ್ 5ರಂದು ರಾತ್ರಿ 9 ಗಂಟೆಗೆ ಮನೆಯ ಲೈಟ್ ಆರಿಸಿ 9 ನಿಮಿಷಗಳ ಕಾಲ ದೀಪ ಹಚ್ಚಿ, ಬೆಳಕಿನಿನ ಶಕ್ತಿ ಏನೆಂದು ತೋರಿಸೋಣ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದೀಪ ಬೆಳಗಿಸಿ ಭಾರತ ಗೆಲ್ಲಿಸಿ ಎಂದು ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಸಚಿನ್, ಕೊಹ್ಲಿ ಸೇರಿ 40 ಕ್ರೀಡಾಪಟುಗಳ ಜೊತೆ ಪ್ರಧಾನಿ ಮೋದಿ ಮಹತ್ವದ ಸಭೆ!...
ಕೊರೋನಾ ವೈರಸ್ ಹರಡದಂತೆ ತಡೆಯಲು ಕೇಂದ್ರ ಸರ್ಕಾರ ಹೆಚ್ಚಿನ ಶ್ರಮ ವಹಿಸುತ್ತಿದೆ. ಇಂದು(ಏ.03) ಪ್ರಧಾನಿ ಮೋದಿ ದೇಶದ ಜನತೆಯಲ್ಲಿ ಮತ್ತೊಂದು ಕರೆ ನೀಡುವ ಮೂಲಕ ಸಂಘಟಿತ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದ್ದಾರೆ. ದೇಶದ ಜನತೆಗೆ ಸಂದೇಶ ನೀಡಿದ ಬಳಿಕ ಮೋದಿ, ನೇರವಾಗಿ ಭಾರತ ದಿಗ್ಗಜ ಹಾಗೂ ಪ್ರಮುಖ ಕ್ರೀಡಾಪಟುಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಪಿವಿ ಸಿಂಧು ಸೇರಿದಂತೆ 40 ಕ್ರೀಡಾಪಟುಗಳ ಜೊತೆ ಮೋದಿ ಚರ್ಚಿಸಿದ ವಿಷವೇನು? ಇಲ್ಲಿದೆ.
ಅನು ಬದುಕೇ ಬದಲಿಸಿದ 'ಜೊತೆ ಜೊತೆಯಲಿ';ಹೇಗಿದ್ದ ಲೈಫ್ ಹೇಗಾಯ್ತು ನೋಡಿ!...
ಹೆಸರಿಗೆ ಇದು ಕಿರುತೆರೆ. ಆದರೆ, ಇಲ್ಲಿ ಪಾತ್ರ ಮಾಡುವವರು ಯಾರಿಗೂ ಕಮ್ಮಿ ಇಲ್ಲದಂತೆ ದೊಡ್ಡ ತಾರೆಗಳಾಗಿ ಮಿಂಚುತ್ತಿದ್ದಾರೆ. ಮನೆ ಮನೆಗೆ ತಲುಪುತ್ತಿರುವ ಈ ಬಿಗ್ ಸ್ಟಾರ್‌ಗಳಿಗೆ ಈ ಪುಟ್ಟಪರದೆಯೇ ಭರವಸೆಯ ಬೆಳಕು. ಹೀಗೆ ಪ್ರೇಕ್ಷಕರ ಮನೆ ಮನದಲ್ಲೂ ಮಿಂಚುತ್ತಿರುವ ಕಿರುತೆರೆಯ ತಾರೆಗಳ ಪುಟ್ಟಪರಿಚಯವನ್ನು ಅವರ ಮಾತುಗಳಲ್ಲೇ ಕೇಳಿ.
ರಾಮಾಯಣ ಮತ್ತೊಮ್ಮೆ ಸೂಪರ್‌ಹಿಟ್: ಭರ್ಜರಿ 17 ಕೋಟಿ ವೀಕ್ಷಕರು!
ಕೊರೋನಾ ಲಾಕ್‌ಡೌನ್‌ನ ಜನರ ಬೇಸರ ತಣಿಸಲು ಪುನಃ ಪ್ರಸಾರ ಮಾಡಲಾಗುತ್ತಿರುವ 3 ದಶಕಗಳ ಹಿಂದಿನ ಪೌರಾಣಿಕ ರಾಮಾಯಣ ಧಾರಾವಾಹಿಯು ಮತ್ತೊಮ್ಮೆ ಸೂಪರ್‌ಹಿಟ್ ಆಗಿದೆ. ಕಳೆದ ಶನಿವಾರ ಮತ್ತು ಭಾನುವಾರ ಪ್ರಸಾರವಾದ ಒಟ್ಟು 4 ಎಪಿಸೋಡ್‌ಗಳನ್ನು ಭರ್ಜರಿ 17 ಕೋಟಿ ಜನ ವೀಕ್ಷಿಸಿದ್ದಾರೆ.
ದೇಶಕ್ಕೆ ಕೊರೊನಾ ಐಲ್ಯಾಂಡ್ ಆಯ್ತು ದೆಹಲಿ ಮಾರ್ಕಜ್ ಮಸೀದಿ?...
ದೇಶಕ್ಕೆ ಕೊರೋನಾ ಐಲ್ಯಾಂಡ್ ಆಯ್ತು ದೆಹಲಿಯ ಮಾರ್ಕಜ್ ಮಸೀದಿ. ತಬ್ಲಿಘಿ ಜಮಾತ್‌ನಲ್ಲಿ ಭಾಗಿಯಾಗಿದ್ದ 558 ಜನರಿಗೆ ಕೊರೋನಾ ಪಾಸಿಟೀವ್ ಬಂದಿದೆ. ದೇಶದ ಶೇ. 27 ರಷ್ಟು ಕೊರೋನಾ ಸೋಂಕಿತರಿಗೆ ತಬ್ಲಿಘೀ ಜಮಾತ್ ನಂಟಿರುವುದಾಗಿ ತಿಳಿದು ಬಂದಿದೆ. ಈ ಸಭೆಯಲ್ಲಿ ಭಾಗಿಯಾಗಿದ್ದ 1 ಸಾವಿರ ವಿದೇಶಿಯರ ವೀಸಾ ರದ್ದಾಗಿದೆ. ದಿನೇ ದಿನೇ ಆತಂಕಕಾರಿ ವಿಚಾರಗಳು ಹೊರ ಬರುತ್ತಿವೆ. ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿವೆ ನೋಡಿ!