ಗಲಭೆ ‘ಸಂತ್ರಸ್ತ್ರನಾಗಲು ಚೂರಿ ಇರಿತದ ಕತೆ ಕಟ್ಟಿದ!

Published : Jul 17, 2017, 06:33 PM ISTUpdated : Apr 11, 2018, 12:53 PM IST
ಗಲಭೆ ‘ಸಂತ್ರಸ್ತ್ರನಾಗಲು ಚೂರಿ ಇರಿತದ ಕತೆ ಕಟ್ಟಿದ!

ಸಾರಾಂಶ

ಬಂಟ್ವಾಳದ ಶರತ್ ಕೊಲೆಯ ಶವಯಾತ್ರೆಯಲ್ಲಿ ನಡೆದ ಅಹಿತಕರ ಘಟನೆಗಳ ಬಳಿಕ ಜಿಲ್ಲೆಯಲ್ಲಿ ಪರಿಸ್ಥಿತಿ ಉದ್ವಿಗ್ನತೆಯಿಂದ ಕೂಡಿತ್ತು. ಈ ಸಮಯದ ಲಾಭ ಪಡೆದು, ‘ಸಂತ್ರಸ್ತ’ನಾಗಲು ಹವಣಿಸಿದ ಕುಪ್ಪೆಪದವು ನಿವಾಸಿಯೊಬ್ಬ, ಎಡಪದವು ಎಂಬಲ್ಲಿ ಸಂಜೆ 7 ಗಂಟೆ ಹೊತ್ತಿಗೆ ಬೈಕಿನಲ್ಲಿ ಬಂದ ಅನ್ಯಕೋಮಿನವರು ತನ್ನ ಮೇಲೆ ಹಲ್ಲೆ ನಡೆಸಿ, ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ ಎಂದು ಬಜಪೆ ಠಾಣೆಗೆ ದೂರು ನೀಡಿದ್ದ.

ಮಂಗಳೂರು(ಜು.17): ಕೋಮುಗಲಭೆ ಪರಿಸ್ಥಿತಿಯ ಲಾಭ ಪಡೆದು, ಸಂತ್ರಸ್ತನೆಂದು ಬಿಂಬಿಸಿಕೊಳ್ಳಲು ವ್ಯಕ್ತಿಯೊಬ್ಬ ಚೂರಿ ಇರಿತ ಪ್ರಕರಣದ ಕಟ್ಟುಕತೆ ಕಟ್ಟಿದ ಸಂಗತಿ ಪೊಲೀಸ್ತನಿಖೆಯಿಂದ ಬೆಳಕಿಗೆ ಬಂದಿದೆ.

ಸುರತ್ಕಲ್ನ ಕುಪ್ಪೆ ಪದವು ನಿವಾಸಿಯೊಬ್ಬ ತನಗೆಅನ್ಯಕೋಮಿನ ಗುಂಪೊಂದು ದಾಳಿ ನಡೆಸಿ ಚೂರಿಯಿಂದ ಇರಿದು ಗಾಯಗೊಳಿಸಿರುವುದಾಗಿ ಜು.10ರಂದು ಬಜಪೆ ಠಾಣೆಗೆ ದೂರು ನೀಡಿದ್ದ. ಅದು ಆತನೇ ಸ್ವತಃ ಬ್ಲೇಡಿನಿಂದ ಕೈ,ಮುಖಗಳನ್ನು ಕುಯ್ದುಕೊಂಡು ಸೃಷ್ಟಿಸಿದ ಹೈಡ್ರಾಮಾ ಎಂದು ವಿಚಾರಣೆ ನಡೆಸಿದ ಪೊಲೀಸರು ತಿಳಿಸಿದ್ದಾರೆ. ಬಂಟ್ವಾಳದ ಶರತ್ ಕೊಲೆಯ ಶವಯಾತ್ರೆಯಲ್ಲಿ ನಡೆದ ಅಹಿತಕರ ಘಟನೆಗಳ ಬಳಿಕ ಜಿಲ್ಲೆಯಲ್ಲಿ ಪರಿಸ್ಥಿತಿ ಉದ್ವಿಗ್ನತೆಯಿಂದ ಕೂಡಿತ್ತು. ಈ ಸಮಯದ ಲಾಭ ಪಡೆದು, ‘ಸಂತ್ರಸ್ತ’ನಾಗಲು ಹವಣಿಸಿದ ಕುಪ್ಪೆಪದವು ನಿವಾಸಿಯೊಬ್ಬ, ಎಡಪದವು ಎಂಬಲ್ಲಿ ಸಂಜೆ 7 ಗಂಟೆ ಹೊತ್ತಿಗೆ ಬೈಕಿನಲ್ಲಿ ಬಂದ ಅನ್ಯಕೋಮಿನವರು ತನ್ನ ಮೇಲೆ ಹಲ್ಲೆ ನಡೆಸಿ, ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ ಎಂದು ಬಜಪೆ ಠಾಣೆಗೆ ದೂರು ನೀಡಿದ್ದ.

ವಿಚಾರಣೆ ವೇಳೆ ಭಿನ್ನ ಹೇಳಿಕೆಗಳನ್ನು ನೀಡಿದ ಕಾರಣ ಸಂಶಯಗೊಂಡ ಪೊಲೀಸರು ಆತನನ್ನು ಇನ್ನಷ್ಟು ತನಿಖೆ ನಡೆಸಿದಾಗ ನೈಜ ಪ್ರಕರಣ ಬಯಲಿಗೆ ಬಂದಿದೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳದ ಬಗ್ಗೆಯೂ ದ್ವಂದ್ವ ಹೇಳಿಕೆ ನೀಡಿದ ಈತ, ದಾಳಿಕೋರರು ಬೈಕಿನಲ್ಲಿ ಬಂದವರು ಎಂದು ಒಮ್ಮೆ ತಿಳಿಸಿದ್ದರೆ, ಮತ್ತೊಮ್ಮೆ ಗುಂಪೊಂದು ಬಂದು ದಾಳಿ ಮಾಡಿತು ಎಂದು ತಿಳಿಸಿದ್ದ. ಡಿಜಿಪಿ ಆರ್.ಕೆ.ದತ್ತಾ ಅವರು ಈ ಪ್ರಕರಣವನ್ನು ಭೇದಿಸಿದ ಬಜಪೆ ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್ ನೇತೃತ್ವದ ತಂಡಕ್ಕೆ ನಗದು ಬಹುಮಾನ ಘೋಷಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಂಪನಿ ಮಾರಾಟವಾದರೆ ನಿಯತ್ತಾಗಿ ದುಡಿದ ಉದ್ಯೋಗಿಗಳ ಪಾಡೇನು? ಮಾದರಿಯಾದ ಬಿಗ್ ಬಾಸ್
MNREGA Row: ಕಾಂಗ್ರೆಸ್‌ಗೆ ಯಾವುದೇ ನೀತಿ ಇಲ್ಲ, ಗದ್ದಲ ಕೇವಲ ರಾಜಕೀಯ: ಶಿವರಾಜ್ ಸಿಂಗ್ ಚೌಹಾಣ್ ಕಿಡಿ